Advertisement

ಕುಡಿಯುವ ನೀರಿನ ಸಮಸ್ಯೆ ತೀವ್ರ

06:35 AM Mar 29, 2018 | Team Udayavani |

ತೆಕ್ಕಟ್ಟೆ (ಕೊರ್ಗಿ): ತೀವ್ರ ಬಿಸಿಲಿಗೆ ಕೊರ್ಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ನೀರ ಸೆಲೆಗಳು ಬತ್ತಿ ಹೋಗಿದ್ದು, ಜನರನ್ನು ಕಂಗೆಡಿಸಿದೆ.  

Advertisement

ನೂಜಿ ಚೆಂದಾಡಿಬೆಟ್ಟು, ನೂಜಿ ಹೊಸ್ಮಠ, ದೊಡ್ಡನ್ನರಿಕಲ್ಲು, ಕಾಡಿನಬೆಟ್ಟು  ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ನೀರಿನ ಸಮಸ್ಯೆ ಇರುವ ಹಲವು ಕಡೆಗಳಲ್ಲಿ ಕೊಳವೆ, ತೆರೆದ ಬಾವಿಗಳನ್ನು ನಿರ್ಮಿಸಲಾಗಿದ್ದರೂ,  ಶಿಲೆಗಳಿಂದ ಆವೃತ್ತವಾದ ಪ್ರದೇಶವಾದ್ದರಿಂದ ತೆರೆದ ಬಾವಿ ಹಾಗೂ ಕೊಳವೆ ಬಾವಿಗಳು ವಿಫಲವಾಗಿವೆ. 

ನೀರು ಪೋಲು 
ವಾರಾಹಿ ಕಾಲುವೆ ನೀರು ಹುಣ್ಸೆಮಕ್ಕಿಯಿಂದ ಕಲ್ಮಕ್ಕಿ ಕೆರೆಗೆ ತೋಡಿನ ಮೂಲಕ ಹರಿದು ಬರುತ್ತಿದೆ. ಆದರೆ ಹಳೆಯ ಕಾಲದ 7 ಕಿಂಡಿ ಅಣೆಕಟ್ಟುಗಳನ್ನು  ಒಳಗೊಂಡಿರುವ ಈ ತೋಡಿಗೆ  ಸಮರ್ಪಕವಾದ ಅಡ್ಡ ಹಲಗೆ ಇಲ್ಲದೆ ಇರುವುದರಿಂದ ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ.

ಕೊರ್ಗಿ ಮತ್ತು ಹೆಸ್ಕಾತ್ತೂರುಗಳಲ್ಲಿ ಒಟ್ಟು 852 ಮನೆಗಳಿದ್ದು, 3 ವಾರ್ಡ್‌ಗಳಲ್ಲಿ 4384 ಜನ ವಾಸವಾಗಿದ್ದಾರೆ. ಗ್ರಾ.ಪಂ. ವ್ಯಾಪ್ತಿಯಲ್ಲಿ 4 ಸರಕಾರಿ ಬಾವಿಗಳು, 18 ಕೊಳವೆ ಬಾವಿಗಳು, 2 ಓವರ್‌ ಹೆಡ್‌ ಟ್ಯಾಂಕ್‌ಗಳು ಇವೆ. 

ಅಗತ್ಯ ಪರಿಹಾರ ಕ್ರಮ 
– ನೀರಿನ ಸೌಲಭ್ಯಕ್ಕಾಗಿ ಪಂಚಾಯತ್‌ ವತಿಯಿಂದ ಅಗತ್ಯ ಪರಿಹಾರ ಕ್ರಮ ಅಗತ್ಯ  
– ಕೊರ್ಗಿ ಈಗಾಗಲೇ ನೂಜಿ ಮತ್ತು ನ್ಯಾವಳ  ಮನೆಯಲ್ಲಿರುವ ಪಂಚಾಯತ್‌ ಕೊಳವೆ ಬಾವಿಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಈ ಕೊಳವೆ ಬಾವಿಗಳನ್ನು ಫ್ರೆಶ್‌ ಔಟ್‌ ಮಾಡಬೇಕಾಗಿದೆ.
– ಕೊರ್ಗಿ, ದೊಡ್ಡನ್ನರಿಕಲ್ಲು ಪ್ರದೇಶಗಳಿಗೆ ಕೊರ್ಗಿಯಿಂದ 31/2 ಕಿ.ಮೀ. ಪೈಪ್‌ಲೆ„ನ್‌ ಕಾಮಗಾರಿ ಅಗತ್ಯವಿದೆ. 
– ಕೊರ್ಗಿ ನೂಜಿ ಪ್ರದೇಶಕ್ಕೆ ಅರ್ಧ ಕಿ.ಮೀ. ವರೆಗೆ ಪೈಪ್‌ ಲೈನ್‌ ಕಾಮಗಾರಿ ನಡೆಯಬೇಕಿದೆ.  

Advertisement

ಟ್ಯಾಂಕರ್‌ ಮೂಲಕ ನೀರು ಸರಬರಾಜು
ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಗಳಿರುವ ಭಾಗಗಳಿಗೆ ಪ್ರತಿ ವರ್ಷ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ವಾರಾಹಿ ಕಾಲುವೆ ನೀರನ್ನು ಗ್ರಾಮದೆಡೆಗೆ ಹರಿಸಬೇಕು. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕು.  
– ಗಂಗೆ ಕುಲಾಲ್ತಿ  
ಗ್ರಾ.ಪಂ.ಅಧ್ಯಕ್ಷರು, ಕೊರ್ಗಿ

ಅನುದಾನ ನೀಡಿ
ಹೆಸ್ಕಾತ್ತೂರು ಗ್ರಾಮದ  ಪಂಚಾಯತ್‌ ಬಾವಿಯ ಕುಡಿಯುವ ನೀರು ಶುದ್ಧೀಕರಣ ಅಗತ್ಯವಿದೆ. ಬಹುಗ್ರಾಮ ಯೋಜನೆಯಡಿ ಅನುದಾನ ನೀಡಿದರೆ ಶಾಶ್ವತ ಪರಿಹಾರ ಕಾಣಬಹುದು.

– ಹಿರಿಯಣ್ಣ ಶೆಟ್ಟಿ  , ಪಿಡಿಒ ಗ್ರಾ.ಪಂ. ಕೊರ್ಗಿ

ಲೋಕೇಶ್‌ ಆಚಾರ್ಯ ತೆಕ್ಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next