Advertisement

Euro Cup: ದಾಖಲೆ 4ನೇ ಪ್ರಶಸ್ತಿ ನಿರೀಕ್ಷೆಯಲ್ಲಿ ಸ್ಪೇನ್‌; ಇಂದು ಯುರೋ ಕಪ್‌ ಫೈನಲ್‌

10:49 PM Jul 13, 2024 | Team Udayavani |

ಬರ್ಲಿನ್‌: ಯುರೋ ಚಾಂಪಿಯನ್‌ಶಿಪ್‌ ಫ‌ುಟ್‌ಬಾಲ್‌ ಪ್ರಶಸ್ತಿಗಾಗಿ ರವಿವಾರ ಬಲಿಷ್ಠ ಸ್ಪೇನ್‌ ಮತ್ತು ಇಂಗ್ಲೆಂಡ್‌ ತಂಡಗಳು ಹೋರಾಡಲಿವೆ. ಸ್ಪೇನ್‌ ತಂಡವು ದಾಖಲೆ ನಾಲ್ಕನೇ ಪ್ರಶಸ್ತಿಯ ನಿರೀಕ್ಷೆಯಲ್ಲಿದೆಯಲ್ಲದೇ ಜರ್ಮನಿ ಜತೆಗಿನ ದಾಖಲೆ ಮುರಿ ಯಲು ಬಯಸುತ್ತಿದೆ. ಇದೇ ವೇಳೆ ಇಂಗ್ಲೆಂಡ್‌ ತಂಡವು 1066ರ ವಿಶ್ವಕಪ್‌ ಬಳಿಕ ಪ್ರಮುಖ ಕೂಟದ ಪ್ರಶಸ್ತಿ ಗೆಲ್ಲುವ ಗುರಿ ಇಟ್ಟುಕೊಂಡಿದೆ.

Advertisement

ಈ ಬಾರಿಯ ಕೂಟದಲ್ಲಿ ಆಡಿದ ಎಲ್ಲ 6 ಪಂದ್ಯಗಳಲ್ಲಿ ಗೆಲುವು ದಾಖಲಿಸಿರುವ ಸ್ಪೇನ್‌ ತಂಡವು ಪ್ರಶಸ್ತಿ ಜಯಿಸುವ ನೆಚ್ಚಿನ ತಂಡವಾಗಿದೆ. ಒಂದು ವೇಳೆ ಪ್ರಶಸ್ತಿ ಗೆದ್ದರೆ ತಂಡದ ಯಶಸ್ಸಿನ ಅವಧಿ ಇನ್ನಷ್ಟು ಮುಂದುವರಿಯಲಿದೆ. ಆದರೆ ಇಂಗ್ಲೆಂಡ್‌ ನಾಕೌಟ್‌ ಹಂತದ ಮೂರು ಪಂದ್ಯಗಳಲ್ಲಿ ಅದೃಷ್ಟದ ಬಲದಿಂದ ಮುನ್ನಡೆದಿತ್ತು.

ಯಮಾಲ್‌ ಹೊಸ ತಾರೆ:

ಲಾಮೈನ್‌ ಯಮಾಲ್‌ ತಂಡದ ನೂತನ ತಾರೆಯಾಗಿ ಕಾಣಿಸಿಕೊಂಡಿ ದ್ದಾರೆ. ಸೆಮಿಫೈನಲ್‌  ಪಂದ್ಯಕ್ಕಿಂತ ಮೊದಲು 3 ಗೋಲು ಹೊಡೆದಿದ್ದ 16ರ ಯಮಾಲ್‌ ಫ್ರಾನ್ಸ್‌ ವಿರುದ್ಧ ನಡೆದ ಸೆಮಿಫೈನಲ್‌ನಲ್ಲಿ ಅದ್ಭುತ ಗೋಲು ಹೊಡೆದು ಗಮನ ಸೆಳೆದಿದ್ದರು.

ಈ ಹಿಂದೆ 1964, 2008 ಮತ್ತು 2012ರಲ್ಲಿ ಯುರೋ ಕಪ್‌  ಪ್ರಶಸ್ತಿ ಗೆದ್ದಿರುವ ಸ್ಪೇನ್‌ ತಂಡವು ಈ ಬಾರಿ ಪ್ರಶಸ್ತಿ ಗೆಲ್ಲುವ ಉತ್ಸಾಹದಲ್ಲಿದೆ. 2012 ರಲ್ಲಿಯೇ ತಂಡ ಈ ಹಿಂದೆ ಪ್ರಮುಖ ಕೂಟದ ಫೈನಲಿಗೇರಿದ ಸಾಧನೆ ಮಾಡಿತಲ್ಲದೇ ಇಟಲಿ ತಂಡ ವನ್ನು 4-0 ಗೋಲುಗಳಿಂದ ಪ್ರಶಸ್ತಿ ಗೆದ್ದ ಸಂಭ್ರಮಿಸಿತ್ತು. ಇದೇ ವೇಳೆ ಇಂಗ್ಲೆಂಡ್‌ ತಂಡವು 2020ರಲ್ಲಿ ಯುರೋ ಕಪ್‌ ಕೂಟದ ಫೈನಲ್‌ನಲ್ಲಿ ಆಡಿತ್ತು. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ 2021ರಲ್ಲಿ ನಡೆದಿದ್ದ ಈ ಕೂಟದಲ್ಲಿ ಇಂಗ್ಲೆಂಡ್‌ ಪೆನಾಲ್ಟಿ ಶೂಟೌಟ್‌ನಲ್ಲಿ ಇಟಲಿಗೆ ಶರಣಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next