Advertisement
ಹಂಪಿ ಪ್ರದೇಶದ ಅಕ್ಕ-ತಂಗಿಯರ ಗುಂಡಿನ ಬಳಿ ಬೀಡು ಬಿಟ್ಟಿರುವ ಕುರಿಗಾಹಿಗಳು, ಸಾವಿರಾರು ರೂಪಾಯಿ ಖರ್ಚುಮಾಡಿ ಕುರಿಗಳಿಗೆ ಸೊಳ್ಳೆ ಪರದೆ ನಿರ್ಮಿಸಿದ್ದಾರೆ.
ಮೊದಲು ನಮಗೆ ಅರಿವಿಗೆ ಬಂದಿರಲಿಲ್ಲ. ಮೈ ತುಂಬ ಕೂದಲು ಇರುವ ಕುರಿಗಳಿಗೆ ಸೊಳ್ಳೆ ಕಚ್ಚಲು ಸಾಧ್ಯವಿಲ್ಲ ಎಂದು ಭಾವಿಸಿದ್ದೇವು. ಹಿರಿಯರ ಸಲಹೆಯಂತೆ ಪ್ರಥಮ ಬಾರಿಗೆ ಕುರಿಗಳಿಗೆ ಸೊಳ್ಳೆ ಪದರೆಯನ್ನು ನಿರ್ಮಿಸಿದ್ದೇವೆ. ಇದರಿಂದ ಅವು ಯಾವುದೇ ಸದ್ದು ಇಲ್ಲದಂತೆ ರಾತ್ರಿ ನಿದ್ರೆ ಮಾಡುತ್ತವೆ. ಇಲ್ಲಿ ಮಾತ್ರವಲ್ಲ ಜಿಲ್ಲಾದ್ಯಂತ ಸಂಚಾರಿ ಕುರಿಗಾಹಿಗಳು ಸೊಳ್ಳೆ ಪರದೆಯಿಂದ ತಮ್ಮ ಕುರಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ಕುರಿಗಾಹಿಗಳು ತಿಳಿಸಿದ್ದಾರೆ.
Related Articles
ಶಂಕರ,ಕುರಿಗಾಹಿ.
Advertisement
ನಮ್ಮ ದೇಶದಲ್ಲಿ ಸೊಳ್ಳೆ ಕಡಿತದಿಂದ ಕುರಿಗಳಿಗೆ ಯಾವುದೇ ಕಾಯಿಲೆ ಬರುವುದಿಲ್ಲ. ಕುರುಡು ನೊಣದಿಂದ ಕುರಿಗಳಿಗೆ ನೀಲಿ ನಾಲಿಗೆ ರೋಗ ಕಾಣಿಸಿಕೊಳ್ಳುತ್ತವೆ. ಸೊಳ್ಳೆ ಕಾಟದಿಂದ ಕುರಿಗಳಿಗೆ ರಾತ್ರಿ ನಿದ್ರೆ ಇಲ್ಲದಂತಾಗಿ ನಿಶಕ್ತಿ ಹೊಂದಬಹುದು. ಸೊಳ್ಳೆ ಪರದೆ ನಿರ್ಮಾಣ ಮಾಡುವುದರಿಂದ ವಿಷ ಜಂತುಗಳ ಹಾವಳಿ ಹಾಗೂ ಕಾಡು ಪ್ರಾಣಿಗಳ ಹಾವಳಿ ಸ್ವಲ್ಪ ಮಟ್ಟಿಗೆ ತಡೆಯಬಹುದು.ಡಾ| ಬಸವರಾಜ ಬೆಣ್ಣಿ,
ಸಹಾಯಕ ನಿದೇರ್ಶಕರು, ಪಶು ಸಂಗೋಪನಾ ಇಲಾಖೆ. ಪಿ.ಸತ್ಯನಾರಾಯಣ