Advertisement

ರಸ್ತೆಯಲ್ಲೆ ತಿರುಗಾಡಿದ ಒಂಟಿ ಸಲಗ

03:16 PM Nov 21, 2021 | Team Udayavani |

 ಸಕಲೇಶಪುರ: ಒಂದೆಡೆ ಕಾಡಾನೆ ಸಮಸ್ಯೆ ಬಗೆಹರಿಸುವಂತೆ ತಾಲೂಕಿನ ಬಾಳ್ಳುಪೇಟೆಯಲ್ಲಿ ಪ್ರತಿಭಟನೆ ನಡೆಯುತ್ತಿದ್ದರೆ ಮತ್ತೂಂದು ಕಡೆ ಒಂಟಿ ಸಲಗವೊಂದು ಮುಖ್ಯ ರಸ್ತೆಯಲ್ಲೆ ರಾಜರೋಷವಾಗಿ ಸಂಚರಿಸಿದ್ದರಿಂದ ಜನರಲ್ಲಿ ಆತಂಕ ಹುಟ್ಟು ಹಾಕಿದ ಘಟನೆ ನಡೆದಿದೆ.

Advertisement

ತಾಲೂಕಿನ ಬಾಳ್ಳುಪೇಟೆ-ಜಮ್ಮನಹಳ್ಳಿ ರಸ್ತೆಯ ಬದಿಯಲ್ಲಿರುವ ಮಡ್ಡನಕೆರೆ ಗ್ರಾಮದ ಸಮೀಪ ಕಾಡಾನೆಯೊಂದು ರಾಜರೋಷವಾಗಿ ಸಂಚರಿಸಿದ್ದರಿಂದ ವಾಹನ ಸವಾರರು ಹಾಗೂ ಗ್ರಾಮಸ್ಥರು ಭಯಭೀತರಾದ ಘಟನೆ ನಡೆಯಿತು. ಕಾಡಾನೆ ಶಾಂತಯುತವಾಗಿ ಇದ್ದಿದ್ದರಿಂದ ಯಾವುದೇ ರೀತಿಯ ಅಹಿತಕರ ಘಟನೆ ನಡೆದಿಲ್ಲ.

ಇದನ್ನೂ ಓದಿ;- ವಿಕಲಚೇತನ ಮಹಿಳೆಯನ್ನು ಎತ್ತಿಕೊಂಡು ಬಂದು ಮತದಾನ : ಅವ್ಯವಸ್ಥೆಗೆ ಮತದಾರರ ಆಕ್ರೋಶ

ಈ ಹಿಂದೆ ಕಾಡಿನಲ್ಲಿರುತ್ತಿದ್ದ ಕಾಡಾನೆಗಳು ನಾಡಿಗೆ ಲಜ್ಜೆಯಿಡುತ್ತಿರುವುದು ಜನರನ್ನು ಆತಂಕಕ್ಕೆ ಈಡು ಮಾಡಿದೆ. ಕಾಡಾನೆ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಹಲವು ಪ್ರತಿಭಟನೆಗಳು ನಡೆದರು ಸಹ ಯಾವುದೆ ಸರ್ಕಾರಗಳು ಸ್ಪಂದಿಸಿಲ್ಲ, ಕಾಡಾನೆ ದಾಳಿಯಿಂದ ಯಾರಾದರು ಸಾವಿಗೀಡಾದಾಗ ಮಾತ್ರ ಜನ ರೊಚ್ಚಿಗೇಳುತ್ತಾರೆಂಬ ಭಯದಿಂದ ಒಂದೆರಡು ಆನೆಗಳನ್ನು ಅರಣ್ಯ ಇಲಾಖೆಯವರು ಹಿಡಿದು ಸ್ಥಳಾಂತರ ಮಾಡುವುದು ಸಾಮಾನ್ಯವಾಗಿದ್ದು ಈ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕದಿರುವುದು ಮಲೆನಾಡಿನ ಜನತೆಯ ದುರಂತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next