Advertisement

Exit Poll: ಕರ್ನಾಟಕದಲ್ಲಿ ‘ಮೈತ್ರಿ’ಗೆ ಮುಖಭಂಗ ;; ಬಿಜೆಪಿ ಕಿಂಗ್

09:31 AM May 20, 2019 | Team Udayavani |

ಬೆಂಗಳೂರು: ಲೋಕಸಭಾ ಚುನಾವಣೆಯ ಏಳನೇ ಹಂತದ ಮತದಾನ ಇಂದು ಮುಕ್ತಾಯಗೊಂಡಿದೆ. ಇದರ ಬೆನ್ನಲ್ಲೇ ವಿವಿಧ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿದೆ. ಇವುಗಳಲ್ಲಿ ಬಹುತೇಕ ಸಮೀಕ್ಷೆಗಳ ಪ್ರಕಾರ ಕೇಂದ್ರದಲ್ಲಿ ಮತ್ತೆ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟವು ಸರಕಾರ ರಚಿಸುವುದು ಖಚಿತವಾಗಿದೆ.

Advertisement

ಇನ್ನು ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಪಕ್ಷಗಳು 11-07 ಮಾದರಿಯಲ್ಲಿ ಸೀಟು ಹಂಚಿಕೆ ಮಾಡಿಕೊಂಡು ಸ್ಪರ್ಧಿಸಿದ್ದವು. ಬಿಜೆಪಿ ಎಲ್ಲಾ 28 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.

ಸಮೀಕ್ಷೆಗಳ ಪ್ರಕಾರ ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷವು ಕಾಂಗ್ರೆಸ್ ಜೆಡಿಎಸ್ ಮೈತ್ರಿಕೂಟಕ್ಕೆ ಆಘಾತ ನೀಡಲಿದೆ ಎಂದು ತಿಳಿದುಬಂದಿದೆ.

ವಿವಿಧ ಸಮೀಕ್ಷೆಗಳ ಪ್ರಕಾರ ಕರ್ನಾಟಕದ ಸ್ಥಿತಿಗತಿ ಹೀಗಿದೆ:

ಟುಡೇಸ್ ಚಾಣಕ್ಯ: BJP – 23 ; Congres 3-5 ; JDS – 02 ಮತ್ತು ಇತರರು – 00

Advertisement

ನ್ಯೂಸ್ ನೇಷನ್ ಸಮೀಕ್ಷೆ : BJP – 17-19 ; Congres 09- 11 ; JDS – 00 ಮತ್ತು ಇತರರು – 00

ಟೈಮ್ಸ್ ನೌ ಸಮೀಕ್ಷೆಯ ಪ್ರಕಾರ: BJP – 21 ; Congres-  07 ; JDS – 00 ಮತ್ತು ಇತರರು – 00

ಸಿ-ವೋಟರ್ ಸಮೀಕ್ಷೆ : BJP – 18 ; Congres – 07 ; JDS – 02 ಮತ್ತು ಇತರರು – 01

ಇಂಡಿಯಾ ಟುಡೇ : BJP – 21-25 ; Congres – 03 -06 ; JDS – 01- 03 ಮತ್ತು ಇತರರು – 00 – 01

ಇಂಡಿಯಾ ಟಿ.ವಿ. : BJP – 17 ; Congres – 08 ; JDS – 03 ಮತ್ತು ಇತರರು – 00

Advertisement

Udayavani is now on Telegram. Click here to join our channel and stay updated with the latest news.

Next