Advertisement

The Ashes ಇಂಗ್ಲೆಂಡ್‌ ವೇಗಿ ಆ್ಯಂಡರ್ಸನ್‌ ಗೆ ಆಸೀಸ್‌ ಆಟಗಾರರಲ್ಲಿ ಸ್ನೇಹಿತರೇ ಇಲ್ಲ!

09:44 AM Jun 14, 2023 | Team Udayavani |

ಲಂಡನ್‌: ಟೆಸ್ಟ್‌ ಕ್ರಿಕೆಟ್‌ ಮಟ್ಟಿಗೆ ಇಂಗ್ಲೆಂಡ್‌ -ಆಸ್ಟ್ರೇಲಿಯ ನಡುವೆ ನಡೆಯುವ ಆ್ಯಶಸ್‌ ಸರಣಿ ವಿಶ್ವಕಪ್‌ನಷ್ಟೇ ಮಹತ್ವ ಹೊಂದಿದೆ.

Advertisement

ಇಂಗ್ಲೆಂಡ್‌ ಪರ ಟೆಸ್ಟ್‌ನಲ್ಲಿ ಗರಿಷ್ಠ ವಿಕೆಟ್‌ ಪಡೆದಿರುವ ಖ್ಯಾತಿ ಹೊಂದಿರುವ ವೇಗಿ ಜೇಮ್ಸ್‌ ಆ್ಯಂಡರ್ಸನ್‌ ಇಲ್ಲಿ ನಿರ್ಣಾಯಕ ಆಟಗಾರರಲ್ಲೊಬ್ಬರು. ಈ ಘಾತಕ ವೇಗಿಗೆ ಆಸ್ಟ್ರೇಲಿಯ ಪಾಳೆಯದಲ್ಲಿ ಯಾರೂ ಸ್ನೇಹಿತರಿಲ್ಲ ಎಂಬ ಸಂಗತಿ ನಿಮಗೆ ಗೊತ್ತಾ? ಅದಕ್ಕೆ ಅವರೇ ಹೇಳಿಕೊಂಡಂತೆ ವಿಶೇಷ ಕಾರಣವೊಂದಿದೆ!

“ಕ್ರಿಕೆಟೊಂದನ್ನು ಹೊರತುಪಡಿಸಿ, ಬೇರೆ ಯಾವುದೇ ರೀತಿಯಲ್ಲಿ ಅವರ ಬಗ್ಗೆ ತಿಳಿದು ಕೊಳ್ಳಲು, ಸಂಬಂಧ ಹೊಂದಲು ನನಗೆ ಆಸಕ್ತಿಯಿಲ್ಲ. ಅವರನ್ನು ಎದುರಾಳಿಗಳನ್ನಾಗಿ ನೋಡಲಷ್ಟೇ ನಾನು ಬಯಸುತ್ತೇನೆ. ಅವರೆದುರು ತೀವ್ರವಾಗಿ ಕಾದಾಡಲು ಇಚ್ಛಿಸುತ್ತೇನೆ. ಈಗ ಎಲ್ಲ ಕಡೆ ಫ್ರಾಂಚೈಸ್‌ ಮಾದರಿಯ ಕ್ರಿಕೆಟ್‌ ನಡೆಯುತ್ತಿದೆ. ಅದರಿಂದ ಎಲ್ಲ ರಾಷ್ಟ್ರದವರು ಒಗ್ಗೂಡಿ ಆಡಲು ಆರಂಭಿಸಿದ್ದಾರೆ. ಆದ್ದರಿಂದ ಈ ತೀವ್ರತೆ ಮುಂದಿನ ದಿನಗಳಲ್ಲಿ ಇರುವುದು ಕಷ್ಟ. ಈಗ ನೀವು ಆ್ಯಶಸ್‌ನಲ್ಲಿ ಕಾಣುವ ನಿಕಟತೆ ಮುಂದೆ ಇರಲಿಕ್ಕಿಲ್ಲ’ ಎಂದು ಜೇಮ್ಸ್‌ ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next