Advertisement
ಅ.9ರಂದು ಚುನಾವಣೆ ದಿನಾಂಕ ಘೋಷಣೆ ಯಾದಾಗಿನಿಂದ ಈವರೆಗೆ ಉಡುಗೊರೆಗಳು, ನಗದು, ಡ್ರಗ್ಸ್, ಮದ್ಯ, ಅಮೂಲ್ಯ ಲೋಹಗಳು ಸೇರಿದಂತೆ 1,760 ಕೋಟಿ ರೂ. ಮೌಲ್ಯದ ಸರಕುಗಳನ್ನು ಜಪ್ತಿ ಮಾಡಲಾಗಿದೆ. ಈ ಮೊತ್ತವು ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. 2018ರ ಚುನಾವಣೆಯಲ್ಲಿ 239.15 ಕೋಟಿ ರೂ. ಮೌಲ್ಯದ ಸರಕುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು ಎಂದು ಆಯೋಗ ಮಾಹಿತಿ ನೀಡಿದೆ.
Related Articles
ರಾಜಸ್ಥಾನದಲ್ಲಿ ಈಗಾಗಲೇ ಕಡಿಮೆ ದರದಲ್ಲಿ ಎಲ್‌ಪಿಜಿ ಸಿಲಿಂಡರ್ ಘೋಷಿಸಿರುವ ಬಿಜೆಪಿ ಈಗ ಮತ್ತೂಂದು ಮಹತ್ವದ ಘೋಷಣೆ ಮಾಡಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ ನೀಡಲಾಗುತ್ತಿದ್ದ ವಾರ್ಷಿಕ ಸಹಾಯಧನವನ್ನು ಈಗಿರುವ 6 ಸಾವಿರ ರೂ.ಗಳಿಂದ 12 ಸಾವಿರ ರೂ.ಗಳಿಗೆ ಏರಿಸುವುದಾಗಿ ಸೋಮವಾರ ಸ್ವತಃ ಪ್ರಧಾನಿ ಮೋದಿಯವರೇ ಆಶ್ವಾಸನೆ ನೀಡಿದ್ದಾರೆ. ಹನುಮಾನ್‌ಗಢದಲ್ಲಿ ನಡೆದ ರ್ಯಾಲಿಯಲ್ಲಿ ಅವರು ಈ ಘೋಷಣೆ ಮಾಡಿದ್ದು, ಬಿಜೆಪಿ ಅಧಿಕಾರಕ್ಕೇರಿದರೆ ರೈತರಿಗೆ ಬೋನಸ್ ನೀಡುವುದಾಗಿಯೂ ತಿಳಿಸಿದ್ದಾರೆ. ಇದೇ ವೇಳೆ ರಾಜಸ್ಥಾನದ ಕಾಂಗ್ರೆಸ್ ಸರಕಾರಕ್ಕೆ ಓಲೈಕೆ ರಾಜಕಾರಣ ಬಿಟ್ಟು ಬೇರೇನೂ ಗೊತ್ತಿಲ್ಲ. ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವುದೇ ಅದರ ಗುರಿ ಎಂದೂ ಮೋದಿ ಹೇಳಿದ್ದಾರೆ.
Advertisement
ಯಾರು ಜಾತಿ ಅಥವಾ ಧರ್ಮದ ಹೆಸರಲ್ಲಿ ಮತ ಯಾಚಿಸು ತ್ತಾರೋ, ಅಂಥವರು ತಮ್ಮ ಕೆಲಸದ ಆಧಾರದಲ್ಲಿ ಮತ ಕೇಳುವ ಸ್ಥಿತಿಯಲ್ಲಿಲ್ಲ ಎಂದು ಅರ್ಥ. ಹೀಗಾಗಿ ಪಕ್ಷಗಳು ಮಾಡಿರುವ ಕೆಲಸವನ್ನು ನೋಡಿಕೊಂಡು ಮತ ಚಲಾಯಿಸಿ.-ಪ್ರಿಯಾಂಕಾ ವಾದ್ರಾ,
ಕಾಂಗ್ರೆಸ್ ನಾಯಕಿ ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ನೀಡಿರುವ ಶೇ.4 ಮೀಸಲಾತಿಯನ್ನು ಕಿತ್ತೂಗೆದು, ಅದನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಹಂಚುತ್ತೇವೆ.
-ಅಮಿತ್ ಶಾ, ಕೇಂದ್ರ ಗೃಹ ಸಚಿವ ತೆಲಂಗಾಣದಲ್ಲಿರುವ ಕಾಂಗ್ರೆಸ್ ಸಂಸದರು ಆರೆಸ್ಸೆಸ್‌ನಲ್ಲಿದ್ದವರು. ಕಾಂಗ್ರೆಸ್‌ನ ರಿಮೋಟ್ ಕಂಟ್ರೋಲ್ ಇರುವುದು ಮೋಹನ್ ಭಾಗವತ್ ಅವರ ಕೈಯ್ಯಲ್ಲಿ. ಬಿಜೆಪಿ ಮತ್ತು ಕಾಂಗ್ರೆಸ್‌ನದ್ದು ದ್ವೇಷದಿಂದ ಕೂಡಿದ ರಾಜಕಾರಣ.
-ಅಸಾದುದ್ದೀನ್ ಒವೈಸಿ, ಎಐಎಂಐಎಂ ಮುಖ್ಯಸ್ಥ