Advertisement

ರಸ್ತೆ ಮಧ್ಯೆ ಬಸ್‌ ನಿಲ್ಲಿಸಿದರೆ ಡ್ರೈವರ್‌ ಲೈಸನ್ಸ್‌ ರದ್ದು: ಎಚ್ಚರ

08:20 AM Aug 08, 2017 | Team Udayavani |

ಮಂಗಳೂರು: ಎಲ್ಲೆಂದರಲ್ಲಿ ಪ್ರಯಾಣಿಕರನ್ನು ಇಳಿಸಲು ಮತ್ತು ಹತ್ತಿಸಲು ಬಸ್‌ ನಿಲ್ಲಿಸಿದರೆ ಕಠಿನ ಕ್ರಮ ಕೈಗೊಳ್ಳುವುದಾಗಿ ಸಾರಿಗೆ ಪ್ರಾಧಿಕಾರ ಎಚ್ಚರಿಕೆ ನೀಡಿದೆ.

Advertisement

ನಿರ್ದಿಷ್ಟ ಪ್ರದೇಶದಲ್ಲಿ ಬಸ್‌ ನಿಲ್ದಾಣಗಳಿದ್ದರೂ ಕೆಲವೊಂದು ಬಸ್‌ಗಳವರು ಕೈ ತೋರಿಸಿದಲ್ಲಿ ಅಥವಾ ಪ್ರಯಾಣಿಕರನ್ನು ಕಂಡಲ್ಲಿ ಹಠಾತ್‌ ಆಗಿ ನಿಲ್ಲಿಸುವುದರಿಂದ ಅಪಘಾತಗಳಿಗೆ ಕಾರಣವಾಗುತ್ತಿದೆ. ಆದುದರಿಂದ ಪ್ರಯಾಣಿಕರನ್ನು ಹತ್ತಿಸಲು ಹಾಗೂ ಇಳಿಸಲು ನಿಗದಿತ ಬಸ್‌ ತಂಗುದಾಣಗಳಲ್ಲಿಯೇ ಬಸ್‌ಗಳನ್ನು ನಿಲ್ಲಿಸಬೇಕು. ಹೆದ್ದಾರಿ ಸಹಿತ ಯಾವುದೇ ಪ್ರದೇಶದಲ್ಲಿ ಬಸ್‌ ನಿಲ್ದಾಣ ಹೊರತುಪಡಿಸಿ ಬೇರೆ ಪ್ರದೇಶದಲ್ಲಿ ಬಸ್‌ಗಳನ್ನು ನಿಲುಗಡೆಗೊಳಿಸುವುದು ಕಂಡುಬಂದಲ್ಲಿ ಬಸ್‌ ಚಾಲಕರ ಡ್ರೈವಿಂಗ್‌ ಲೈಸನ್ಸನ್ನೇ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಧಿಕಾರ ತಿಳಿಸಿದೆ.

ಬಸ್‌ನ ಚಾಲಕ/ನಿರ್ವಾಹಕರು ಸಮವಸ್ತ್ರವನ್ನು ತಪ್ಪದೇ ಧರಿಸಬೇಕು. ಸುರಕ್ಷತಾ ದೃಷ್ಟಿಯಿಂದ ಪ್ರಯಾಣಿಕರು ಬಸ್‌ ಬೇ/ ತಂಗುದಾಣದಲ್ಲಿಯೇ ಬಸ್‌ ಹತ್ತಬೇಕು ಹಾಗೂ  ಇಳಿಯಬೇಕು. ಯಾವುದೇ ಕಾರಣಕ್ಕೂ ಚಲಿಸುತ್ತಿರುವ ಬಸ್‌ ಅನ್ನು ಹತ್ತುವುದು ಅಥವಾ ಇಳಿಯುವುದು ಮಾಡಬಾರದು ಎಂದು ಆರ್‌ಟಿಒ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next