Advertisement

ತಾತ್ಕಾಲಿಕ ಬಸ್‌ ತಂಗುದಾಣ ಅಪಘಾತಗಳಿಗೆ ಕಾರಣ!

06:10 AM Jun 19, 2018 | Team Udayavani |

ತೆಕ್ಕಟ್ಟೆ: ಕುಂದಾಪುರ – ಸುರತ್ಕಲ್‌ ಚತುಷ್ಪಥ ಕಾಮಗಾರಿಯ ಸಂದರ್ಭದಲ್ಲಿ ತೆಕ್ಕಟ್ಟೆ ಗ್ರಾಮದಲ್ಲಿ  ಶಾಶ್ವತ ಬಸ್‌ ತಂಗುದಾಣಕ್ಕೆ ಅವಕಾಶ ಕಲ್ಪಿಸದ ಹಿನ್ನೆಲೆಯಲ್ಲಿ ಸ್ಥಳೀಯ ಸಂಘ-ಸಂಸ್ಥೆಗಳು ತಾತ್ಕಾಲಿಕ ಬಸ್‌ ತಂಗುದಾಣಗಳನ್ನು ನಿರ್ಮಿಸಿವೆ. ಆದರೆ ಈ ತಂಗುದಾಣ ಸಮೀಪ ಬಸ್‌ಗಳು ನಿಂತಾಗ ಮಲ್ಯಾಡಿ ಒಳ ಮಾರ್ಗದಿಂದ ರಾ.ಹೆ.66 ಕ್ಕೆ ಪ್ರವೇಶಿಸುವ ವಾಹನಗಳಿಗೆ ಗೊಂದಲ ಏರ್ಪಟ್ಟು ಅಪಘಾತಕ್ಕೆ ಕಾರಣವಾಗುತ್ತಿದೆ.
 
ಪ್ರಮುಖ ಭಾಗದಲ್ಲಿ ತಾತ್ಕಾಲಿಕ ಬಸ್‌ ತಂಗುದಾಣ ನಿರ್ಮಿಸಿದರೂ ಇದು ರಸ್ತೆ ನಿಯಮಕ್ಕೆ ವಿರುದ್ಧವಾಗಿದ್ದು, ಸ್ಥಳಾಂತರಕ್ಕೆ ಸ್ಥಳೀಯರು ಒತ್ತಾಯಿಸಿದ್ದಾರೆ. ಈಗಿರುವ ತಾತ್ಕಾಲಿಕ ಬಸ್‌ ತಂಗುದಾಣ ತೆಕ್ಕಟ್ಟೆ ಶ್ರೀ ಮಹಾಲಿಂಗೇಶ್ವರ ದೇವಳ ಮುಂಭಾಗಕ್ಕೆ ಸ್ಥಳಾಂತರಗೊಳಿಸಿದರೆ ಒಳಿತು ಎಂದು ಸ್ಥಳೀಯರಾದ ಸುಧೀಂದ್ರ ಗಾಣಿಗ ಅಭಿಪ್ರಾಯಪಟ್ಟಿದ್ದಾರೆ.

Advertisement

ಪರಿಹಾರ ಕಂಡುಕೊಳ್ಳಲಿ
ವೈಜ್ಞಾನಿಕವಾಗಿ ಗ್ರಾ.ಪಂ ವ್ಯಾಪ್ತಿಯಲ್ಲಿನ ಒಳಚರಂಡಿ ಸಮಸ್ಯೆಯಿಂದಾಗಿ ಮಳೆ ಬಂದಾಗ ತಾತ್ಕಾಲಿಕ ಬಸ್‌ ತಂಗುದಾಣ ಸಂಪೂರ್ಣ ಜಲಾವೃತಗೊಳ್ಳುತ್ತಿದ್ದು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಇಲ್ಲಿನ ಸಮಸ್ಯೆ ಬಗ್ಗೆ ಅಧ್ಯಯನ ಮಾಡಿ ಶಾಶ್ವತ  ಪರಿಹಾರ ಕಂಡುಕೊಳ್ಳಬೇಕು.  
– ಸತೀಶ್‌ಕುಮಾರ್‌, ತೆಕ್ಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next