Advertisement

“ನಾಡಿನ ಪ್ರತಿಯೊಬ್ಬರೂ ಅನ್ಯಭಾಷಿಕರಿಗೆ ಕನ್ನಡ ಕಲಿಸಿ’

11:47 AM Jan 21, 2017 | |

ಕೆ.ಆರ್‌.ಪುರ: ಅನ್ಯಭಾಷಿಕರಿಗೆ ಕನ್ನಡ ಕಲಿಸುವ ಕಾರ್ಯವನ್ನು ನಾಡಿನ ಪ್ರತಿಯೊಬ್ಬರೂ ಮಾಡಬೇಕೆಂದು ಕೆ.ಆರ್‌.ಪುರ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಕೆ.ಕೃಷ್ಣಮೂರ್ತಿ ಕರೆ ನೀಡಿದರು. ಕನಕ ನಗರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಹಮ್ಮಿಕೊಂಡಿದ್ದ ಶಾಲಾ ಮಕ್ಕಳಿಗೆ ಪುಸ್ತಕ ಮತ್ತು ಪೌರಕಾರ್ಮಿಕರಿಗೆ ಸಮವಸ್ತ್ರ ವಿತರಿಸಿ ಮಾತನಾಡಿದರು.

Advertisement

ಅನ್ಯಭಾಷಿಕರಿಗೆ ಕನ್ನಡ ಕಲಿಯುವ ಅಸಕ್ತಿಯಿದೆ, ಹಾಗಾಗಿ ಅವರಿಗೆ ಕನ್ನಡ ಕಲಿಸುವ ಕಾರ್ಯವನ್ನು ನಾಡಿನ ಪ್ರಜ್ಞಾವಂತರು ಮಾಡಬೇಕು, ಅನ್ಯಭಾಷಿಕರಿಗೆ ಕನ್ನಡ ಕಲಿಸುವ ಮೂಲಕ ಕನ್ನಡ ಪ್ರೇಮ ವ್ಯಕ್ತಪಡಿಸಿಬೇಕಾಗಿದೆ. ಕನ್ನಡ ಕಲಿಯುವ ಅನ್ಯಭಾಷಿಕರಿಗೆ ಕನ್ನಡ ಕಲಿಕಾ ಕೇಂದ್ರಗಳನ್ನು ಕ್ಷೇತ್ರದಲ್ಲಿ ಸ್ಥಾಪನೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.

ಖಾಸಗಿ ಶಾಲೆಗಳಂತೆ ಸರ್ಕಾರಿ ಶಾಲೆಗಳಿಗೂ ಹೆಚ್ಚು ಮೂಲಭೂತ ಸೌರ್ಕಯಗಳನ್ನು ಒದಗಿಸಿಕೊಟ್ಟರೆ ಗುಣಮಟ್ಟ ಶಿಕ್ಷಣ ನೀಡಬಹುದು. ಈ ನಿಟ್ಟಿನಲ್ಲಿ ಶ್ರೀಮಂತರು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಅರ್ಥಿಕ ನೆರವು ನೀಡಬೇಕು. ಹೆಚ್ಚು ಜ್ಞಾನಭಿವೃದ್ಧಿಗಾಗಿ ವಿದ್ಯಾರ್ಥಿಗಳು ಪಠ್ಯಪುಸ್ತಕ ಜೊತಗೆ ಸಾಹಿತಿಗಳ ಸೇರಿದಂತೆ ಹಲವು ಮಹಾನೀಯರು ರಚನೆ ಮಾಡಿರುವ ಪುಸ್ತಕಗಳನ್ನು ಅಧ್ಯಯನ ಮಾಡಬೇಕು ಎಂದು ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್‌ ಉಪಾಧ್ಯಕ್ಷರಾದ ಜಯರಾಮ್‌, ಎಂ.ನರೇಂದ್ರ, ಕೋಶಾಧ್ಯಕ್ಷ ಆನಂದ, ಪ್ರಧಾನ ಕಾರ್ಯದರ್ಶಿ ರವಿ, ಬಾಲಕೃಷ್ಣ ಭಾಷಾ, ಉಮಾಶಂಕರ್‌, ಪ್ರಭಾಕರ, ಸತೀಶ್‌,ಲಕ್ಷ್ಮೀ ಹರೀಶ್‌, ಮುನಿರಾಜ ಹಲವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next