ಮಾಸ್ಕೋ : ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಿಇಒ ಎಲೋನ್ ಮಸ್ಕ್ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಸೋಮವಾರ ಮಲ್ಲ ಯುದ್ಧಕ್ಕೆ ಸವಾಲು ಹಾಕಿದ್ದಾರೆ.
ಟ್ವಿಟರ್ ನಲ್ಲಿ ಮಸ್ಕ್ , “ನಾನು ಈ ಮೂಲಕ ವ್ಲಾಡಿಮಿರ್ ಪುಟಿನ್ ಗೆ ಏಕಾಂಗಿ ಹೋರಾಟದ ಹಕ್ಕನ್ನು ಉಕ್ರೇನ್ ಪರವಾಗಿ ನೀಡುತ್ತೇನೆ. ನೀವು ಏನು ಮಾಡುತ್ತೀರಿ? ಈ ಹೋರಾಟಕ್ಕೆ ನೀವು ಒಪ್ಪುತ್ತೀರಾ?” ಎಂದು ಸವಾಲು ಹಾಕಿದ್ದಾರೆ.
ರಷ್ಯಾದ ವರ್ಣಮಾಲೆಯಲ್ಲಿ ಅಧ್ಯಕ್ಷರ ಹೆಸರನ್ನು ಉಲ್ಲೇಖಿಸಿದ್ದು, “ಸ್ಟೇಕ್ಸ್ ಉಕ್ರೇನ್ ಎಂದು ಉಕ್ರೇನಿಯನ್ ಭಾಷೆಯಲ್ಲಿ ದೇಶದ ಹೆಸರನ್ನು ಬರೆದು ಗಮನ ಸೆಳೆದಿದ್ದಾರೆ. ಮುಂದಿನ ಟ್ವೀಟ್‌ನಲ್ಲಿ, ಮಸ್ಕ್ ಸಂಪೂರ್ಣ ಟ್ವೀಟ್ ಅನ್ನು ಕ್ರೆಮ್ಲಿನ್‌ನ ಅಧಿಕೃತ ಟ್ವಿಟರ್ ಖಾತೆ ಯನ್ನು ಟ್ಯಾಗ್ ಮಾಡಿ, ರಷ್ಯನ್ ಭಾಷೆಯಲ್ಲಿ ಹಂಚಿಕೊಂಡಿದ್ದಾರೆ.
ಕೀವ್ ಮೇಲೆ ಆಕ್ರಮಣ ಮಾಡುವ ವಿಚಾರದಲ್ಲಿ ರಷ್ಯಾ ಪಟ್ಟುಬಿಡದ ಕಾರಣ, ಎಲೋನ್ ಮಸ್ಕ್, ಪುಟಿನ್ ಅವರಿಗೆ ಉಕ್ರೇನ್‌ಗಾಗಿ ‘ ಮಲ್ಲ ಯುದ್ಧ’ಕ್ಕೆ ಸಾರ್ವಜನಿಕವಾಗಿ ಸವಾಲು ಹಾಕಿರುವುದು ಭಾರಿ ಸುದ್ದಿಯಾಗಿದ್ದು, ಕೆಲವರು ಸಾಮಾಜಿಕ ತಾಣಗಳಲ್ಲಿ ಇದನ್ನು ಲೇವಡಿ ಮಾಡಿದ್ದಾರೆ.
“ಪುಟಿನ್ ಈ ಸವಾಲನ್ನು ಸ್ವೀಕರಿಸಿದರೆ ಆಶ್ಚರ್ಯಪಡುತ್ತೀರಾ” ಎಂಬ ನೆಟಿಜನ್‌ನ ಪ್ರಶ್ನೆಗೆ ಅವರು ಉತ್ತರಿಸಿದ್ದು, ಅವರಿಗೆ ‘ಗೌರವ’ ನೀಡಲಾಗುವುದು’ ಎಂದು ಹೇಳಿದ್ದಾರೆ.ಈ ಹಿಂದೆ, ಎಲೋನ್ ಮಸ್ಕ್ ಕಂಪನಿಯ ಸ್ಟಾರ್‌ಲಿಂಕ್ ಉಪಗ್ರಹಗಳ ಮೂಲಕ ಉಕ್ರೇನ್‌ಗೆ ಇಂಟರ್ನೆಟ್ ಸಂಪರ್ಕವನ್ನು ಒದಗಿಸಿ ನೇರವಾಗಿದ್ದರು.