ಪ್ರಯಾಗ್ ರಾಜ್: ಆತೀಕ್ ಅಹಮದ್ ಗ್ಯಾಂಗ್ ನ ಶೂಟರ್, ಉಮೇಶ್ ಪಾಲ್ ಮೇಲೆ ಮೊದಲು ಗುಂಡು ಹಾರಿಸಿದ್ದ ಉಸ್ಮಾನ್ ಚೌಧರಿ ಎನ್ ಕೌಂಟರ್ ನಲ್ಲಿ ಹತ್ಯೆಯಾಗಿದ್ದಾನೆ. ರವಿವಾರ ಸಂಜೆ ಕೌಂದಿಯಾರದಲ್ಲಿ ಆರೋಪಿ ವಿಜಯ್ ಕುಮಾರ್ ಅಲಿಯಾಸ್ ಉಸ್ಮಾನ್ ಚೌಧರಿ ಮತ್ತು ಪೊಲೀಸರ ನಡುವೆ ಎನ್ ಕೌಂಟರ್ ನಡೆದಿದೆ.
ಎನ್ ಕೌಂಟರ್ ನಲ್ಲಿ ಉಸ್ಮಾನ್ ಚೌಧರಿಯು ಗಂಭೀರವಾಗಿ ಗಾಯಗೊಂಡಿದ್ದ. ಕೂಡಲೇ ಅವನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ಮೃತಪಟ್ಟಿದ್ದಾನೆ.
ಉಮೇಶ್ ಪಾಲ್ ಹತ್ಯೆ ಪ್ರಕರಣದ ಪ್ರತಿ ಆರೋಪಿಗೆ 2.5 ಲಕ್ಷ ಬಹುಮಾನ ನೀಡುವುದಾಗಿ ಯುಪಿ ಪೊಲೀಸರು ಘೋಷಿಸಿದ ಒಂದು ದಿನದ ನಂತರ ಎನ್‌ಕೌಂಟರ್ ನಡೆದಿದೆ.
ಇದನ್ನೂ ಓದಿ:ಬಾಲಿವುಡ್‌ನಲ್ಲಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ ‘ಪಠಾಣ್; 1,028 ಕೋಟಿ ಗಳಿಕೆ
ವಿಜಯ್ ಕುಮಾರ್ ಅಲಿಯಾಸ್ ವಿಜಯ್ ಚೌಧರಿ ಅಲಿಯಾಸ್ ಉಸ್ಮಾನ್ ಚೌಧರಿ, 2005 ರ ಬಿಎಸ್‌ಪಿ ಶಾಸಕ ರಾಜು ಪಾಲ್ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿ ಉಮೇಶ್ ಪಾಲ್ ಅವರನ್ನು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿರುವ ಅವರ ನಿವಾಸದಲ್ಲಿ ಒಂದು ವಾರದ ಹಿಂದೆ ಕೊಲೆ ಮಾಡಿದ್ದರು. ಮಾಜಿ ಸಂಸದ ಅತೀಕ್ ಅಹ್ಮದ್ ಅವರ ಕಿರಿಯ ಸಹೋದರ ಖಾಲಿದ್ ಅಜೀಂ ಅವರನ್ನು ಸೋಲಿಸುವ ಮೂಲಕ ಅಲಹಾಬಾದ್ (ಪಶ್ಚಿಮ) ವಿಧಾನಸಭಾ ಸ್ಥಾನವನ್ನು ಗೆದ್ದ ತಿಂಗಳೊಳಗೆ ರಾಜು ಪಾಲ್ ಅವರನ್ನು ಹತ್ಯೆ ಮಾಡಲಾಯಿತು. ಉಮೇಶ್ ಪಾಲ್ ಈ ಘಟನೆಗೆ ಪ್ರಮುಖ ಸಾಕ್ಷಿಯಾಗಿದ್ದರು.
ಉಮೇಶ್ ಪಾಲ್ ಮತ್ತು ಅವರ ಇಬ್ಬರು ಪೊಲೀಸ್ ಅಂಗರಕ್ಷಕರಲ್ಲಿ ಒಬ್ಬರು ಎಸ್ ಯುವಿಯಿಂದ ಹೊರಬರುವುದನ್ನು ಸಿಸಿಟಿವಿ ದೃಶ್ಯಾವಳಿಗಳು ತೋರಿಸುತ್ತವೆ, ಆಗ ಇದ್ದಕ್ಕಿದ್ದಂತೆ ಒಬ್ಬ ವ್ಯಕ್ತಿ ಹಿಂದಿನಿಂದ ಬಂದು ಅವನ ಮೇಲೆ ಗುಂಡು ಹಾರಿಸುತ್ತಾನೆ.
ಪ್ರಕರಣದಲ್ಲಿ ಇದುವರೆಗೆ 40 ಮಂದಿಯನ್ನು ಆರೋಪಿಗಳೆಂದು ಪೊಲೀಸರು ಹೆಸರಿಸಿದ್ದಾರೆ. ರಾಜಕಾರಣಿಯಾಗಿ ಬದಲಾದ ಗ್ಯಾಂಗ್ ಸ್ಟರ್ ಅತೀಕ್ ಅಹ್ಮದ್, ಆತನ ಸಹೋದರ ಮತ್ತು ಮಾಜಿ ಶಾಸಕ ಅಶ್ರಫ್ ಪ್ರಮುಖ ಆರೋಪಿಗಳಾಗಿದ್ದಾರೆ. ಆರೋಪಿಗಳೆಲ್ಲ ಸದ್ಯ ಜೈಲಿನಲ್ಲಿದ್ದಾರೆ.