ಹುಬ್ಬಳ್ಳಿ: ಕೋವಿಡ್ ಸಂಕಷ್ಟದಿಂದ ಜಿಲ್ಲೆಯ ಸರಕಾರಿ ಶಾಲೆಗಳಲ್ಲಿ ಪ್ರವೇಶಾತಿ ಹೆಚ್ಚಾಗಿದೆ.ಇದೀಗ ಕೋವಿಡ್ ಎರಡನೇ ಅಲೆಗೆ ಶಾಲೆಗಳು ಆರಂಭವಾಗುವ ನಿರೀಕ್ಷೆ ತಲೆಕೆಳಗಾಗಿಸಿದ್ದು,2021-22ನೇ ಶೈಕ್ಷಣಿಕ ವರ್ಷದಲ್ಲಿ ಹೆಚ್ಚಿನಸಂಖ್ಯೆಯಲ್ಲಿ ಸರಕಾರಿ ಶಾಲೆಗಳತ್ತ ಮುಖಮಾಡಲಿದ್ದಾರೆ ಎನ್ನುವ ನಿರೀಕ್ಷೆ ಮೂಡಿಸಿದೆ.
ಜಿಲ್ಲೆಯ ಕಳೆದ ಐದು ವರ್ಷಗಳಲ್ಲಿ ಸರಕಾರಿಶಾಲೆಗಳಿಗೆ ವಿದ್ಯಾರ್ಥಿಗಳ ಪ್ರವೇಶಾತಿಯಪ್ರಮಾಣ ಪರಿಶೀಲಿಸಿದಾಗ 2020-21 ಕೋವಿಡ್ ಶೈಕ್ಷಣಿಕ ವರ್ಷದಲ್ಲಿ 1ರಿಂದ 10ತರಗತಿಯವರೆಗೆ ವಿದ್ಯಾರ್ಥಿಗಳ ಪ್ರವೇಶದಲ್ಲಿ ಹೆಚ್ಚಳವಾಗಿದೆ. ಪ್ರತಿ ವರ್ಷದ ಸುಮಾರು 4-5ಸಾವಿರ ವಿದ್ಯಾರ್ಥಿಗಳ ಪ್ರವೇಶಾತಿ ಕೊರತೆಇರುತ್ತಿತ್ತು. ಕಳೆದ ವರ್ಷ 1,38,946 ಪ್ರಸಕ್ತ ವರ್ಷ 1,43,569 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.ಈ ಶೈಕ್ಷಣಿಕ ವರ್ಷದಲ್ಲಿ 4623(ಶೇ.3.22) ವಿದ್ಯಾರ್ಥಿಗಳು ಹೆಚ್ಚಾಗಿದ್ದಾರೆ. ಇದಕ್ಕೆ ಕೋವಿಡ್-19 ಕಾರಣವಾಗಿದ್ದು, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಎನ್ನುವುದು ಶಿಕ್ಷಣ ಇಲಾಖೆ ಅಧಿಕಾರಿಗಳ ಹಾಗೂ ಶಿಕ್ಷಕರ ಅಭಿಪ್ರಾಯವಾಗಿದೆ.
ಕೋವಿಡ್-19 ಪರಿಣಾಮ ವಿದ್ಯಾರ್ಥಿಗಳುಅಕ್ಷರದ ಜ್ಞಾನದಿಂದ ದೂರುಳಿಯಬಾರದೆನ್ನುವಕಾರಣಕ್ಕೆ ಆನ್‌ಲೈನ್, ಆಫ್‌ಲೈನ್ ತರಗತಿಗಳು ನಡೆಯುತ್ತಿವೆ. ಇದರಿಂದ ಮಕ್ಕಳಲ್ಲಿ ಮೊಬೈಲ್‌ಗೀಳು ಹೆಚ್ಚುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.ಸರಕಾರ ಹಾಗೂ ಖಾಸಗಿ ಶಾಲೆಗಳಲ್ಲಿ ಒಂದೇ ಮಾದರಿಯ ಶಿಕ್ಷಣ ಇರುವಾಗ ಖಾಸಗಿ ಶಾಲೆಯಾಕೆ ಎನ್ನುವ ಮನಸ್ಥಿತಿ ಪಾಲಕರಲ್ಲಿ ಮೂಡಿಸಿದೆ. ಮಕ್ಕಳನ್ನು ಶಾಲೆಗೆ ಕಳುಹಿಸದೆ ಶುಲ್ಕ ಯಾಕೆ ತುಂಬಬೇಕು ಎನ್ನುವ ಮಧ್ಯಮ-ಬಡ ವರ್ಗದಜನರು ಸರಕಾರಿ ಶಾಲೆಗಳನ್ನು ನೆಚ್ಚಿಕೊಳ್ಳಲು ಪ್ರಮುಖ ಕಾರಣವಾಗಿದೆ.
