Advertisement
ಇದು ಕೃಷಿ ಅವಲಂಬಿಸಿದ್ದು, ಅತಿ ಹೆಚ್ಚು ಕಾಡುಪ್ರಾಣಿಗಳ ಹಾವಳಿಗೆ ತುತ್ತಾಗುವ ಗುತ್ತಿಗಾರು ಜಿ.ಪಂ. ಕ್ಷೇತ್ರದ ಕಡಮಕಲ್ಲು, ಕೊಲ್ಲಮೊಗ್ರು ಭಾಗದ ಜನತೆ ಚುನಾವಣೆಯ ಹೊಸ್ತಿಲಲ್ಲಿ ಮಾತನಾಡುವ ರೀತಿ.
Related Articles
Advertisement
ಎಲ್ಲ ಪಕ್ಷದವರು ಮನೆಗೆ ಬಂದು ನಮಗೇ ಈ ಬಾರಿ ಮತ ಕೊಡಿ ಅಂತಾರೆ. ಆಯಿತಣ್ಣ ಈ ಸಲ ನಿಮಗೇ ಅಂತ ಹೇಳಿಕಳುಹಿಸುತ್ತೇವೆ. ಮೂಲ ಸೌಕರ್ಯಗಳ ಸಮಸ್ಯೆ ಇದೆ. ಅದರ ಕುರಿತು ಅವರಲ್ಲಿ ಅಹವಾಲು ಹೇಳಿದರೆ ಪ್ರಯೋಜನ ಆಗದು. ಹಾಗೇನಾದರೂ ಸಮಸ್ಯೆ ಹೇಳಿಕೊಂಡರೂ ವೋಟು ಕೇಳಲು ಬಂದವರು ವಿಷಯ ಬದಲಾಯಿಸಿ ಬೇರೆಡೆಗೆ ಗಮನ ಸೆಳೆಯುತ್ತಾರೆ ಅಂತ ಯೇನೆಕಲ್ಲು ಮಾದನಮನೆ ನಿವಾಸಿ ಸುಂದರ ಗೌಡ ಹೇಳಿದರು. ಚುನಾವಣೆ ಹೊತ್ತಿಗೆ ಭಿನ್ನ ಭಿನ್ನ ಹಿನ್ನೆಲೆಯ, ಬಹುಬಗೆಯ ಸವಾಲುಗಳನ್ನು ಎದುರಿಸುವ ಮತದಾರರ ಮಾತುಗಳನ್ನು
ಕೇಳುವುದು ಒಂದು ವಿಭಿನ್ನ ಅನುಭವ. ಅದು ಚುನಾವಣೆಯ ಹೊತ್ತಿಗೆ ರಾಜಕೀಯ ಎಬ್ಬಿಸಿದ ಸಂಚಲನದ ಪ್ರತಿಬಿಂಬವೂ ಹೌದು, ಜನರ ನಿತ್ಯ ಬದುಕಿನ ದರ್ಶನವೂ ಹೌದು. ನಕಲ್ ಬಾಧಿತ ಪ್ರದೇಶ
ನಮ್ಮ ಮನೆಗೆ ನಕ್ಸಲರು ಬಂದಿದ್ದರು. ಯಾರಿಗೂ ಹೇಳಬೇಡಿ, ಹೇಳಿದರೆ ಕುಟುಂಬದವರ ಮುಂದೆಯೇ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು. ಅದಾದ ಮೇಲೆ ಪೊಲೀಸರಿಗೆ ಮಾಹಿತಿ ಹೋಗಿ ಅಧಿಕಾರಿಗಳು, ಜನಪ್ರತಿನಿಧಿ ಗಳು ಪ್ರತೀ ವರ್ಷ ಚುನಾವಣೆ ಹೊತ್ತಿಗೆ ಬರುತ್ತಾರೆ, ಹೋಗುತ್ತಾರೆ. ಬೇರೆ ಕಡೆ ಜಾಗ ಕೊಡುತ್ತೇವೆ ಅಂದಿದ್ದರು, ಅದೂ ಕೊಡಲಿಲ್ಲ. ಇರುವ ಭೂಮಿಗೆ 5 ಸೆಂಟ್ಸ್ ಹಕ್ಕುಪತ್ರವೂ ಕೊಡಿಸಲಿಲ್ಲ. ಇಲಾಖೆಯಿಂದ ಇಲಾಖೆಗೆ ಅಲೆದಾಡಿ ಸುಸ್ತಾಗಿ ಹೋಗಿದೆ. ಇದನ್ನೆಲ್ಲ ಮನೆಗೆ ಮತ ಕೇಳಲು ಬಂದವರಿಗೆ ಹೇಳಿದರೆ ಅವರು ಮೂಗಿಗೆ ತುಪ್ಪ ಸವರುವರೀತಿಯಲ್ಲಿ ಮಾತಾಡಿ ಜಾಗ ಖಾಲಿ ಮಾಡುತ್ತಾರೆ- ಇದು ನಕ್ಸಲ್ ಪೀಡಿತ ಭಾಗದ ಕುಟುಂಬದ ಯಜಮಾನ ಬೆಳ್ಯಪ್ಪ ಪಳ್ಳಿಗದ್ದೆ ಅವರ ಮಾತು. ವೋಟು ಬರುವಾಗ ಎಲ್ಲರೂ ನಮಸ್ಕಾರ ಕೊಡುತ್ತಾರೆ, ಮಾತಾಡಿಸುತ್ತಾರೆ. ಇಲ್ಲದಿದ್ದರೆ ಯಾರಿಗೂ ನಾವು ಕಾಣುವುದಿಲ್ಲ. ವೋಟು ಕಳೀಲಿ, ಆಮೇಲೆ ಅಡ್ಡ ಬಂದರೂ ಅವರಿಗೆ ಗೊತ್ತಾಗುವುದೇ ಇಲ್ಲ.
– ಕುಸುಮಾವತಿ,
ಕೂಲಿ ಕಾರ್ಮಿಕ ಮಹಿಳೆ, ಹರಿಹರ ಬಾಲಕೃಷ್ಣ ಭೀಮಗುರ್ಲಿ