Advertisement

Pak vs Ban1st Test: ರಹೀಂ ಶತಕ; ಬಾಂಗ್ಲಾ ಮೇಲುಗೈ

08:53 PM Aug 24, 2024 | Team Udayavani |

ರಾವಲ್ಪಿಂಡಿ: ಅನುಭವಿ ಆಟಗಾರ ಮುಶ್ಫಿಕರ್‌ ರಹೀಂ ಅವರ 191 ರನ್‌ ಸಾಹಸದಿಂದ ಪಾಕಿಸ್ಥಾನ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಬಾಂಗ್ಲಾದೇಶ 117 ರನ್ನುಗಳ ಇನ್ನಿಂಗ್ಸ್‌ ಮುನ್ನಡೆ ಸಾಧಿಸಿದೆ.

Advertisement

ಪಾಕಿಸ್ಥಾನ 6ಕ್ಕೆ 448 ರನ್‌ ಗಳಿಸಿ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿದರೆ, ಬಾಂಗ್ಲಾದೇಶ 565 ರನ್‌ ಪೇರಿಸಿತು. ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿರುವ ಪಾಕ್‌ ಒಂದು ವಿಕೆಟಿಗೆ 23 ರನ್‌ ಮಾಡಿದ್ದು, 94 ರನ್‌ ಹಿನ್ನಡೆಯಲ್ಲಿದೆ. ಆದರೆ ಪಂದ್ಯಕ್ಕೆ ರವಿವಾರವೇ ಅಂತಿಮ ದಿನ. ಹೀಗಾಗಿ ಡ್ರಾ ಸಾಧ್ಯತೆ ನಿಚ್ಚಳಗೊಂಡಿದೆ.

5ನೇ ಕ್ರಮಾಂಕದಲ್ಲಿ ಆಡಲಿಳಿದ ರಹೀಂ ಪಾಕ್‌ ಬೌಲರ್‌ಗಳ ಮೇಲೆ ಸವಾರಿ ಮಾಡುತ್ತ ಸಾಗಿದರು. ಈ ಮ್ಯಾರಥಾನ್‌ ಇನ್ನಿಂಗ್ಸ್‌ ವೇಳೆ 341 ಎಸೆತ ಎದುರಿಸಿದರು. ಸಿಡಿಸಿದ್ದು 22 ಬೌಂಡರಿ ಹಾಗೂ ಒಂದು ಸಿಕ್ಸರ್‌. ಕೆಳ ಸರದಿಯ ಆಟಗಾರರಾದ ಲಿಟನ್‌ ದಾಸ್‌ 56, ಮೆಹಿದಿ ಹಸನ್‌ ಮಿರಾಜ್‌ 77 ರನ್‌ ಕೊಡುಗೆ ಸಲ್ಲಿಸಿದರು.

 

Advertisement

Udayavani is now on Telegram. Click here to join our channel and stay updated with the latest news.