Advertisement

ಇಂಗ್ಲೆಂಡ್‌ ಫುಟ್ಬಾಲ್ ವಿಶ್ವಕಪ್ ವಿಜೇತ ತಂಡದ ಜಾರ್ಜ್ ಕೊಹೆನ್ ವಿಧಿವಶ

07:43 PM Dec 23, 2022 | Team Udayavani |

ಲಂಡನ್: 1966 ರಲ್ಲಿ ಇಂಗ್ಲೆಂಡ್‌ನ ಫುಟ್ಬಾಲ್  ವಿಶ್ವಕಪ್ ವಿಜೇತ ತಂಡದಲ್ಲಿ ಆಡಿದ ಡಿಫೆಂಡರ್ ಜಾರ್ಜ್ ಕೊಹೆನ್ ವಿಧಿವಶರಾಗಿದ್ದಾರೆ ಎಂದು ಇಂಗ್ಲಿಷ್ ಫುಟ್ಬಾಲ್ ಸಂಸ್ಥೆ ಶುಕ್ರವಾರ ತಿಳಿಸಿದೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.

Advertisement

ಕೊಹೆನ್ ತವರು ನೆಲದಲ್ಲಿ ಇಂಗ್ಲೆಂಡ್‌ನ ವಿಜಯದ ಅಭಿಯಾನದ ಪ್ರತಿ ನಿಮಿಷವನ್ನು ಆಡಿದ್ದರು. ಅವರು ತಮ್ಮ ರಾಷ್ಟ್ರೀಯ ತಂಡದ ಪರ 37 ಪಂದ್ಯಗಳನ್ನು ಆಡಿದ್ದರು.

ಕೊಹೆನ್ ತನ್ನ ಸಂಪೂರ್ಣ ವೃತ್ತಿಜೀವನವನ್ನು ಕ್ಲಬ್ ಫಲ್ಹ್ಯಾಮ್‌ಗಾಗಿ ಆಡಿದ್ದರು, ಅಲ್ಲಿ ಅವರು 1956 ಮತ್ತು 1969 ರ ನಡುವೆ 459 ಪಂದ್ಯಗಳನ್ನು ಆಡಿದ್ದಾರೆ. ಅವರು ಗಂಭೀರವಾದ ಮೊಣಕಾಲಿನ ಗಾಯದ ನಂತರ 29 ನೇ ವಯಸ್ಸಿನಲ್ಲಿ ಆಡುವುದರಿಂದ ನಿವೃತ್ತರಾಗಿದ್ದರು.

“ಫುಲ್ಹಾಮ್ ಫುಟ್ಬಾಲ್ ಕ್ಲಬ್ ನಲ್ಲಿರುವ ಪ್ರತಿಯೊಬ್ಬರೂ ನಮ್ಮ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ಮಹನೀಯರಾದ ಜಾರ್ಜ್ ಕೋಹೆನ್ ಅವರ ಅಗಲುವಿಕೆಯ ಬಗ್ಗೆ ತಿಳಿದು ತೀವ್ರ ದುಃಖಿತರಾಗಿದ್ದೇವೆ” ಎಂದು ಪ್ರೀಮಿಯರ್ ಲೀಗ್ ಕ್ಲಬ್ ಹೇಳಿಕೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next