Advertisement

ವನಿತಾ ಆ್ಯಶಸ್‌ ಟೆಸ್ಟ್‌ ಡ್ರಾ

06:25 AM Nov 13, 2017 | Team Udayavani |

ಸಿಡ್ನಿ: ಇಲ್ಲಿನ “ನಾರ್ತ್‌ ಸಿಡ್ನಿ ಓವಲ್‌ ಗ್ರೌಂಡ್‌’ನಲ್ಲಿ ನಡೆದ ಆಸ್ಟ್ರೇಲಿಯ-ಇಂಗ್ಲೆಂಡ್‌ ವನಿತಾ ತಂಡಗಳ ನಡುವಿನ ಡೇ-ನೈಟ್‌ ಟೆಸ್ಟ್‌ ಪಂದ್ಯ ಡ್ರಾಗೊಂಡಿದೆ.

Advertisement

168 ರನ್‌ ಹಿನ್ನಡೆಗೆ ಸಿಲುಕಿದ ಬಳಿಕ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಇಂಗ್ಲೆಂಡ್‌, ಪಂದ್ಯಕ್ಕೆ ಡ್ರಾ ಮುದ್ರೆಯನ್ನೊತ್ತಿತು. ಆಗ ಇಂಗ್ಲೆಂಡ್‌ 2 ವಿಕೆಟಿಗೆ 206 ರನ್‌ ಮಾಡಿತ್ತು.ಇಂಗ್ಲೆಂಡಿನ 280 ರನ್ನುಗಳ ಮೊದಲ ಇನ್ನಿಂಗ್ಸಿಗೆ ಉತ್ತರವಾಗಿ ಆಸ್ಟ್ರೇಲಿಯ 9 ವಿಕೆಟಿಗೆ 448 ರನ್‌ ಪೇರಿಸಿ ಡಿಕ್ಲೇರ್‌ ಮಾಡಿತ್ತು. ಎಲಿಸ್‌ ಪೆರ್ರಿ ಆಕರ್ಷಕ ದ್ವಿಶತಕ ಬಾರಿಸಿದ್ದರು (213).

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌-280 ಮತ್ತು 2 ವಿಕೆಟಿಗೆ 206. ಆಸ್ಟ್ರೇಲಿಯ-9 ವಿಕೆಟಿಗೆ 448 ಡಿಕ್ಲೇರ್‌.

Advertisement

Udayavani is now on Telegram. Click here to join our channel and stay updated with the latest news.

Next