Advertisement

ಮಹಾ ವಿಧಾನಸಭಾ ಚುನಾವಣೆ: ಒಗ್ಗಟ್ಟಾಗಿ ಎದುರಿಸಲು ವಿಪಕ್ಷಗಳ ನಿರ್ಧಾರ

03:05 PM May 30, 2019 | Team Udayavani |

ಮುಂಬಯಿ: ಲೋಕಸಭಾ ಚುನಾವಣೆಯ ಹೀನಾಯ ಸೋಲಿನಿಂದ ಪಾಠ ಕಲಿತುಕೊಂಡಿರುವ ವಿಪಕ್ಷಗಳು ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯನ್ನು ಒಗ್ಗಟ್ಟಾಗಿ ಎದುರಿಸಲು ನಿರ್ಧರಿಸಿವೆ.

Advertisement

ಈ ಸಂಬಂಧ ಮಂಗಳವಾರ ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಧನಂಜಯ್‌ ಮುಂಢೆ ಅವರ ಅಧಿಕೃತ ನಿವಾಸದಲ್ಲಿ ಕಾಂಗ್ರೆಸ್‌ ಮತ್ತು ರಾಷ್ಟ್ರವಾದಿ ಕಾಂಗ್ರೆಸ್‌ ಪಕ್ಷ ಸೇರಿದಂತೆ ಎÇÉಾ ಪ್ರಮುಖ ವಿರೋಧ ಪಕ್ಷಗಳ ನಾಯಕ ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ಲೋಕಸಭಾ ಚುನಾವಣೆಯ ಫಲಿತಾಂಶಗಳನ್ನು ಪರಿಶೀಲಿಸಿದ ಅನಂತರ ನಾವು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಒಟ್ಟಿಗೆ ಸ್ಪರ್ಧಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ ಎಂದು ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌ ಚವಾಣ್‌ ಹೇಳಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ವಿಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದ್ದರಿಂದಾಗಿ ಮತಗಳ ಭಾರಿ ವಿಭಜನೆ ಉಂಟಾಯಿತು ಮತ್ತು ಈ ಕಾರಣದಿಂದಾಗಿ ವಿಪಕ್ಷಗಳ ಅಭ್ಯರ್ಥಿಗಳು ಸಾಕಷ್ಟು ನಷ್ಟ ಎದುರಿಸುವಂತಾಯಿತು. ಆದರೆ ಇನ್ಮುಂದೆ ನಾವು ಅದನ್ನು ಪುನರಾವರ್ತಿಸಲು ಬಯಸುವುದಿಲ್ಲ ಎಂದವರು ನುಡಿದಿದ್ದಾರೆ.

ವಿಧಾನಸಭೆ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಾಧಾಕೃಷ್ಣ ವಿಖೆ ಪಾಟೀಲ್‌ ಅವರೊಂದಿಗೆ ಇತರ ಕಾಂಗ್ರೆಸ್‌ ಶಾಸಕರು ಬಿಜೆಪಿಯಲ್ಲಿ ಸೇರಿಕೊಳ್ಳುತ್ತಾರೆ ಎಂಬ ವರದಿಯ ಕುರಿತು ಮಾತನಾಡಿದ ಚವಾಣ್‌ ಅವರು, ನನ್ನ ಪ್ರಕಾರ ಹಾಗೆ ಏನು ಆಗುವುದಿಲ್ಲ. ಒಂದೊಮ್ಮೆ ಹಾಗೆ ಆದಲ್ಲಿ ಸಂಬಂಧಪಟ್ಟ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಈ ಬಾರಿ ನಾವು ಎಲ್ಲಾ ಪಕ್ಷಗಳು ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೆ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದೇವೆ ಎಂದು ಶಾಸಕ ನಸೀಮ್‌ ಖಾನ್‌ ಹೇಳಿದ್ದಾರೆ.

