Advertisement

ಟಿಕೆಟ್‌ನಲ್ಲಿ ಮಹಾರಾಷ್ಟ್ರ ಸರ್ಕಾರದ ಲಾಂಛನ: ಸಾರಿಗೆ ಯಡವಟ್ಟು!

12:14 PM Oct 06, 2022 | Team Udayavani |

ಗದಗ: ಸಾರಿಗೆ ಇಲಾಖೆ ನಿರ್ಲಕ್ಷ್ಯದಿಂದ ಗದುಗಿನ ಬಸ್‌ ನಿಲ್ದಾಣದಲ್ಲಿ ಜೈ ಮಹಾರಾಷ್ಟ್ರ ರಾಜ್ಯ ಪರಿವಾಹನ್‌ ಮುದ್ರಿತ ಟಿಕೆಟ್‌ ವಿತರಣೆಯಾದ ಘಟನೆ ಬುಧವಾರ ನಡೆದಿದೆ.

Advertisement

ವಿಷಯ ತಿಳಿದ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದಂತೆ ಎಚ್ಚೆತ್ತ ಸಾರಿಗೆ ಇಲಾಖೆ ಟಿಕೆಟ್‌ ರೋಲ್‌ ಬಾಕ್ಸ್‌ ಬದಲಾಯಿಸಿ ಸಮಸ್ಯೆಗೆ ತೆರೆ ಎಳೆದಿದೆ. ಹಳೆ ಬಸ್‌ ನಿಲ್ದಾಣದಿಂದ ಹಳ್ಳಿಗಳಿಗೆ ತೆರಳುವ ಬಸ್‌ಗಳಲ್ಲಿ ನಾಗರಿಕರು ಜೈ ಮಹಾರಾಷ್ಟ್ರ ಪರಿವಾಹನ್‌ ಎಂದು ಮರಾಠಿಯಲ್ಲಿ ಮುದ್ರಿತವಾದ ಟಿಕೆಟ್‌ ವಿತರಣೆ ಆಗಿದೆ. ವಿಷಯ ತಿಳಿಯುತ್ತಿದ್ದಂತೆ ಕನ್ನಡ ಪರ ಸಂಘಗಳಿಗೆ ಜನರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಸಂಘಟನೆ ಸದಸ್ಯರು ಪ್ರತಿಭಟನೆ ನಡೆಸಿ ಇಲಾಖಾ ಅಧಿಕಾರಿಗಳ ಅಮಾನತ್ತಿಗೆ ಆಗ್ರಹಿಸಿದರು. ಸರಕಾರದ ವಿರುದ್ಧ ಧಿಕ್ಕಾರ ಕೂಗಿದರು. ಟಿಕೆಟ್‌ ವಿತರಿಸಿದ ಇಲಾಖೆ ಅಧಿಕಾರಿಗೆ ತಕ್ಕ ಶಿಕ್ಷೆ ಆಗಬೇಕೆಂದು ಆಗ್ರಹಿಸಿದರು.

ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಸಾರಿಗೆ ಇಲಾಖೆ ಸಿಬ್ಬಂದಿ ವಿಚಲಿತರಾಗಿದ್ದಾರೆ. ಸ್ಥಳೀಯ ಡಿಪೋ ಕಂಟ್ರೋಲರ್‌ಗೆ ಏನೂ ಮಾಡಬೇಕೆಂದು ತಿಳಿಯದಂತಾಗಿ ಮೇಲಧಿಕಾರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅಧಿಕಾರಿಗಳು ಇಲಾಖೆ ಸ್ಟೋರ್‌ ರೂಮ್‌ನಲ್ಲಿ ಇರುವ ಟಿಕೆಟ್‌ ರೋಲ್‌ ಬಾಕ್ಸ್‌ಗಳನ್ನು ತಡಕಾಡಿದ್ದಾರೆ. ಅಲ್ಲಿದ್ದ ಹತ್ತಾರು ಬಾಕ್ಸ್‌ಗಳಲ್ಲಿ ಒಂದು ಮಹಾರಾಷ್ಟ್ರ ಸಾರಿಗೆ ಇಲಾಖೆಗೆ ಸಂಬಂಧಿ ಸಿದ ಬಾಕ್ಸ್‌ ಆಗಿತ್ತು.

ತಕ್ಷಣ ಬದಲಾಯಿಸಿ ಕನ್ನಡ ಇರುವ ಟಿಕೆಟ್‌ ರೋಲ್‌ ವಿತರಿಸಿದರು. ಸಾರಿಗೆ ಇಲಾಖೆ ಸ್ಪಷ್ಟನೆ: ಕರ್ನಾಟಕ ಮತ್ತು ಮಹಾರಾಷ್ಟ್ರದ ಸಾರಿಗೆ ಇಲಾಖೆಗಳಿಗೆ ಆಂಧ್ರ ಮೂಲದ ಖಾಸಗಿ ಕಂಪನಿಯೊಂದು ಟಿಕೆಟ್‌ ರೋಲ್‌ ಮುದ್ರಿಸಿ ಪೂರೈಸುವ ಗುತ್ತಿಗೆ ಪಡೆದಿದೆ. ಅದರಲ್ಲಿ ಮಹಾರಾಷ್ಟ್ರಕ್ಕೆ ಪೂರೈಸಬೇಕಿದ್ದ ಬಾಕ್ಸ್‌ನಲ್ಲಿ ಒಂದು ಬಾಕ್ಸ್‌ ಗದಗ ನಗರಕ್ಕೆ ಬಂದಿದೆ. ಅದನ್ನೇ ಕಂಡಕ್ಟರ್‌ಗಳಿಗೆ ವಿತರಿಸಿದ ಪರಿಣಾಮ ಮಹಾರಾಷ್ಟ್ರ ಮುದ್ರಿತ ಟಿಕೆಟ್‌ ವಿತರಣೆ ಆಗಿದೆ. ಇದು ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ ಎಂದು ಇಲಾಖಾ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next