Advertisement
ಅಭಿಯಾನದಲ್ಲಿ ಪಾಲ್ಗೊಂಡ ಗ್ರಾಪಂ ಅಭಿವೃದ್ಧಿ ಅಧಿಕಾರಿ ಭಾರ್ಗೇಶ್ವರಿ ಮಾತನಾಡಿ, ಗ್ರಾಮೀಣ ಭಾಗದ ಜನರಿಗೆ ಬೇಸಿಗೆಯ ಸಮಯದಲ್ಲಿ ಮೂರು ತಿಂಗಳು ಕೆಲಸ ಒದಗಿಸುವ ಉದ್ದೇಶದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ “ದುಡಿಯೋಣ ಬಾ’ ಎಂಬ ಯೋಜನೆಜಾರಿಗೆ ತಂದಿದೆ. ಗುಳೆ ತಡೆಯುವ ಉದ್ದೇಶದಿಂದ ನರೇಗಾಯೋಜನೆಯಲ್ಲಿ ಸ್ಥಳೀಯವಾಗಿ ಕೆಲಸ ಒದಗಿಸಲು ಈಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರ ಸದುಪಯೋಗ ಪಡೆಯಿರಿ ಎಂದರು.
Related Articles
Advertisement
ಈ ವೇಳೆ ಮಾತನಾಡಿದ ಅವರು, 60ದಿನಗಳ ಕಾಲದ ಬೇಸಿಗೆ ಸಂದರ್ಭದಲ್ಲಿಅಕುಶಲ ಕೂಲಿ ಕಾರ್ಮಿಕರಿಗೆ ಕೆಲಸನೀಡುವ ಉದ್ದೇಶದ ಹಿನ್ನೆಲೆಯಲ್ಲಿ ಈ ಅಭಿಯಾನ ಆಯೋಜಿಸಲಾಗಿದೆ.ಈ ಅಭಿಯಾನ ಮಾ. 15ರಿಂದ3 ತಿಂಗಳವರೆಗೆ ನಿರಂತರವಾಗಿ ನಡೆಯಲಿದೆ ಎಂದರು.
ತಾಲೂಕು ಐಇಸಿ ಸಂಯೋಜಕ ಚಂದ್ರಶೇಖರ ಹಿರೇಮಠ ಮಾತನಾಡಿ,ಕಾಟಾಪೂರ ಗ್ರಾಪಂ ವ್ಯಾಪ್ತಿಯ ದುಡಿಯೋಣು ಬಾ ಅಭಿಯಾನ ಗುಳೆತಡೆಯುವ ಉದ್ದೇಶ ಹೊಂದಿದೆ. ಸದರಿ ಅಭಿಯಾನದಲ್ಲಿ 261 ಜನರು ಕೆಲಸ ಮಾಡುತ್ತಿದ್ದಾರೆ ಎಂದರು. ಗ್ರಾಪಂ ಅಧ್ಯಕ್ಷ ಮಂಜುನಾಥ ಪಾವಿ, ಪಿಡಿಒ ಹರೀಶ ಮೆಣಸಿನಕಾಯಿ, ಗ್ರಾಪಂ ಸದಸ್ಯರು ಹಾಜರಿದ್ದರು.