Advertisement

Rain ಪಂದ್ಯದಲ್ಲಿ ಎಡವಿದ ಇಂಗ್ಲೆಂಡ್‌: ವೆಸ್ಟ್‌  ಇಂಡೀಸ್‌ ಸರಣಿ ವಿಕ್ರಮ

11:06 PM Dec 10, 2023 | Team Udayavani |

ಬ್ರಿಜ್‌ಟೌನ್‌: ಮಳೆ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್‌ ತಂಡವನ್ನು 4 ವಿಕೆಟ್‌ಗಳಿಂದ ಪರಾಭವಗೊಳಿಸಿದ ವೆಸ್ಟ್‌ ಇಂಡೀಸ್‌ ಏಕದಿನ ಸರಣಿಯನ್ನು 2-1 ಅಂತರದಿಂದ ತನ್ನದಾಗಿಸಿಕೊಂಡಿದೆ. ವಿಶ್ವಕಪ್‌ ತಪ್ಪಿಸಿಕೊಂಡ ಸಂಕಟದಲ್ಲಿದ್ದ ಕೆರಿಬಿಯನ್‌ ಪಡೆಯಲ್ಲಿ ಹೊಸ ಹುರುಪು ಮೂಡಿದೆ.

Advertisement

ಮಳೆಯಿಂದಾಗಿ ಟಾಸ್‌ 2 ಗಂಟೆ ವಿಳಂಬವಾಗಿ ಮೊದಲ್ಗೊಂಡ ಕಾರಣ ಈ ಪಂದ್ಯವನ್ನು 40 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು. ಇಂಗ್ಲೆಂಡ್‌ 9 ವಿಕೆಟಿಗೆ 206 ರನ್‌ ಗಳಿಸಿತು. ವೆಸ್ಟ್‌ ಇಂಡೀಸ್‌ ಚೇಸಿಂಗ್‌ ವೇಳೆ ಮತ್ತೆ ಮಳೆಯಾದ್ದರಿಂದ ಗುರಿಯನ್ನು ಪರಿಷ್ಕರಿಸಲಾಯಿತು. 34 ಓವರ್‌ಗಳಲ್ಲಿ 188 ರನ್‌ ಟಾರ್ಗೆಟ್‌ ನಿಗದಿಯಾಯಿತು. ವಿಂಡೀಸ್‌ 31.4 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 191 ರನ್‌ ಬಾರಿಸಿ ಸರಣಿ ಮೇಲೆ ಹಕ್ಕು ಚಲಾಯಿಸಿತು.

ಫೋರ್ಡ್‌ ಸ್ಮರಣೀಯ ಆರಂಭ
ವಿಂಡೀಸ್‌ ವೇಗಿ ಮ್ಯಾಥ್ಯೂ ಫೋರ್ಡ್‌ ಅವರಿಗೆ ಇದು ಸ್ಮರಣೀಯ ಪದಾರ್ಪಣೆ ಆಗಿತ್ತು. 29ಕ್ಕೆ 3 ವಿಕೆಟ್‌ ಹಾಗೂ ಅಜೇಯ 13 ರನ್‌ ಸಾಧನೆಗೈದು ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಚೇಸಿಂಗ್‌ ವೇಳೆ ಅಲಿಕ್‌ ಅಥನೇಜ್‌ (45) ಮತ್ತು ಕೇಸಿ ಕಾರ್ಟಿ (50) 2ನೇ ವಿಕೆಟಿಗೆ 76 ರನ್‌ ಪೇರಿಸಿ ಆಧಾರವಾದರು. ಕೊನೆಯಲ್ಲಿ ರೊಮಾರಿಯೊ ಶೆಫ‌ರ್ಡ್‌ ಅಜೇಯ 41 ರನ್‌ ಬಾರಿಸಿ ತಂಡವನ್ನು ದಡ ತಲುಪಿಸಿದರು.

ಫೋರ್ಡ್‌, ಜೋಸೆಫ್ ಮತ್ತು ಶೆಫ‌ರ್ಡ್‌ ದಾಳಿಗೆ ತತ್ತರಿಸಿದ ಇಂಗ್ಲೆಂಡ್‌ ಒಂದು ಹಂತದಲ್ಲಿ 49ಕ್ಕೆ 5 ವಿಕೆಟ್‌ ಕಳೆದುಕೊಂಡು ಪರದಾ ಡುತ್ತಿತ್ತು. ಆದರೆ ಬೆನ್‌ ಡಕೆಟ್‌ (71) ಮತ್ತು ಲಿಯಮ್‌ ಲಿವಿಂಗ್‌ಸ್ಟೋನ್‌ (45) ಅವರ ಜವಾಬ್ದಾರಿಯುತ ಆಟದಿಂದ ಇನ್ನೂರರ ಗಡಿ ದಾಟುವಲ್ಲಿ ಯಶಸ್ವಿಯಾಯಿತು.

Advertisement

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌-40 ಓವರ್‌ಗಳಲ್ಲಿ 9 ವಿಕೆಟಿಗೆ 206 (ಡಕೆಟ್‌ 71, ಲಿವಿಂಗ್‌ಸ್ಟೋನ್‌ 45, ಅಟಿRನ್ಸನ್‌ ಔಟಾಗದೆ 20, ಫೋರ್ಡ್‌ 29ಕ್ಕೆ 3, ಜೋಸೆಫ್ 61ಕ್ಕೆ 3, ಶೆಫ‌ರ್ಡ್‌ 50ಕ್ಕೆ 2). ವೆಸ್ಟ್‌ ಇಂಡೀಸ್‌-31.4 ಓವರ್‌ಗಳಲ್ಲಿ 6 ವಿಕೆಟಿಗೆ 191 (ಕಾರ್ಟಿ 50, ಅಥನೇಜ್‌ 45, ಶೆಫ‌ರ್ಡ್‌ ಔಟಾಗದೆ 41, ಜಾಕ್ಸ್‌ 22ಕ್ಕೆ 3, ಅಟಿRನ್ಸನ್‌ 58ಕ್ಕೆ 2). ಪಂದ್ಯಶ್ರೇಷ್ಠ: ಮ್ಯಾಥ್ಯೂ ಫೋರ್ಡ್‌.
ಸರಣಿಶ್ರೇಷ್ಠ: ಶೈ ಹೋಪ್‌.

Advertisement

Udayavani is now on Telegram. Click here to join our channel and stay updated with the latest news.

Next