Advertisement

UAE: ಸಂಚಾರಿ ನಿಯಮ ಉಲ್ಲಂಘನೆ ಫೈನ್ ಡಿಸ್ಕೌಂಟ್ ಇನ್ನು ದೇಶವ್ಯಾಪಿ?

10:30 AM Aug 23, 2019 | Team Udayavani |

ದುಬಾಯಿ: ಸಂಚಾರ ಸುರಕ್ಷತೆಗಾಗಿ ದುಬಾಯಿ ಪೊಲೀಸರು ವಿನೂತನ ಯೋಜನೆಯೊಂದು ಜಾರಿಗೊಳಿಸಿ ಅದರಲ್ಲಿ ಯಶಸ್ಸು ಕಂಡಿದ್ದಾರೆ. ಮತ್ತು ಈ ಯೋಜನೆಯನ್ನು ಇದೀಗ ಸಂಯುಕ್ತ ಅರಬ್ ಎಮಿರೇಟ್ಸ್ ವ್ಯಾಪ್ತಿಯಲ್ಲಿ ವಿಸ್ತರಿಸಲು ಯೋಚಿಸಲಾಗುತ್ತಿದೆ.

Advertisement

ಈ ವರ್ಷ ಫೆಬ್ರವರಿಯಲ್ಲಿ ದುಬಾಯಿಯಲ್ಲಿ ಪ್ರಾರಂಭಗೊಂಡ ಈ ವಿನೂತನ ಯೋಜನೆಯಂತೆ ಮೂರು ತಿಂಗಳುಗಳವರೆಗೆ ಸಂಚಾರಿ ನಿಯಮ ಉಲ್ಲಂಘಿಸದೇ ಇರುವ ಚಾಲಕರಿಗೆ ಅವರು ಈ ಹಿಂದೆ ಕಟ್ಟಿರುವ ದಂಡದಲ್ಲಿ 25 ಪ್ರತಿಶತ ರಿಯಾಯ್ತಿಯನ್ನು ನೀಡಲಾಗುತ್ತದೆ. ಇನ್ನು ಆರು ತಿಂಗಳುಗಳವರೆಗೆ ಯಾವುದೇ ಸಂಚಾರಿ ನಿಯಮ ಉಲ್ಲಂಘಿಸದೇ ಇದ್ದಲ್ಲಿ ಅಂತವರಿಗೆ ಹಿಂದೆ ಪಾವತಿಸಿದ ದಂಡದ 50 ಪ್ರತಿಶತ ರಿಯಾಯ್ತಿ ಇದೆ. ಇನ್ನು ಒಂಭತ್ತು ತಿಂಗಳವರೆಗೆ ಯಾವುದೇ ಸಂಚಾರಿ ನಿಯಮ ಉಲ್ಲಂಘನೆಯಾಗದಿದ್ದಲ್ಲಿ ಅಂತಹ ವಾಹನ ಚಾಲಕರ ದಂಡದ ಪೂರ್ತಿ ಹಣ ವಾಪಾಸು ನೀಡಲಾಗುತ್ತದೆ.

ಸುರಕ್ಷತಾ ಚಾಲನೆ ಅಭಿಯಾನದಡಿಯಲ್ಲಿ ಪರಿಚಯಿಸಲಾಗಿರುವ ಈ ಯೋಜನೆಯಿಂದ ಇದುವರೆಗೆ ಸುಮಾರು 425,371 ವಾಹನ ಚಾಲಕರು ಪ್ರಯೋಜನ ಹೊಂದಿದ್ದಾರೆ. ಹಾಗಾಗಿ ಇದೀಗ ಈ ಯಶಸ್ವಿ ಯೋಜನೆಯನ್ನು ದೇಶವ್ಯಾಪಿ ವಿಸ್ತರಿಸಲು ಅರಬ್ ಆಡಳಿತ ಯೋಚಿಸುತ್ತಿದೆ.

ಈ ವಿಚಾರವನ್ನು ಸ್ವತಃ ಯು.ಎ.ಇ. ಫೆಡರಲ್ ಟ್ರಾಫಿಕ್ ಕೌನ್ಸಿಲ್ ಇದರ ನಿರ್ದೇಶಕ ಮತ್ತು ಕಾರ್ಯಚಟುವಟಿಕೆಗಳ ಮುಖ್ಯ ಕಮಾಂಡರ್ ಆಗಿರುವ ಮೇಜರ್ ಜನರಲ್ ಮೊಹಮ್ಮದ್ ಸೈಫ್ ಅಲ್ ಝಫೈನ್ ಅವರು ತಿಳಿಸಿದ್ದಾರೆ. ಮಾತ್ರವಲ್ಲದೆ ಈ ಪ್ರಸ್ತಾವನೆಯನ್ನು ಮಂಡಳಿಯ ಮುಂದೆ ಇರಿಸಿ ಅವರ ನಿರ್ಧಾರಕ್ಕೆ ಬಿಡಲಾಗುವುದು ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next