Advertisement

Nigar Sultana: ಬಾಂಗ್ಲಾದಿಂದ ವಿಶ್ವಕಪ್‌ ಸ್ಥಳಾಂತರ: ನಾಯಕಿ ನಿಗಾರ್‌ ಸುಲ್ತಾನಾ ಬೇಸರ

10:13 PM Aug 24, 2024 | Team Udayavani |

ಢಾಕಾ: ತವರಲ್ಲಿ ಟಿ20 ವನಿತಾ ವಿಶ್ವಕಪ್‌ ಪಂದ್ಯವನ್ನು ಆಡಲು ಸಾಧ್ಯವಾಗದೇ ಇದ್ದುದಕ್ಕೆ ಬಾಂಗ್ಲಾದೇಶ ತಂಡದ ನಾಯಕಿ ನಿಗಾರ್‌ ಸುಲ್ತಾನಾ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

Advertisement

ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ಸಂಭವಿಸಿದ ದಂಗೆಯಿಂದಾಗಿ ಈ ಪಂದ್ಯಾವಳಿ ಯುಎಇಗೆ ಸ್ಥಳಾಂತರಗೊಂಡಿತ್ತು. ಕಳೆದ ಎರಡು ದಿನಗಳಿಂದ ನಾನು ತೀವ್ರ ಬೇಸರದಲ್ಲಿದ್ದೆ. ಕೇವಲ ನನಗಷ್ಟೇ ಅಲ್ಲ, ತಂಡದ ಎಲ್ಲರಿಗೂ ತವರಲ್ಲಿ ವಿಶ್ವಕಪ್‌ ಆಡಬೇಕೆಂಬ ಮಹೋನ್ನತ ಕನಸಿತ್ತು. ನಮ್ಮ ಕುಟುಂಬದವರೂ ಇದಕ್ಕಾಗಿ ಕಾದಿದ್ದರು. ಅಭಿಮಾನಿಗಳು, ಸ್ನೇಹಿತರು ತುದಿಗಾಲಲ್ಲಿ ನಿಂತಿದ್ದರು. ಎಲ್ಲರೂ ನಾನಾ ರೀತಿಯ ಸಿದ್ಧತೆಯಲ್ಲಿ ತೊಡಗಿದ್ದರು. ಇದೊಂದು ಪ್ರತಿಷ್ಠೆಯ ಸಂಗತಿ. ಆದರೆ ಎಲ್ಲವೂ ತಲೆಕೆಳಗಾಯಿತು’ ಎಂದು ನಿಗಾರ್‌ ಸುಲ್ತಾನಾ ಹೇಳಿದರು.

ಆದರೀಗ ನಾನು ತುಸು ನಿರಾಳಗೊಂಡಿದ್ದೇನೆ. ಅನೇಕರು ನಾನಾ ರೀತಿಯಲ್ಲಿ ಪರಿಸ್ಥಿತಿಯನ್ನು ಮನದಟ್ಟು ಮಾಡಿದರು. ಒಂದಿಷ್ಟು ಸಮಾಧಾನವಾಗಿದೆ’ ಎಂದು  ಶೇರ್‌ ಎ ಬಾಂಗ್ಲಾ ನ್ಯಾಶನಲ್‌ ಸ್ಟೇಡಿಯಂ’ನಲ್ಲಿ ಅಭ್ಯಾಸ ಮಾಡುತ್ತಿದ್ದ ನಿಗಾರ್‌ ಸುಲ್ತಾನಾ ಮಾಧ್ಯಮದವರಲ್ಲಿ ಹೇಳಿದರು.

 

 

Advertisement
Advertisement

Udayavani is now on Telegram. Click here to join our channel and stay updated with the latest news.