Advertisement

ಕುಡಿಯುವ ನೀರು ಸಮಸ್ಯೆ ಪರಿಹರಿಸಲು ಸಜ್ಜಾಗಿ: ಮಹೇಶ್ವರ ರಾವ್‌

11:37 AM Mar 11, 2017 | |

ಉಡುಪಿ: ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಸಜ್ಜಾಗಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಕೃಷಿ ಇಲಾಖೆ ಕಾರ್ಯದರ್ಶಿ ಎಂ. ಮಹೇಶ್ವರ ರಾವ್‌ ಹೇಳಿದರು.  

Advertisement

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಯಲ್ಲಿ ಜಿಲ್ಲೆಯ ಕಂದಾಯ ಇಲಾಖೆ ಹಾಗೂ ಇತರ ಇಲಾಖೆ ಪ್ರಗತಿ ಪರಿ ಶೀಲನೆ ನಡೆಸಿದ ಸಂದರ್ಭ ಜಿಲ್ಲೆಯಲ್ಲಿ ನೀರಿನ ಅಭಾವ ಎದುರಿಸಲು ಶಾಶ್ವತ ಪರಿಹಾರ ರೂಪಿಸಿರುವ ಬಗ್ಗೆ ಮತ್ತು ನೀರಿನ ಸಮಸ್ಯೆ ಪರಿಹಾರಕ್ಕೆ ಕೈಗೊಂಡಿ
ರುವ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಅವರು ಮಾಹಿತಿ ಕಲೆ ಹಾಕಿದರು. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆನಿಭಾಯಿಸಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ ಎಂದು ಅಧಿಕಾರಿಗಳು ಹೇಳಿದರು. ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಇನ್ನೂ ಟ್ಯಾಂಕರ್‌ ಮೂಲಕ ನೀರು ನೀಡಲು ಆರಂಭಿಸಿಲ್ಲ ಎಂದು ನಗರ ಸಭೆ, ನಗರಾಡಳಿತ ಹಾಗೂ ಗ್ರಾಮೀ ಣಾಭಿವೃದ್ಧಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. 

ಎಪ್ರಿಲ್‌, ಮೇಯಲ್ಲಿ ನೀರಿನ ಅಭಾವ ತಲೆದೋರಲಿದ್ದು, ನಗರಸಭಾ ವ್ಯಾಪ್ತಿ ಯಲ್ಲಿ 8 ಬೋರ್‌ವೆಲ್‌, 9 ತೆರೆದ ಬಾವಿಗಳನ್ನು ನೀರಿಗೋಸ್ಕರ ಸಿದ್ಧ ಪಡಿಸಿಟ್ಟುಕೊಳ್ಳಲಾಗಿದೆ ಎಂದು ನಗರ ಸಭೆ ಆಯುಕ್ತರು ಸಭೆಗೆ ಮಾಹಿತಿ ನೀಡಿದರು. ಅಮೃತ್‌ಯೋಜನೆಯಡಿ ಶಿಂಬ್ರಕ್ಕೆ ವೆಂಟೆಡ್‌ ಡ್ಯಾಂ ನಿರ್ಮಿಸಲು 108 ಕೋ. ರೂ. ಬಿಡುಗಡೆಯಾಗಿದೆ  ಎಂದರು. 

ಕುಂದಾಪುರ, ಕಾರ್ಕಳ, ಸಾಲಿಗ್ರಾಮ, ಕಾಪುವಿನಲ್ಲೂ ನೀರಿನ ಸಮಸ್ಯೆ ಸದ್ಯಕ್ಕಿಲ್ಲ ಎಂದು ಅಧಿಕಾರಿಗಳು ಹೇಳಿದರು. ಉಡುಪಿ ನಗರಸಭೆಗೆ 50 ಲ.ರೂ. ಹೆಚ್ಚಿನ ಅನುದಾನವನ್ನು ಆಯುಕ್ತರು ಕೋರಿದರು.  ಎಪ್ರಿಲ್‌ ಮೇ ತಿಂಗಳಲ್ಲಿ ನೀರಿನ ಅಭಾವ ನಿವಾರಿಸಲು ಸರಕಾರಿ ಜಲ ಸಂಪನ್ಮೂಲಗಳಲ್ಲದೆ ಖಾಸಗಿ ಬೋರ್‌ ವೆಲ್‌ ಅಥವಾ ಬಾವಿಗಳಿಂದ ಬಾಡಿಗೆ ನೀಡಿ ನೀರು ಪಡೆಯಿರಿ ಎಂದು
ಕಾರ್ಯದರ್ಶಿಗಳು ಸಲಹೆ ಮಾಡಿದರು. ಗ್ರಾಮೀಣ ಪ್ರದೇಶ ವ್ಯಾಪ್ತಿಯಲ್ಲಿ ಒಟ್ಟು 131 ಹಳ್ಳಿಗಳಲ್ಲಿ ನೀರಿನ ûಾಮವಿರುವುದನ್ನು ಗುರುತಿಸಲಾ ಗಿದೆ ಎಂದು ಜಿ.ಪಂ. ಮುಖ್ಯ ಯೋಜನಾಧಿಕಾರಿಗಳು ಹೇಳಿದರು. 

ಜಿ.ಪಂ. ಪಿಆರ್‌ಇಡಿ ಅಧಿಕಾರಿಗಳು ಇನ್ನಷ್ಟು ಚುರುಕಾಗಿ ಕರ್ತವ್ಯನಿರ್ವಹಿಸಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಸೂಚಿಸಿದರು.  ನಬಾರ್ಡ್‌ ಯೋಜನೆಯಡಿ ಕೈಗೊಂಡ ಯೋಜನೆಗಳ ಮಾಹಿತಿ ಹಾಗೂ ಕೈಗೊಳ್ಳಬೇಕಾದ ಯೋಜನೆಗಳ ಅಂದಾಜುಪಟ್ಟಿಯನ್ನು ಜಿಲ್ಲಾಧಿಕಾರಿ ಮುಖಾಂತರ ತಮಗೆ ಸಲ್ಲಿಸಲು ಅವರು ಹೇಳಿದರು.

Advertisement

ಕಡಲ್ಕೊರೆತ ಕಾಮಗಾರಿಗಳಿಗೆ 4 ಕೋ. ರೂ. ಅನುದಾನದಡಿ 87 ತುರ್ತು ಕಾಮಗಾರಿ ನಿರ್ವಹಿಸಿದ್ದು, 12 ಕೋ. ರೂ. ಬೇಡಿಕೆ ಸಲ್ಲಿಸಲಾಗಿತ್ತು ಎಂದು ಅಧಿಕಾರಿಗಳು ಹೇಳಿದರು. ಜಿಲ್ಲೆಯಲ್ಲಿ ಬೀಜೋತ್ಪಾದನೆಗೆ ಹೆಚ್ಚಿನ ಒತ್ತು ನೀಡಲು ಬೀಜೋತ್ಪಾದನೆ ಮಾಡುತ್ತಿರುವ ಖಾಸಗಿ ಕಂಪೆನಿಗಳಿಗೆ ಪ್ರೋತ್ಸಾಹ ನೀಡಲು ಕೃಷಿ ಇಲಾಖಾಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಹಾಗೂ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next