Advertisement

ಸಂಗಮದಲ್ಲಿ ಅನುರಣಿಸಿದ ‘ಹರ್‌ ಹರ್‌ ಗಂಗೆ’

03:31 AM Jan 16, 2019 | Team Udayavani |

ಪ್ರಯಾಗ್‌ರಾಜ್‌: ಮಂಗಳವಾರ ಮುಂಜಾನೆ ಸೂರ್ಯ ಉದಯಿಸುತ್ತಿದ್ದಂತೆ, ಉತ್ತರಪ್ರದೇಶದ ಪ್ರಯಾಗ್‌ ರಾಜ್‌ನಲ್ಲಿ ‘ಹರ್‌ ಹರ್‌ ಗಂಗೆ’, ‘ಹರ್‌ ಹರ್‌ ಗಂಗೆ’ ಎಂಬ ಷೋಷಣೆಗಳು ಮುಗಿಲು ಮುಟ್ಟಿದ್ದವು. ಗಂಗೆ, ಯುಮನೆ ಮತ್ತು ಸರಸ್ವತಿಯ ಸಂಗಮ ಸ್ಥಳವು ಭಕ್ತಿ-ಭಾವ ಪರವಶತೆಯ ಬೀಡಾಗಿ ಪರಿವರ್ತಿತಗೊಂಡಿತ್ತು.

Advertisement

50 ದಿನಗಳ ಕಾಲ ನಡೆಯುವ ಕುಂಭಮೇಳಕ್ಕೆ ಪ್ರಯಾಗ್‌ರಾಜ್‌ನಲ್ಲಿ ಮಂಗಳವಾರ ಅದ್ಧೂರಿ ಚಾಲನೆ ದೊರೆತಿದ್ದು, ಮೊದಲ ದಿನವೇ 2.25 ಕೋಟಿ ಮಂದಿ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ, ಕುಂಭಮೇಳವನ್ನು ಕಣ್ತುಂಬಿಕೊಂಡರು. 13 ಅಖಾಡಾಗಳ ಸಾಧುಗಳು ಶಾಹಿ ಸ್ನಾನ ಮಾಡುವ ಮೂಲಕ ಪುಣ್ಯಸ್ನಾನಕ್ಕೆ ಚಾಲನೆ ನೀಡಿದರು. ಇದೇ ವೇಳೆ, ನಾಗಾ ಸಾಧುಗಳ ವ್ಯವಸ್ಥಿತ ಮೆರವಣಿಗೆಯು ಎಲ್ಲರ ಕಣ್ಮನ ಸೆಳೆಯಿತು. ಪ್ರಸಕ್ತ ಕುಂಭದಲ್ಲಿ 12 ಕೋಟಿ ಯಾತ್ರಿಗಳು ಆಗಮಿಸುವ ನಿರೀಕ್ಷೆಯಿದೆ.

350 ವರ್ಷಗಳ ಬಳಿಕ: ಬರೋಬ್ಬರಿ 350 ವರ್ಷಗಳ ಬಳಿಕ ಪ್ರಯಾಗ್‌ರಾಜ್‌ನಲ್ಲಿ ಕುಂಭಮೇಳ ನಡೆಯುತ್ತಿದೆ ಎಂದು ಯು.ಪಿ. ಸಚಿವ ಲಕ್ಷ್ಮಿನಾರಾಯಣ ಚೌಧರಿ ಹೇಳಿದ್ದಾರೆ. 350 ವರ್ಷಗಳ ಹಿಂದೆಯೇ ಈ ನಗರಕ್ಕೆ ಪ್ರಯಾಗ್‌ರಾಜ್‌ ಎಂಬ ಹೆಸರಿತ್ತು. ತದನಂತರ ಅದನ್ನು ಅಲಹಾಬಾದ್‌ ಎಂದು ಬದಲಿಸ ಲಾಗಿತ್ತು. ಈಗ ನಮ್ಮ ಸರ್ಕಾರ ಮತ್ತೆ ಅಲಹಾ ಬಾದ್‌ ಅನ್ನು ಪ್ರಯಾಗ್‌ರಾಜ್‌ ಎಂದು ಬದಲಿಸಿದೆ. ಹಾಗಾಗಿ, 350 ವರ್ಷಗಳ ನಂತರ ಪ್ರಯಾಗ್‌ರಾಜ್‌ನಲ್ಲಿ ಕುಂಭ ನಡೆದಂತಾಗಿದೆ ಎಂದು ಅವರು ಸ್ಪಷ್ಟೀಕರಣ ನೀಡಿದ್ದಾರೆ.

4,200 ಕೋಟಿ ರೂ. ವೆಚ್ಚ: ಈ ಬಾರಿಯದ್ದು ಇತಿಹಾಸದಲ್ಲೇ ಅತ್ಯಂತ ವೆಚ್ಚದಾಯಕ ಕುಂಭಮೇಳ ಎಂಬ ಖ್ಯಾತಿ ಪಡೆದಿದೆ. ಉತ್ತರಪ್ರದೇಶ ಸರ್ಕಾರವು ಕುಂಭಕ್ಕಾಗಿ ಬರೋಬ್ಬರಿ 4,200 ಕೋಟಿ ರೂ. ಅನುದಾನ ನೀಡಿದೆ. 2013ರ ಮಹಾಕುಂಭಕ್ಕೆ ನೀಡಿದ್ದ ಅನುದಾನದ ಮೂರು ಪಟ್ಟು ಹೆಚ್ಚು ಮೊತ್ತವನ್ನು ಈ ಅರ್ಧಕುಂಭಕ್ಕೆ ನೀಡಲಾಗಿದೆ

ಸಚಿವೆ ಸ್ಮತಿ ಪುಣ್ಯಸ್ನಾನ
ಕುಂಭದ ಆರಂಭದ ದಿನವಾದ ಮಂಗಳವಾರ ಕೇಂದ್ರ ಸಚಿವೆ ಸ್ಮತಿ ಇರಾನಿ ಅವರು ಸಂಗಮದಲ್ಲಿ ಪುಣ್ಯಸ್ನಾನಗೈದರು. ಬಳಿಕ ಅದರ ಫೋಟೋವನ್ನು ‘ಹರ್‌ ಹರ್‌ ಗಂಗೆ’ ಎಂಬ ಶಿರೋನಾಮೆಯಡಿ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next