ಬೆಂಗಳೂರು : “ಅಯ್ಯೋ ಮದುವೆ ಆಗಿ 25 ವರ್ಷ ಆದ ಮೇಲೆ ಗಂಡು ಮಗು ಹುಟ್ಟಿದ ರೀತಿಯಲ್ಲಿ ಕಾಂಗ್ರೆಸಿಗರು ಸಂಭ್ರಮ ಪಡುತ್ತಿದ್ದಾರೆ…! ಇದು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆದ್ದು ಬೀಗುತ್ತಿರುವ ಕಾಂಗ್ರೆಸಿಗರ ಸಂಭ್ರಮಾಚರಣೆ ಬಗ್ಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯಿತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಮಾಡಿರುವ ವ್ಯಾಖ್ಯಾನ.
ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, “ಈ ಗೆಲುವನ್ನು ಇಟ್ಟುಕೊಂಡು ಬಿಜೆಪಿ ಬುಡ ಅಲ್ಲಾಡುತ್ತಿದೆ ಎಂದು ಸಿದ್ದರಾಮಯ್ಯನವರು ಹೇಳಿಕೆ ನೀಡಿದ್ದಾರೆ. ಮದುವೆ ಆಗಿ 25 ವರ್ಷ ಆದ ಮೇಲೆ ಗಂಡು ಮಗು ಹುಟ್ಟಿದ ರೀತಿಯಲ್ಲಿ ಕಾಂಗ್ರೆಸಿಗರು ಸಂಭ್ರಮ ಪಡುತ್ತಿದ್ದಾರೆ. ನಾಮಕರಣ ಮಾಡಿ ಒಳ್ಳೆಯ ಹೆಸರನ್ನು ಇಡಿ. ಕಾರ್ಯಕ್ರಮದಲ್ಲಿ ನಾನು ಭಾಗಿಯಾಗುತ್ತೇನೆ ಎಂದು ವ್ಯಂಗ್ಯವಾಡಿದ್ದಾರೆ.
ನಾವು ಎಲ್ಲೆಲ್ಲಿ ಗೆದ್ದಿದ್ದೇವೋ, ಅಲ್ಲೆಲ್ಲ ಅಭಿವೃದ್ಧಿ ಕಾರ್ಯ ಮಾಡುತ್ತೇವೆ. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರ ತರುವುದಕ್ಕೆ ಅಗತ್ಯವಾದ ಕೆಲಸ ಮಾಡುತ್ತೇವೆ ಎಂದು ಹೇಳಿದರು.