ಸಭೆಯಲ್ಲಿ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಅಶೋಕ್‌ ಚವಾಣ್‌, ಎನ್‌ಸಿಪಿ ರಾಜ್ಯಾಧ್ಯಕ್ಷ ಜಯಂತ್‌ ಪಾಟೀಲ್‌, ಅಜಿತ್‌ ಪವಾರ್‌, ಛಗನ್‌ ಭುಜಬಲ್‌, ಧನಂಜಯ್‌ ಮುಂಢೆ, ದಿಲೀಪ್‌ ವಾಲ್ಸೆ ಪಾಟೀಲ್‌, ವಿಜಯ್‌ ವಡೆಟ್ಟಿವಾರ್‌, ಹೊಸದಾಗಿ ಚುನಾಯಿತ ಸಂಸದ ಸುನೀಲ್‌ ತಟ್ಕರೆ, ನಸೀಂ ಖಾನ್‌, ಅಬೂ ಆಸಿಂ ಆಜ್ಮಿ, ರವಿ ರಾಣಾ, ಹಸನ್‌ ಮುಶ್ರಿಫ್‌, ಬಾಬಾಜಾನಿ ದುರಾನಿ, ಶೇತ್ಕರಿ ಕಾಮಾYರ್‌ ಪಕ್ಷದ ನಾಯಕ ಜಯಂತ್‌ ಪಾಟೀಲ್‌, ಗಣಪತ್‌ರಾವ್‌ ದೇಶು¾ಖ್‌, ಸಿಪಿಐ ನಾಯಕ ಪ್ರಕಾಶ್‌ ರೆಡ್ಡಿ, ಹಿತೇಂದ್ರ ಠಾಕುರ್‌, ಶರದ್‌ ರಣ್‌ಪಿಸೆ, ಜತೇಂದ್ರ ಕವಾಡೆ, ರಾಜೇಂದ್ರ ಗವಾಯಿ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.

Advertisement

ವಂಚಿತ ಬಹುಜನ ಆಘಾಡಿಯ ಅಗತ್ಯವಿದೆ

ವಿಧಾನಸಭೆ ಚುನಾವಣೆಯಲ್ಲಿ ಪ್ರಕಾಶ್‌ ಅಂಬೇಡ್ಕರ್‌ ಅವರ ವಂಚಿತ ಬಹುಜನ ಆಘಾಡಿ(ವಿಬಿಎ)ಯನ್ನು ಜತೆಗೆ ತೆಗೆದುಕೊಳ್ಳುವುದು ಆವಶ್ಯಕವಾಗಿದೆ ಎಂದು ನಾವು ಭಾವಿಸುತ್ತೇವೆ ಎಂದು ಎನ್‌ಸಿಪಿ ರಾಜ್ಯಾಧ್ಯಕ್ಷ ಜಯಂತ್‌ ಪಾಟೀಲ್‌ ಅವರು ಅಭಿಪ್ರಾಯಪಟ್ಟಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ವಂಚಿತ ಬಹುಜನ ಆಘಾಡಿಗೆ ಉತ್ತಮ ಮತ ಲಭಿಸಿದೆ. ಇಂತಹ ಪರಿಸ್ಥಿತಿಯಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಮತಗಳ ವಿಭಜನೆಯನ್ನು ತಡೆಗಟ್ಟಲು ಅದರೊಂದಿಗೆ ಮೈತ್ರಿ ಅವಶ್ಯಕವಾಗಿದೆ ಎಂದವರು ಹೇಳಿದ್ದಾರೆ. ಆದರೆ, ರಾಜ್‌ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆ(ಎಂಎನ್‌ಎಸ್‌)ಯನ್ನು ಮಹಾ ಮೈತ್ರಿಕೂಟದಲ್ಲಿ ಸೇರಿಸಿಕೊಳ್ಳುವ ಬಗ್ಗೆ ಪಾಟೀಲ್‌ ಅವರು ಏನೂ ಹೇಳಿಲ್ಲ. ಲೋಕಸಭಾ ಚುನಾವಣೆಯ ಫಲಿತಾಂಶದ ಅನಂತರ ಜನರ ಮನಸ್ಸಿನಲ್ಲಿ ಇವಿಎಂ ಕುರಿತ ಅನುಮಾನವು ಖಾಯಂ ಆಗಿ ಉಳಿದಿದೆ ಎಂದವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next