Advertisement

EPS-OPS ಬಣ ವಿಲೀನ ಬೆನ್ನಲ್ಲೇ; ಹೈಡ್ರಾಮಾ, ಸಿಎಂ ಬದಲಾವಣೆಗೆ ಪಟ್ಟು!

02:28 PM Aug 22, 2017 | Team Udayavani |

ಚೆನ್ನೈ: ಪನ್ನೀರ್ ಸೆಲ್ವಂ ಬಣ ಹಾಗೂ ಮುಖ್ಯಮಂತ್ರಿ ಪಳನಿಸ್ವಾಮಿ ಬಣ ಎಐಎಡಿಎಂಕೆ ಜತೆ ವಿಲೀನವಾದ ಬೆನ್ನಲ್ಲೇ ತಮಿಳುನಾಡು (ಇದನ್ನೂ ಓದಿ: ಚಿಗುರಿದ ಎಲೆ; ಅಂತೂ ಒಂದಾದ ಎಐಎಡಿಎಂಕೆ ಎರಡೂ ಬಣ) ರಾಜಕೀಯದಲ್ಲಿ ಮತ್ತೆ ರಾಜಕೀಯ ಬಿಕ್ಕಟ್ಟು ಮಂಗಳವಾರ ಆರಂಭವಾಗಿದೆ. ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಹಾಗೂ ದಿನಕರನ್ ಅವರನ್ನು ಪಕ್ಷದಿಂದ ಉಚ್ಛಾಟಿಸುವ ಬಗ್ಗೆ ಸಿಎಂ ಪಳನಿಸ್ವಾಮಿ ಭರವಸೆ ನೀಡಿದ್ದು, ಮತ್ತೊಂದೆಡೆ 19 ಶಾಸಕರು ಇ.ಪಳನಿಸ್ವಾಮಿಗೆ ನೀಡಿದ ಬೆಂಬಲವನ್ನು ವಾಪಸ್ ಪಡೆದ ಬೆಳವಣಿಗೆ ನಡೆದಿದೆ.

Advertisement

19 ಶಾಸಕರು ಬೆಂಬಲ ವಾಪಸ್ ಪಡೆದ ಹಿನ್ನೆಲೆಯಲ್ಲಿ ಇ.ಪಳನಿಸ್ವಾಮಿ ನೇತೃತ್ವದ ಸರ್ಕಾರ ಅಲ್ಪಬಹುಮತಕ್ಕೆ ಕುಸಿದಂತಾಗಿದೆ. ಇದರಿಂದಾಗಿ ನಿರ್ಗಮಿತ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಆಪ್ತ ಶಾಸಕರು, ರಾಜಕೀಯ ಬೆಳವಣಿಗೆ ಕುರಿತಂತೆ ರಾಜ್ಯಪಾಲ ಸಿ.ವಿದ್ಯಾಸಾಗರ್ ರಾವ್ ಅವರು ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿದ್ದಾರೆ.

ಅಲ್ಲದೇ ಮುಖ್ಯಮಂತ್ರಿ ಇ.ಪಳನಿಸ್ವಾಮಿ ಅವರು ಶಾಸಕರ ವಿಶ್ವಾಸಕಳೆದುಕೊಂಡಿರುವುದಾಗಿ ಮನವಿಯನ್ನು ರಾಜ್ಯಪಾಲರಿಗೆ ನೀಡಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ. ಆದರೆ ಸರ್ಕಾರವನ್ನು ಉರುಳಿಸುವುದು ನಮ್ಮ ಉದ್ದೇಶವಲ್ಲ, ಪ್ರಸ್ತುತ ಇರುವ ಮುಖ್ಯಮಂತ್ರಿ ಪಳನಿಸ್ವಾಮಿ ಬದಲಾಗಬೇಕು ಎಂದು ದಿನಕರನ್ ಆಪ್ತ ಶಾಸಕ ಜಾಕ್ಕೈಯಾನ್ ತಿಳಿಸಿದ್ದಾರೆ.

ನಮಗೆ ವಿಶ್ವಾಸಮತ ಸಾಬೀತುಪಡಿಸಬೇಕಾಗಿದೆ. ಈ ಬಗ್ಗೆ ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ದಿನಕರನ್ ಎನ್ಎನ್ಐ ಜತೆ ಮಾತನಾಡುತ್ತ ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next