ಡರ್ಬನ್: ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕುಸಿತ ಅನುಭವಿಸಿದರೂ ಡರ್ಬನ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯ ಒಟ್ಟು 402 ರನ್ನುಗಳ ಭಾರೀ ಮುನ್ನಡೆಯೊಂದಿಗೆ ಹಿಡಿತ ಸಾಧಿಸಿದೆ. ದಕ್ಷಿಣ ಆಫ್ರಿಕಾ ಒತ್ತಡಕ್ಕೆ ಸಿಲುಕಿದೆ.
3ನೇ ದಿನದಾಟ ಬೆಳಕಿನ ಅಭಾವದಿಂದ ಬೇಗನೇ ಕೊನೆಗೊಂಡಾಗ ಆಸ್ಟ್ರೇಲಿಯ ತನ್ನ 2ನೇ ಸರದಿಯಲ್ಲಿ 9 ವಿಕೆಟಿಗೆ 213 ರನ್ ಮಾಡಿತ್ತು. ಆಸೀಸ್‌ಗೆ ಮೊದಲ ಇನ್ನಿಂಗ್ಸ್‌ನಲ್ಲಿ 189 ರನ್ನುಗಳ ಭರ್ಜರಿ ಲೀಡ್ ಲಭಿಸಿತ್ತು. ಶನಿವಾರ 2ನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯ ಉತ್ತಮ ಓಪನಿಂಗ್ ಲಭಿಸಿತಾದರೂ ಬಳಿಕ ಕುಸಿಯುತ್ತಲೇ ಹೋಯಿತು. ಬಾನ್‌ಕ್ರಾಫ್ಟ್ 53, ಸ್ಮಿತ್ 38, ಶಾನ್ ಮಾರ್ಷ್ 33, ವಾರ್ನರ್ 28 ರನ್ ಹೊಡೆದರು. ಆಫ್ರಿಕಾ ಪರ ಮಾರ್ಕೆಲ್ ಮತ್ತು ಮಹಾರಾಜ್ ತಲಾ 3, ರಬಾಡ 2 ವಿಕೆಟ್ ಕಿತ್ತರು.