Advertisement

Indian Railways; ರೈಲು ಎಂಜಿನ್‌ಗಳಿಗೆ ಎಐ ತಂತ್ರಜ್ಞಾನದ ಸಿಸಿಟಿವಿ ಕ್ಯಾಮೆರಾ ಅಳವಡಿಕೆ

09:51 PM Aug 20, 2024 | Team Udayavani |

ಪ್ರಯಾಗ್‌ರಾಜ್‌: ದೇಶದಲ್ಲಿ ರೈಲು ಅಪಘಾತ ಹೆಚ್ಚು ತ್ತಿರುವ ಹಿನ್ನೆಲೆಯಲ್ಲಿ ಪ್ರತಿ ರೈಲು ಎಂಜಿನ್‌ ಹಾಗೂ ಪ್ರಮುಖ ನಿಲ್ದಾಣಗಳಲ್ಲಿ ಕೃತಕ ಬುದ್ಧಿಮತ್ತೆ(ಎಐ) ತಂತ್ರಜ್ಞಾನವಿರುವ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು ಎಂದು ರೈಲ್ವೆ ಇಲಾಖೆ ಹೇಳಿದೆ.

Advertisement

ಪ್ರಯಾಗ್‌ರಾಜ್‌ ರೈಲ್ವೆ ಜಂಕ್ಷನ್‌ನಲ್ಲಿ ಮಾತನಾಡಿದ ಇಲಾಖೆ ಸಿಇಒ ಜಯ ವರ್ಮಾ ಸಿನ್ಹಾ, “ಅಸಾಮಾನ್ಯ ಸನ್ನಿವೇಶಗಳನ್ನು ಈ ಕ್ಯಾಮೆರಾಗಳ ಮೂಲಕ ಪತ್ತೆ ಹಚ್ಚಬಹುದು’ ಎಂದಿದ್ದಾರೆ.

ಹಳಿಗಳ ಸುರಕ್ಷತೆಗಾಗಿ ಭದ್ರತಾ ಸಂಸ್ಥೆಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಕುಂಭಮೇಳದ ಸಮಯದಲ್ಲಿ ಯಾವುದೇ ಸಮಾಜಘಾತುಕ ಶಕ್ತಿಗಳು ರೈಲುಗಳಿಗೆ ಹಾನಿ ಮಾಡದಂತೆ ತಡೆಯಲು ಈ ಸಂಸ್ಥೆಗಳು ಕೆಲಸ ಮಾಡುತ್ತಿವೆ ಎಂದು ಸಿನ್ಹಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next