Advertisement

ಕೊರಿಯರ್‌ ಮೂಲಕ ಡ್ರಗ್ಸ್‌ ಪಾರ್ಸೆಲ್ ‌: ಅನುಮಾನ ಬಾರದಂತೆ ಗ್ರಾಹಕರಿಗೆ ಡೆಲಿವರಿ

01:54 PM Nov 15, 2020 | Suhan S |

ಬೆಂಗಳೂರು: ಸ್ಪೀಕರ್‌ ಬಾಕ್ಸ್‌, ಬೊಂಬೆ, ಖಾಲಿ ಸಿಪಿಯುಗಳು ಹಾಗೂ ಮೆಡಿಕಲ್‌ ಕಿಟ್‌ಗಳ ಮೂಲಕ ಮಾದಕ ವಸ್ತುವನ್ನು ನೆರೆ ರಾಜ್ಯಗಳಿಂದ ತರಿಸಿಕೊಂಡು ನಗರದಲ್ಲಿ ಮಾರುತ್ತಿದ್ದ ಮೂವರು ಅಂತಾರಾಜ್ಯ ದಂಧೆಕೋರರನ್ನು ಮೈಕೋ ಲೇಔಟ್ ‌ಪೊಲೀಸರು ಬಂಧಿಸಿದ್ದಾರೆ.

Advertisement

ಜಾರ್ಖಂಡ್‌ ಮೂಲದಅಯೂಶ್‌ ಪಾಂಡೆ(22), ರೋಹಿತ್‌ ರಾಮ್‌(22) ಮತ್ತು ಅಸ್ಸಾಂ ಮೂಲದ ನೂರ್‌ ಅಲಿ(30) ಬಂಧಿತರು. ಅವರಿಂದ 23.80ಲಕ್ಷರೂ.ಮೌಲ್ಯದಎಂಟು ಕೆ.ಜಿ. ಗಾಂಜಾ, ನಾಲ್ಕು ಕೆ.ಜಿ. ಚಾಕೋಲೇಟ್‌ ಮಾದರಿಯಚರಸ್‌, 170 ಗ್ರಾಂ ಮ್ಯಾಂಗೋ ಗಾಂಜಾ, 120 ಗ್ರಾಂ ಹ್ಯಾಶೀಷ್‌ ಆಯಿಲ್‌, 270 ಗ್ರಾಂ ಚರಸ್‌, 8 ಗ್ರಾಂ ಬ್ರೌನ್‌ ಶುಗರ್‌,9ಗ್ರಾಂ ಎಂಡಿಎಂ, 100 ಎಲ್‌ಎಸ್‌ಡಿ ಸ್ಟ್ರೀಪ್ಸ್‌ಗಳು ಮತ್ತು ಎರಡು ದ್ವಿಚಕ್ರ ವಾಹನಗಳು ಹಾಗೂ ಮೂರು ಮೊಬೈಲ್‌ಗ‌ಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.

ಈ ಪೈಕಿ ಆಯೂಷ್‌ ಪಾಂಡೆ ಮತ್ತು ರೋಹಿತ್‌ ರಾಮ್‌ ನಗರದ ಖಾಸಗಿ ಕಂಪನಿಯಲ್ಲಿ ನೌಕರರಾಗಿದ್ದು, ಮಾದಕ ವಸ್ತು ಮಾರಾಟವನ್ನುಪ್ರವೃತ್ತಿಯಾಗಿಸಿಕೊಂಡಿದ್ದರು. ನೂರ್‌ ಆಲಿ ಡೋನ್ಜ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕೆಲ ತಿಂಗಳ ಹಿಂದೆ ಕೆಲಸಕ್ಕೆ ವಜಾಗೊಂಡಿದ್ದಾನೆ ಎಂದು ಪೊಲೀಸರು ಹೇಳಿದರು.

ವಿಚಾರಣೆ ವೇಳೆ, ನೆರೆ ರಾಜ್ಯದ ಅಪರಿಚಿತ ವ್ಯಕ್ತಿಯೊಬ್ಬ ಡಿಟಿಡಿಸಿ ಮತ್ತು ಟ್ರ್ಯಾಕ್‌-1 ಕೊರಿಯರ್‌ ಮೂಲಕ ರಾಜಸ್ಥಾನ, ಪಶ್ಚಿಮ ಬಂಗಾಳ, ಡಾರ್ಜಿಲಿಂಗ್‌ ಮತ್ತು ಆಂಧ್ರಪ್ರದೇಶದಿಂದ ಸ್ವೀಕರ್‌ ಬಾಕ್ಸ್‌, ಟೆಡಿ ಬೆರ್‌(ಬೊಂಬೆ), ಮೆಡಿಕಲ್‌ ಕಿಟ್‌ ಬಾಕ್ಸ್‌ ಮತ್ತು ಖಾಲಿ

