Advertisement

ಖಾಸಗೀಕರಣದಿಂದ ಉದ್ಯೋಗ ಹಾನಿ: ಜಬ್ಟಾರ್‌

07:24 PM Oct 10, 2021 | Team Udayavani |

ಕಲಾದಗಿ: ಕಳೆದ 70 ವರ್ಷದಲ್ಲಿ ಕಾಂಗ್ರೆಸ್‌ ಮಾಡಿದ ಸರ್ಕಾರಿ ಆಸ್ತಿ ಬಿಜೆಪಿ ಸರ್ಕಾರ ಖಾಸಗಿಯವರಿಗೆ ಮಾರುತ್ತಿದೆ. ನಿತ್ಯೋಪಯೋಗಿ ವಸ್ತುಗಳ ಬೆಲೆ ಏರಿಸಿ ಜನರನ್ನು ಸಂಕಷ್ಟದ ತಳ್ಳುತ್ತಿದೆ ಎಂದು ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ನೂತನ ರಾಜ್ಯಾಧ್ಯಕ್ಷ ಕೆ.ಅಬ್ದುಲ್‌ ಜಬ್ಟಾರ್‌ ಹೇಳಿದರು.

Advertisement

ಸಿಂದಗಿಯಿಂದ ಬೆಳಗಾವಿಗೆ ತೆರಳುತ್ತಿದ್ದ ಮಾರ್ಗಮಧ್ಯೆ ಜಿಲ್ಲಾ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಎಂ.ಬಿ. ಸೌದಾಗರ್‌ ಮನೆಗೆ ಭೇಟಿ ನೀಡಿ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಖಾಸಗೀಕರಣ ಮಾಡುವುದರಿಂದ ಅದೆಷ್ಟೋ ಉದ್ಯೋಗಿಗಳು ನಿರುದ್ಯೋಗಿಗಳಾಗುತ್ತಾರೆ. ಹಿಂದುಳಿದ ವರ್ಗ, ಅಲ್ಪಸಂಖ್ಯಾತ, ಬಡ ಜನರಿಗೆ ಉದ್ಯೋಗ ಇಲ್ಲದಂತಾಗುತ್ತದೆ. ಖಾಸಗೀಕರಣದಿಂದ ಖಾಸಗಿವರು ತಮಗೆ ಬೇಕಾದವರನ್ನು ಮಾತ್ರ ಉದ್ಯೋಗಕ್ಕೆ ಭರ್ತಿ ಮಾಡಿಕೊಳ್ಳುತ್ತಾರೆ ಎಂದರು.

ಸಿಂದಗಿ, ಹಾನಗಲ್ಲ ಉಪ ಚುನಾವಣೆಯಲ್ಲಿ ಜೆಡಿಎಸ್‌ ಅಲ್ಪಸಂಖ್ಯಾತ ಅಭ್ಯರ್ಥಿ ಕಣಕ್ಕಿಳಿಸಿದೆ. ಏಕಾಏಕಿ ಮುಸ್ಲಿಮರ ಮೇಲೆ ಪ್ರೀತಿ ಹೆಚ್ಚಾಗಿದ್ದೇ ಆಶ್ಚರ್ಯ. ಜೆಡಿಎಸ್‌ಗೆ ಅಲ್ಪಸಂಖ್ಯಾತರ ಮೇಲೆ ಅಷ್ಟೊಂದು ಪ್ರೀತಿ ಇದ್ದರೆ ಮಂಡ್ಯ, ಹಾಸನ, ಬೆಂಗಳೂರು, ಮೈಸೂರು ಭಾಗದಲ್ಲಿ ಅಲ್ಪಸಂಖ್ಯಾತರಿಗೆ ಅವಕಾಶ ಕೊಟ್ಟು ಗೆಲ್ಲಿಸಲಿ. ಬಿಜೆಪಿ-ಜೆಡಿಎಸ್‌ ಹೊಂದಾಣಿಕೆ ಮಾಡಿಕೊಂಡು ಯಾರನ್ನು ಗೆಲ್ಲಿಸಬೇಕೆಂದು ಲೆಕ್ಕಾಚಾರ ಮಾಡಿಕೊಂಡಿವೆ. ಆದರೆ ಮತದಾರರು ಇವರ ತಂತ್ರಗಾರಿಕೆ ತಿಳಿಯದಷ್ಟು ಮೂರ್ಖರಲ್ಲ. ಜಾತ್ಯತೀತ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ತರಬೇಕು. ರಾಜ್ಯ ಅಲ್ಪಸಂಖ್ಯಾತರನ್ನು ಒಗ್ಗಟ್ಟಿನಿಂದ ಸಂಘಟನೆ ಮಾಡುತ್ತೇವೆ. ಕಾಂಗ್ರೆಸ್‌ ಸಿದ್ಧಾಂತ, ಜಾತ್ಯತೀತ ಉಳಿದರೆ ಮಾತ್ರ ದೇಶ ಉಳಿಯುತ್ತದೆ ಎಂದರು.

ಈ ವೇಳೆ ಕೆಪಿಸಿಸಿ ಯೂತ್‌ ಕಾಂಗ್ರೆಸ್‌ ಮಾಜಿ ಪ್ರಧಾನ ಕಾರ್ಯದರ್ಶಿ ನಾಸೀರಖಾನ್‌ ಪಠಾಣ, ಗ್ರಾಪಂ ಅಧ್ಯಕ್ಷ ಜಮೀರ ಅಹಮದ್‌ ಜಮಾದಾರ, ಬ್ಲಾಕ್‌ ಅಧ್ಯಕ್ಷ ಬಸುರಾಜ ಸಂಶಿ, ಸಂಗಣ್ಣ ಮುಧೋಳ, ಸಲೀಂ ಶೇಕ್‌, ಹಸನಮ್ಮದ್‌ ರೋಣ, ರೈಮಾನಸಾಬ ಬಾರುದಾಲೆ, ಮೈನುದ್ದೀನ ತೇಲಿ, ಹುಸೇನಸಾಬ ನದಾಫ್‌, ಸೈಪುದ್ದೀನ್‌ ಸೌದಾಗಾರ, ಹುಸ್ಮಾನ್‌ ರೋಣ, ಅಕ್ರಮ ಸೌದಾಗಾರ, ರಿಯಾಜ್‌ ಪಿರಜಾದೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next