ಹೆಚ್ಚಾಗಲು ಕಾರಣ: ಬಡ ವಿದ್ಯಾರ್ಥಿಗಳ ಆಶಾಕಿರಣ ವಿದ್ಯಾಗಮ, ಇದರೊಂದಿಗೆ ಬಿಸಿಯೂಟದ ಬದಲಾಗಿದೆ ಒಂದಿಷ್ಟು ರೇಷನ್ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ದೊರೆಯುತ್ತಿದೆ. ಪರಿಣಾಮ ಕಾರಿಯಾದ ವಿದ್ಯಾಗಮದೊಂದಿಗೆ ಆನ್‌ಲೈನ್, ಆಫ್‌ಲೈನ್‌ಹೊರತಾಗಿ ಪಾಲಕರೊಂದಿಗೆ ಶಾಲೆಗೆ ಆಗಮಿಸಿಶಿಕ್ಷಕರನ್ನು ಭೇಟಿಯಾಗಿ ಹೋಮ್‌ವರ್ಕ್ ಸೇರಿದಂತೆ ಕಲಿಕೆಗೆ ಪೂರಕವಾದ ಮಾಹಿತಿ ಪಡೆಯುವ ಕೆಲಸ ನಡೆಯುತ್ತಿದೆ. ಸ್ಮಾಟ್ ಫೋನ್, ಲ್ಯಾಪ್‌ಟಾಪ್ ಅದಕ್ಕೆ ಇಂಟರ್‌ನೆಟ್‌ಹೀಗೆ ಯಾವುದೇ ಖರ್ಚುಗಳು ಇಲ್ಲಿಲ್ಲ. ಆನ್‌ಲೈನ್‌ಶಿಕ್ಷಣಕ್ಕೆ ಹೆಚ್ಚುವರಿ ಶುಲ್ಕದ ಭಾರವಿಲ್ಲ. ಕಲಿಸಲುಮನೆಯಲ್ಲಿ ಒಬ್ಬರು ಬೇಕೆಂತಿಲ್ಲ. ಹೀಗಾಗಿ ಸರಕಾರಿಶಾಲೆಯಿಂದ ಇಷ್ಟೆಲ್ಲಾ ಅನುಕೂಲತೆಗಳನ್ನು ಪಾಲಕರು ಗಮನಿಸಿದ್ದಾರೆ.
ಹೆಚ್ಚಳದ ನಿರೀಕ್ಷೆ: 2020-21 ನೇ ಸಾಲಿನ ಶೈಕ್ಷಣಿಕ ವರ್ಷದ ಸ್ಥಿತಿಗತಿ ನೋಡಿದಾಗ ಕೆಲವರಲ್ಲಿ ಖಾಸಗಿಶಾಲೆಗಳ ಮೇಲಿನ ವ್ಯಾಮೋಹ ಕಡಿಮೆಯಾಗಿದೆ.ಮುಂದಿನ ವರ್ಷವೂ ಇದೇ ರೀತಿಯಾದರೆದುಬಾರಿ ಶುಲ್ಕ, ಹೊಸ ಪ್ರವೇಶಕ್ಕೆ ಕೈಗೆಟುಕದಡೊನೇಶನ್, ಸಮವಸ್ತ್ರ, ಪಠ್ಯ ಸಾಮಗ್ರಿ, ವಾಹನಶುಲ್ಕ ಇನ್ನಿತರೆ ಶುಲ್ಕ ಪಾವತಿಸುವುದರಲ್ಲಿ ಯಾವುದೇಅರ್ಥವಿಲ್ಲ ಎನ್ನುವ ಭಾವನೆ ಪಾಲಕರಲ್ಲಿ ಮೂಡಿದೆ.ಖಾಸಗಿ ಶಾಲೆಯಲ್ಲಿ ದೊರೆಯುವ ಈ ಎಲ್ಲಾಸೌಲಭ್ಯಗಳು ಉಚಿತವಾಗಿ ಸರಕಾರಿ ಶಾಲೆಗಳಲ್ಲಿದೊರೆಯಲಿದೆ. ಶಾಲೆಗೆ ಕಳುಹಿಸಿದೆ ಯಾಕೆ ಶುಲ್ಕಪಾವತಿಸಬೇಕೆನ್ನುವ ಭಾವನೆ ಮೂಡಿದೆ. ಹೀಗಾಗಿಮುಂದಿನ ಶೈಕ್ಷಣಿಕ ವರ್ಷದಲ್ಲಿ ಸುಮಾರು ಶೇ.6-7 ಪ್ರವೇಶಾತಿ ಹೆಚ್ಚಳವಾಗಲಿದೆ ಎನ್ನುವ ನಿರೀಕ್ಷೆ ಅಧಿಕಾರಿಗಳಲ್ಲಿದೆ.