ಸಿಪಿಯುಗಳಲ್ಲಿ ಮಾದಕ ವಸ್ತುಗಳನ್ನು ತುಂಬಿ ಆರೋಪಿಗಳಾದ ಆಯೂಷ್‌ ಪಾಂಡೆ ಮತ್ತು ರೋಹಿತ್‌ ರಾಮ್‌ ಹೆಸರಿಗೆ ಕೊರಿಯರ್‌

Advertisement

ಮೂಲಕ ಕಳುಹಿಸುತ್ತಿದ್ದ. ಜತೆಗೆ ಗ್ರಾಹಕರಲೋಕೇಷನ್‌ಗಳನ್ನು ಕಳುಹಿಸುತ್ತಿದ್ದ. ಅನಂತರ ಈ ಇಬ್ಬರು ಆರೋಪಿಗಳು, ನೂರ್‌ ಆಲಿಗೆ ಲೋಕೇಷನ್‌ಷೇರ್‌ ಮಾಡಿಗ್ರಾಹಕರಿಗೆ ನೇರವಾಗಿ ಕಳುಹಿಸುತ್ತಿದ್ದರು ಎಂದು ಪೊಲೀಸರು ಹೇಳಿದರು.

ಸ್ಕ್ಯಾನ್‌ಮಾಡಿದರೂ ತಿಳಿಯಲ್ಲ: ನೆರೆ ರಾಜ್ಯದಿಂದ ಆಯೂಷ್‌ ಮತ್ತು ರೋಹಿತ್‌ಗೆ ಬರುತ್ತಿದ್ದ ಕೊರಿಯರ್‌ ಸಂಪೂರ್ಣ ಪ್ಯಾಕ್‌ ಮಾಡಲಾಗಿತ್ತು. ನಗರಕ್ಕೆ ಬಂದಾಗ ಕೊರಿಯಲ್‌ ಸಂಸ್ಥೆಗಳಲ್ಲಿ ಸ್ಕ್ಯಾನ್‌ ಮಾಡಿದರೂ ಅವುಗಳಲ್ಲಿ ಯಾವ ವಸ್ತು ಇದೆ ಎಂಬುದು ತಿಳಿಯುತ್ತಿರಲಿಲ್ಲ. ಹೀಗಾಗಿ ಕೊರಿಯರ್‌ ಸಂಸ್ಥೆಯ ಸಿಬ್ಬಂದಿ ಹೆಚ್ಚು ತಲೆಕೆಡಿಸಿಕೊಳ್ಳದೆ ಪಾರ್ಸೆಲ್‌ಗ‌ಳನ್ನು ಡೆಲಿವರಿ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.

ಡೋನ್ಜ್ ಬ್ಯಾಗ್‌ ಬಳಕೆ :  ನೂರ್‌ ಆಲಿ ಈ ಮೊದಲು ಡೋನ್ಜ್ ಕಂಪನಿಯಲ್ಲಿ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿದ್ದ. ಆದರೆ, ಕಾರಣಾಂತರಗಳಿಂದ ಕೆಲಸದಿಂದ ತೆಗೆದು ಹಾಕಲಾಗಿತ್ತು. ಆದರೆ, ಬ್ಯಾಗ್‌ಅನ್ನು ಕಂಪನಿಗೆ ಹಿಂದಿರುಗಿಸಿರಲಿಲ್ಲ. ಇದೇ ಬ್ಯಾಗ್‌ ಬಳಸಿಕೊಂಡು ಆರೋಪಿ ರೋಹಿತ್‌ ಮತ್ತು ಆಯೂಷ್‌ ಪಾಂಡೆ ಕಳುಹಿಸುತ್ತಿದ್ದಗ್ರಾಹಕರ ಲೋಕೇಷನ್‌ಗೆ ನೇರವಾಗಿ ಮಾದಕ ವಸ್ತು ತಲುಪಿಸುತ್ತಿದ್ದ, ಹೀಗಾಗಿ ಇಷ್ಟು ದಿನಗಳ ಕಾಲ ಯಾರಿಗೂ ಅನುಮಾನ ಬಂದಿರಲಿಲ್ಲ. ಇತ್ತೀಚೆಗೆ ನೂರ್‌ ಆಲಿ ಡೋನ್ಜ್j ಬ್ಯಾಗ್‌ ವೊಂದರಲ್ಲಿ ತುಂಬಿಕೊಂಡು ಬಿಟಿಎಂ ಲೇಔಟ್‌ನ ಕೆಲ ನಿರ್ದಿಷ್ಟ ಮನೆಗಳಿಗೆ ಪದೇ ಪದೆಪೂರೈಕೆ ಮಾಡುತ್ತಿದ್ದ. ಬಾತ್ಮೀದಾರರ ಮೂಲಕ ಈ ಮಾಹಿತಿ ಪಡೆದುಕೊಂಡು ನೂರ್‌ ಆಲಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆರೋಪಿಗಳ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next