Advertisement
ಆದರೆ ಉಡುಪಿ ಶೇ. 100ರಷ್ಟು ಗುರಿ ಸಾಧಿಸಿದ ಏಕೈಕ ಜಿಲ್ಲೆಯಾಗಿ ದಾಖಲಾಗಿದೆ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ “ಉದ್ಯೋಗ ಸಖೀ’ ಯೋಜನೆ ಜಾರಿಗೊಳಿಸಲಾಗಿದೆ. ಈ “ಸಖಿ”ಗಳ ಮೂಲಕ ತಂಡಗಳನ್ನು ರಚಿಸಿಕೊಂಡು, ಗ್ರಾಮೀಣ ಭಾಗದಲ್ಲಿ ಕೃಷಿ ಉತ್ಪನ್ನಗಳ ಮೌಲ್ಯ ವರ್ಧನೆ ಮಾಡಿ ನೇರವಾಗಿ ಮಾರುಕಟ್ಟೆಗೆ ಒದಗಿಸಿ ಆರ್ಥಿಕ ಸ್ವಾವಲಂಬನೆ ಸಾಧಿಸುವ ಮಹತ್ವದ ಯೋಜನೆ ಇದಾಗಿದೆ. ಆದರೆ ರಾಜ್ಯದ 15 ಜಿಲ್ಲೆ ಗಳಲ್ಲಿ ಒಬ್ಬರೇ ಒಬ್ಬ “ಉದ್ಯೋಗ ಸಖಿ’ಯನ್ನೂ ತಯಾರು ಮಾಡಲು ಸಾಧ್ಯವಾಗಿಲ್ಲ.
ಉದ್ಯೋಗ ಸಖಿಯ ಒಂದು ಭಾಗವಾದ ಕೃಷಿ ಸಖೀಯರನ್ನು ಸಮುದಾಯ ಸಂಶೋಧನ ವ್ಯಕ್ತಿಯಾಗಿ ಸಣ್ಣ ಮತ್ತು ಅತಿಸಣ್ಣ ರೈತ ಮಹಿಳೆಯರಿಗೆ ಉನ್ನತ ಮಟ್ಟದ ಕೃಷಿ ಚಟುವಟಿಕೆಗಳನ್ನು, ಕೃಷಿ ಮೌಲ್ಯದ ಸರಪಳಿ ಹಾಗೂ ಮಾರುಕಟ್ಟೆ ಅಭಿವೃದ್ಧಿಪಡಿಸಲು ನೇಮಕ ಮಾಡಲಾಗುತ್ತದೆ. ಪ್ರಾದೇಶಿಕವಾರು 20 ರೈತ ಮಹಿಳೆಯರ ಗುಂಪನ್ನು ಸಿದ್ಧಪಡಿಸುವ ಮೂಲಕ ಮೊದಲು ಉತ್ಪಾದಕರ ಗುಂಪನ್ನು ನಿರ್ಮಿಸುತ್ತಾರೆ. ಪ್ರಸ್ತುತ ರಾಜ್ಯಾದ್ಯಂತ ನಾಲ್ಕು ಸಾವಿರ ಉತ್ಪಾದಕರ ಗುಂಪುಗಳು ರಚನೆಯಾಗಿವೆ.
Related Articles
Advertisement
ಇದನ್ನೂ ಓದಿ:ರಾಜಸ್ಥಾನ: ಭಾರತೀಯ ವಾಯುಸೇನೆಯ ಮಿಗ್- 21 ವಿಮಾನ ಪತನ, ಪೈಲಟ್ ಸಾವು
ನೇಮಕಾತಿ-ತರಬೇತಿಉದ್ಯೋಗ ಸಖಿಯ ಆಯ್ಕೆ ಪ್ರಕ್ರಿಯೆಯಲ್ಲಿ ಶಿಕ್ಷಣ, ಅನುಭವ, ಸ್ಥಳೀಯತೆ, ಪಾರದರ್ಶಕತೆ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಸುಸ್ಥಿರ ಕೃಷಿ ಪದ್ಧತಿ, ಕೃಷಿ ಪರಿಸರ ಅಭ್ಯಾಸಗಳು, ಸಾವಯವ ಕೃಷಿ ಪದ್ಧತಿ ಸಹಿತ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ನಡೆಯುವ ಹೊಸ ಸಂಶೋಧನೆಗಳ ಬಗ್ಗೆ ಏಳು ದಿನಗಳ ತರಬೇತಿ ನೀಡಲಾಗುತ್ತದೆ. ಏನಿದು “ಉದ್ಯೋಗ ಸಖೀ’?
ಇದು ಕೇಂದ್ರ ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಯೋಜನೆಯಡಿ ಬರಲಿದ್ದು, ಗ್ರಾಮೀಣ ಮಹಿಳೆಯರು ಸ್ವಾವಲಂಬಿ ಜೀವನ ಕಟ್ಟಿಕೊಳ್ಳುವ ದೃಷ್ಟಿಯಿಂದ ಯೋಜನೆಯನ್ನು ಜಾರಿಗೆ ತರಲಾಗಿದೆ. ಪ್ರಾದೇಶಿಕ ಜೀವನ ಶೈಲಿಗೆ ಅನುಗುಣವಾಗಿ ಕೃಷಿ ಸಖೀ, ಪಶು ಸಖಿ, ಮತ್ಸ್ಯಸಖಿ, ವನ ಸಖಿ ಮತ್ತು ಕೃಷಿ ಉದ್ಯೋಗ ಸಖಿಯರೆಂದು ನೇಮಿಸಲಾಗುತ್ತದೆ. ಶೂನ್ಯ ಸಂಪಾದನೆಯ ಜಿಲ್ಲೆಗಳು
ಬೆಳಗಾವಿ, ಮಂಡ್ಯ, ಬೆಂಗಳೂರು ಗ್ರಾ., ಬೀದರ್, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಧಾರವಾಡ, ಹಾವೇರಿ, ಕೊಡಗು, ಕೋಲಾರ, ರಾಮನಗರ, ಶಿವಮೊಗ್ಗ, ಉ.ಕ., ಯಾದಗಿರಿ. ಉದ್ಯೋಗ ಸಖಿಯರಿಗೆ ಫೆಬ್ರವರಿ ಅಂತ್ಯಕ್ಕೆ ತರಬೇತಿ ನೀಡಿ, ಕಾರ್ಯಾಚರಣೆ ಆರಂಭಿಸುವ ಯೋಜನೆ ಇದೆ. ಅನಂತರ ಶೂನ್ಯಗೊಂಡಿರುವ ಜಿಲ್ಲೆಗಳ ಬಗ್ಗೆಯೂ ಗಮನಹರಿಸಿ, ನೇಮಕ ಪ್ರಕ್ರಿಯೆ ಆರಂಭಿಸಲಾಗುವುದು. ಒಟ್ಟಾರೆ ಹಣಕಾಸು ವರ್ಷದ ಅಂತ್ಯದೊಳಗೆ ಗುರಿ ಸಾಧಿಸಲಾಗುವುದು.
– ರಾಜೇಶ್ವರಿ, ರಾಜ್ಯ ಕಾರ್ಯಕ್ರಮ ವ್ಯವಸ್ಥಾಪಕಿ, ಕೃಷಿ ಮೌಲ್ಯ ಸರಪಳಿ ಅಭಿವೃದ್ಧಿ - ಭಾರತಿ ಸಜ್ಜನ್