Advertisement

Kiren Rijuju:ಮಿಸ್‌ ಇಂಡಿಯಾ ಸ್ಪರ್ಧೆಯಲ್ಲಿ ದಲಿತರಿಲ್ಲ ಎಂದ ರಾಹುಲ್‌ ಗೆ ರಿಜುಜು ತಿರುಗೇಟು

03:12 PM Aug 25, 2024 | Team Udayavani |

ನವದೆಹಲಿ: ಸೌಂದರ್ಯ ಸ್ಪರ್ಧೆಯಾದ ಮಿಸ್ ಇಂಡಿಯಾ ಪಟ್ಟಿಯಲ್ಲಿ ದಲಿತ ಮತ್ತು ಆದಿವಾಸಿಗಳಿಲ್ಲ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಹೇಳಿಕೆಯನ್ನು ಕೇಂದ್ರ ಸಚಿವ ಕಿರಣ್ ರಿಜಿಜು ಅವರು “ಬಾಲ ಬುದ್ಧಿ” ಯಿಂದ ಮಾತ್ರ ಬರಬಹುದು ಎಂದು ಜರಿದಿದ್ದಾರೆ.

Advertisement

ಜಾತಿ ಗಣತಿಗೆ ಒತ್ತಾಯಿಸಿ ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ ನಲ್ಲಿ ನಡೆದ ಸಂವಿಧನ್ ಸಮ್ಮಾನ್ ಸಮ್ಮೇಳನದಲ್ಲಿ, ರಾಹುಲ್ ಗಾಂಧಿ ಶನಿವಾರ‌ (ಆ.24) “ಶೇ 90” ಜನಸಂಖ್ಯೆಯ ಭಾಗವಹಿಸುವಿಕೆ ಇಲ್ಲದೆ ಭಾರತವು ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

“ನಾನು ಮಿಸ್ ಇಂಡಿಯಾ ಪಟ್ಟಿಯನ್ನು ಪರಿಶೀಲಿಸಿದ್ದೇನೆ, ಅದರಲ್ಲಿ ದಲಿತ, ಆದಿವಾಸಿ (ಬುಡಕಟ್ಟು) ಅಥವಾ ಒಬಿಸಿ (ಇತರ ಹಿಂದುಳಿದ ವರ್ಗಗಳು) ಮಹಿಳೆಯರು ಇರಲಿಲ್ಲ. ಕೆಲವರು ಕ್ರಿಕೆಟ್ ಅಥವಾ ಬಾಲಿವುಡ್ ಬಗ್ಗೆ ಮಾತನಾಡುತ್ತಾರೆ. ಯಾರೂ ಚಮ್ಮಾರರನ್ನು ಅಥವಾ ಪ್ಲಂಬರ್ ಅನ್ನು ತೋರಿಸುವುದಿಲ್ಲ. ಮಾಧ್ಯಮದಲ್ಲಿ ದೊಡ್ಡ ಸಾಧನೆ ಮಾಡಿದವರು 90 ಪ್ರತಿಶತದಿಂದ ಬಂದವರಲ್ಲ”ಎಂದು ರಾಹುಲ್ ಗಾಂಧಿ ಪ್ರಯಾಗ್‌ರಾಜ್‌‌ ನಲ್ಲಿ ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಕಿರಣ್‌ ರಿಜುಜು, ಕಾಂಗ್ರೆಸ್ ನಾಯಕರು ಸತ್ಯ ಪರಿಶೀಲನೆ ನಡೆಸಬೇಕು ಎಂದು ಸಲಹೆ ನೀಡಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಬುಡಕಟ್ಟು ಜನಾಂಗದ ದೇಶದ ಮೊದಲ ರಾಷ್ಟ್ರಪತಿ, ಪ್ರಧಾನಿ ನರೇಂದ್ರ ಮೋದಿ ಒಬಿಸಿಗೆ ಸೇರಿದವರು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದಿಂದ ಬಂದ ಕ್ಯಾಬಿನೆಟ್ ಮಂತ್ರಿಗಳ ದಾಖಲೆಯ ಸಂಖ್ಯೆ ಇದೆ ಎಂದು ಹೇಳಿದರು.

Advertisement

“ರಾಹುಲ್ ಗಾಂಧಿ ಅವರೇ, ಸರ್ಕಾರವು ಮಿಸ್ ಇಂಡಿಯಾವನ್ನು ಆಯ್ಕೆ ಮಾಡುವುದಿಲ್ಲ, ಸರ್ಕಾರವು ಒಲಿಂಪಿಕ್ಸ್‌ ಗೆ ಕ್ರೀಡಾಪಟುಗಳನ್ನು ಆಯ್ಕೆ ಮಾಡುವುದಿಲ್ಲ ಮತ್ತು ಸರ್ಕಾರಗಳು ಚಲನಚಿತ್ರಗಳಿಗೆ ನಟರನ್ನು ಆಯ್ಕೆ ಮಾಡುವುದಿಲ್ಲ” ಎಂದು ರಿಜಿಜು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next