ಲಂಡನ್: ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಆಡುವುದಕ್ಕಿಂತ ರಾಷ್ಟ್ರೀಯ ತಂಡದಲ್ಲಿ ಆಡುವುದಕ್ಕೆ ಆದ್ಯತೆ ಕೊಡಬೇಕು.
ಅಂತಾರಾಷ್ಟ್ರೀಯ ಪಂದ್ಯಗಳನ್ನು ಹೆಚ್ಚು ಆಡಬೇಕು ಎಂದು ಇಂಗ್ಲೆಂಡ್ ತಂಡದ ಆಟಗಾರರಿಗೆ ಮಾಜಿ ನಾಯಕ ಮೈಕೆಲ್ ಅಥರ್ಟನ್ ಸಲಹೆಯೊಂದನ್ನು ನೀಡಿದ್ದಾರೆ.
“ಬಹುಮಾದರಿಯ ಕ್ರಿಕೆಟ್ ಆಡುವ ಕೆಲವು ಆಟಗಾರರು ಏಳಂಕಿ ಮೊತ್ತದಲ್ಲಿ ವೇತನ ಪಡೆಯುತ್ತಿದ್ದಾರೆ. ಆದರೆ ಐಪಿಎಲ್ ನಡೆಯುವ ಎರಡು ತಿಂಗಳು ಅವಧಿಯಲ್ಲಿ ಅವರು ಇಸಿಬಿಯ ಹಿಡಿತದಿಂದ ಹೊರಗಿರುತ್ತಾರೆ. ಈ ವಿಷಯದಲ್ಲಿ ಮಂಡಳಿಯು ಬಿಗಿ ನಿಲುವು ತಳೆಯಬೇಕು.
ಇದನ್ನೂ ಓದಿ:ರೈತರ ಹೋರಾಟಕ್ಕೆ ಮಣಿದು ಸರ್ಕಾರ ಕೃಷಿ ಕಾಯಿದೆಯನ್ನು ಹಿಂಪಡೆದಿದೆ: ಬಡಗಲಪುರ ನಾಗೇಂದ್ರ
12 ತಿಂಗಳ ಒಪ್ಪಂದವನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು. ಐಪಿಎಲ್ ಅಥವಾ ಇನ್ನಾವುದೋ ಟೂರ್ನಿಯಲ್ಲಿ ಆಡಲು ನಿರಾಕ್ಷೇಪಣ ಪತ್ರ ಕೊಡುವಾಗ ಇಂಗ್ಲೆಂಡ್ ತಂಡದ ಹಿತಾಸಕ್ತಿಗೆ ಆದ್ಯತೆ ಕೊಡಬೇಕು. ಇಲ್ಲವಾದಲ್ಲಿ ಪ್ರಸ್ತುತ ಆ್ಯಶಸ್ ಸರಣಿಯಲ್ಲಿ ಇಂಗ್ಲೆಂಡ್ ಆಟಗಾರರು ಎದುರಿಸುತ್ತಿರುವ ವೈಫಲ್ಯ ಮುಂದುವರೆಯುವುದರಲ್ಲಿ ಅನುಮಾನವಿಲ್ಲ ಆದ್ದರಿಂದ ಈ ಕೂಡಲೇ ಇಸಿಬಿ ಈ ಬಗ್ಗೆ ಚಿಂತಿಸಬೇಕಿದೆ’ ಎಂದು ಅಥರ್ಟನ್ ಹೇಳಿದ್ದಾರೆ.