Advertisement
ಎಡ್ತೂರು ನಿರಂಜನ್ ಜೈನ್ ಅವರ ತೋಟದಲ್ಲಿ ಈ ಅಪರೂಪದ ವಸ್ತು ಕಾಣಸಿಕ್ಕಿದೆ. ಕಳೆದೆರಡು ದಿನದ ಹಿಂದೆ ಅಡಿಕೆ ತೋಟಕ್ಕೆ ನೀರು ಹಾಯಿಸಲೆಂದು ಹೋಗಿದ್ದ ವೇಳೆ ಅಡಿಕೆ ಮರದ ಬುಡದಲ್ಲಿ ಈ ವಸ್ತು ಕಂಡುಬಂದಿದೆ. ದ್ವಿಚಕ್ರ ವಾಹನದ ಬ್ಯಾಟರಿಯಂತಿರುವ ಈ ಯಂತ್ರಕ್ಕೆ ಪುಟ್ಟ ಪ್ಯಾರಾಚೂಟ್ ಅಳವಡಿಸಲಾಗಿದೆ. ತಯಾರಿಕಾ ಸಂಸ್ಥೆಯ ಹೆಸರು ಬರೆಯಲಾಗಿದೆ.
ಈ ವಸ್ತುವಿನ ಬಗ್ಗೆ ಆತಂಕ ಪಡಬೇಕಾಗಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿ ಸಿ.ಎನ್. ಪ್ರಭು ಹೇಳಿದ್ದಾರೆ. ಇದು ಭಾರತೀಯ ಹವಾಮಾನ ಇಲಾಖೆ ಹವಾಮಾನ ವೈಪರೀತ್ಯವನ್ನು ಮಾಪನ ಮಾಡುವ ಯಂತ್ರ. ಇಲಾಖೆ ಆಗಾಗ ಇಂತಹ ಯಂತ್ರಗಳನ್ನು ಆಗಸಕ್ಕೆ ರವಾನಿಸುತ್ತಿರುತ್ತದೆ. ಪ್ಯಾರಾಚೂಟ್‌ನಲ್ಲಿ ಸಮಸ್ಯೆಯಾದಾಗ ಸಾಮಾನ್ಯವಾಗಿ ಇದು ಸಮುದ್ರ ಅಥವಾ ಅರಣ್ಯ ಪ್ರದೇಶದಲ್ಲಿ ಬೀಳುತ್ತದೆ. ಆಕಸ್ಮಿಕವಾಗಿ ಜನವಸತಿ ಪ್ರದೇಶದಲ್ಲಿ ಬಿದ್ದಿರಬಹುದು ಎಂದು ತಿಳಿಸಿದ್ದಾರೆ.