Advertisement

ಇಹಲೋಕ ತ್ಯಜಿಸಿದ ಮಾಜಿ ಕ್ರಿಕೆಟಿಗ ಸಲೀಂ ದುರಾನಿ

04:38 PM Apr 02, 2023 | Team Udayavani |

ಅಹಮದಾಬಾದ್: 1960 ರ ದಶಕದ ಭಾರತದ ಕ್ರಿಕೆಟಿಗ ಸಲೀಂ ದುರಾನಿ ಅವರು ಭಾನುವಾರ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು. ಅವರ ನಿಧನವನ್ನು ಕುಟುಂಬದ ಆಪ್ತ ಮೂಲಗಳು ಖಚಿತಪಡಿಸಿವೆ.

Advertisement

ಅವರು ತಮ್ಮ ಕಿರಿಯ ಸಹೋದರ ಜಹಾಂಗೀರ್ ದುರಾನಿಯೊಂದಿಗೆ ಗುಜರಾತ್‌ನ ಜಾಮ್‌ ನಗರದಲ್ಲಿ ವಾಸಿಸುತ್ತಿದ್ದರು. ಈ ವರ್ಷದ ಜನವರಿಯಲ್ಲಿ ತೊಡೆಯ ಮೂಳೆ ಮುರಿತಕ್ಕೆ ಒಳಗಾಗಿದ್ದ ನಂತರ ದುರಾನಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಕಾಬೂಲ್ ಮೂಲದ ದುರಾನಿ ಅವರು ತಮ್ಮ ಬ್ಯಾಟ್‌ ನಿಂದ ಹೆಸರು ಮಾಡಿದ್ದವರು. ಅಲ್ಲದೆ ಎಡಗೈ ಬೌಲರ್ ಕೂಡ ಆಗಿದ್ದರು. ಭಾರತದ ಪರ ಅವರು 29 ಟೆಸ್ಟ್‌ಗಳನ್ನು ಆಡಿದ್ದರು. 1961-62 ರಲ್ಲಿ ಐತಿಹಾಸಿಕ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತವು 2-0 ಅಂತರದಲ್ಲಿ ಇಂಗ್ಲೆಂಡ್ ಅನ್ನು ಸೋಲಿಸುವಲ್ಲಿ ದುರಾನಿ ಪ್ರಮುಖ ಪಾತ್ರ ವಹಿಸಿದ್ದರು. ಕಲ್ಕತ್ತಾ ಮತ್ತು ಮದ್ರಾಸ್‌ ನಲ್ಲಿ ತಂಡದ ಗೆಲುವಿನಲ್ಲಿ ದುರಾಣಿ ಎಂಟು ಮತ್ತು 10 ವಿಕೆಟ್‌ಗಳನ್ನು ಪಡೆದಿದ್ದರು.

ತಮ್ಮ ಉತ್ತಮ ಡ್ರೆಸ್ಸಿಂಗ್ ಶೈಲಿ ಮತ್ತು ಸ್ವಾಗ್ ಗೆ ಹೆಸರುವಾಸಿಯಾದ ದುರಾನಿ ಅವರು ಕೇವಲ ಒಂದು ಶತಕವನ್ನು ಗಳಿಸಿದ್ದರು, ಆದರೆ ಅವರು ಏಳು ಅರ್ಧಶತಕಗಳನ್ನು ಗಳಿಸಿದರು. 50 ಇನ್ನಿಂಗ್ಸ್‌ಗಳಲ್ಲಿ ಅವರು 1,202 ರನ್ ಗಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next