Advertisement

ತಾಂತ್ರಿಕ ಸಮಸ್ಯೆ: 80ಕ್ಕೂ ಅಧಿಕ ಇಂಡಿಗೋ ವಿಮಾನ ಹಾರಾಟ ರದ್ದು

04:04 PM Aug 18, 2017 | |

ಮುಂಬಯಿ : ಮಿತವ್ಯಯದ ಪ್ರಯಾಣಕ್ಕೆ ಹೆಸರಾಗಿರುವ ಅಂತಾರಾಷ್ಟ್ರೀಯ ಇಂಡಿಗೋ ವಿಮಾನಯಾನ ಸಂಸ್ಥೆಯ ಹೊಸ ಇಂಜಿನ್‌ (NEO – new engine option) ಹೊಂದಿರುವ ಏರ್‌ಬಸ್‌ ಎ320 ವಿಮಾನಗಳಲ್ಲಿ ತಾಂತ್ರಿಕ ದೋಷ ಕಂಡು ಬಂದಿರುವ ಪ್ರಯುಕ್ತ 80ಕ್ಕೂ ಹೆಚ್ಚಿನ ಸಂಖ್ಯೆಯ ವಿಮಾನ ಹಾರಾಟಗಳನ್ನು ರದ್ದುಪಡಿಸಿದೆ. 

Advertisement

ಪ್ರ್ಯಾಟ್‌ ಆ್ಯಂಡ್‌ ವಿಟ್‌ನೆ ಪೂರೈಕೆಯ ಇಂಜಿನ್‌ ದೋಷಯುಕ್ತವಾಗಿರುವುದು ಪತ್ತೆಯಾಗಿರುವ ಸುಮಾರು 13 ಎ320 ವಿಮಾನಗಳು ನಿಲ್ದಾಣದಲ್ಲೇ ಉಳಿದಿರುವ ಕಾರಣ ಅವುಗಳ ಸುಮಾರು 84ರಷ್ಟು ಹಾರಾಟಗಳನ್ನು ರದ್ದುಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಎ320 ವಿಮಾನಗಳಲ್ಲಿ ಆಗಾಗ ಇಂಜಿನ್‌ ಹಾಗೂ ಇನ್ನು ಕೆಲವು ಬಗೆಯ ತಾಂತ್ರಿಕ ದೋಷಗಳು ಕಂಡುಬರುವ ಕಾರಣ ಅವುಗಳ ಹಾರಾಟ ರದ್ದಾಗುವುದು ಈಚಿನ ದಿನಗಳಲ್ಲಿ ಸಾಮಾನ್ಯವಾಗಿದೆ ಎನ್ನುತ್ತವೆ ಮೂಲಗಳು. 

ಈ ವರ್ಷ ಜೂನ್‌ 21ರಿಂದ ಜುಲೈ 3ರ ವರೆಗಿನ ಅವಧಿಯಲ್ಲಿ ಇಂಡಿಗೋ ವಿಮಾನಯಾನ ಸಂಸ್ಥೆಯ ಒಟ್ಟು 667 ಹಾರಾಟಗಳು ರದ್ದಾಗಿವೆ ಎಂದು ಮೂಲಗಳು ಹೇಳಿವೆ. ತಾಂತ್ರಿಕ ದೋಷದ ಕಾರಣ ವಿಮಾನಗಳು ನೆಲದಲ್ಲೇ ಬೀಡುಬಿಟ್ಟ ಪ್ರಯುಕ್ತ ಜೂನ್‌ 27ರಂದು ಒಂದೇ ದಿನ 61 ಹಾರಾಟಗಳು ರದ್ದಾಗಿವೆ ಎಂದು ಮೂಲಗಳು ಹೇಳಿವೆ. 

Advertisement

Udayavani is now on Telegram. Click here to join our channel and stay updated with the latest news.

Next