ಪೂರಕ ವ್ಯವಸ್ಥೆಗೆ ಪ್ರಸ್ತಾವನೆ: ಸರಕಾರಿ ಶಾಲೆಗಳ ಮೌಲ್ಯ ಹೆಚ್ಚುತ್ತಿರುವ ಸಂದರ್ಭದಲ್ಲಿ ಇದಕ್ಕೆ ಪೂರಕವಾಗಿ ಶಿಕ್ಷಣ ಇಲಾಖೆ ಒಂದೆಜ್ಜೆಮುಂದಿಟ್ಟಿದ್ದಾರೆ. ಈ ನಿಟ್ಟಿನಲ್ಲಿ ಮುಂದಿನ ಶೈಕ್ಷಣಿಕವರ್ಷಕ್ಕೆ 8 ಕರ್ನಾಟಕ ಪಬ್ಲಿಕ್, 2 ಆದರ್ಶ ಶಾಲೆಗಳಆರಂಭಿಸುವ ಕುರಿತು ಸರಕಾರಕ್ಕೆ ಕ್ರಿಯಾಯೋಜನೆ ಸಲ್ಲಿಸಲಾಗಿದೆ. ಸರಕಾರ ಪ್ರಸ್ತಾವನೆ ಪುರಸ್ಕರಿಸಿದರೆ18 ಶಾಲೆಗಳಲ್ಲಿ ಪೂರ್ವ ಪ್ರಾಥಮಿಕದಿಂದ ಆಂಗ್ಲ ಮಾಧ್ಯಮ ಶಿಕ್ಷಣ ದೊರೆಯಲಿದೆ. ಬೇಡಿಕೆ ಹಾಗೂ ಯೋಜನೆ ಯಶಸ್ವಿಯಾಗುವ ಶಾಲೆಗಳನ್ನು ಗುರುತಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ.
ಕೋವಿಡ್-19 ಪರಿಣಾಮ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಹೆಚ್ಚಾಗಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿಇದು ಹೆಚ್ಚಾಗುವ ಸಾಧ್ಯತೆಯಿದೆ. ಇದಕ್ಕೆ ಪೂರಕವಾಗಿ ಇಲಾಖೆಯಿಂದ ಹಲವು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಪ್ರವೇಶಾತಿ ಹೆಚ್ಚಿಸುವಲ್ಲಿ ಅಧಿಕಾರಿಗಳು,ಶಿಕ್ಷಕರು ಮನೆ ಮನೆ ಭೇಟಿ ನೀಡುತ್ತಿದ್ದಾರೆ. –
ಎಸ್.ಎಂ.ಹುಡೇದಮನಿ,ಉಪ ಯೋಜನಾ ಸಮನ್ವಯಾಧಿಕಾರಿ(ಆರ್‌ಎಂಎಸ್‌ಎ), ಶಿಕ್ಷಣ ಇಲಾಖೆ
ಸರಕಾರಿ ಶಾಲೆಗಳಲ್ಲಿ ವಿದ್ಯಾಗಮದಮೂಲಕ ತಳಮಟ್ಟದಲ್ಲಿಕಲಿಕೆಯಿದೆ. ವಿವಿಧ ಮೂಲಗಳನ್ನು ಬಳಸಿಕೊಂಡು ನಮ್ಮ ವಿದ್ಯಾರ್ಥಿಗಳಿಗೆಪಾಠ ಮಾಡುತ್ತಿದ್ದೇವೆ. ಮನೆಯಲ್ಲಿಫೋನ್ ಇಲ್ಲದಿದ್ದರೂ ಪಕ್ಕದವರಮನೆಯವರಿಂದ ಹೋಮ್ ವರ್ಕ್‌ಕಳುಹಿಸುತ್ತಿದ್ದಾರೆ. ತಮ್ಮ ಪಾಲಕರ ಮೂಲ ಹೋಮ್‌ವರ್ಕ್ ಕಳುಹಿಸುವ ವಿದ್ಯಾರ್ಥಿಗಳು ಇದ್ದಾರೆ. –
ಅಶೋಕ ಸಜ್ಜನ, ಶಿಕ್ಷಕರು
-ಹೇಮರಡ್ಡಿ ಸೈದಾಪುರ