Advertisement

ತವರಲ್ಲಿ ಕ್ರಿಕೆಟ್‌ ಮೈದಾನ ನಿರ್ಮಿಸಿದ ಟಿ. ನಟರಾಜನ್‌ 

12:59 AM Dec 17, 2021 | Team Udayavani |

ಚೆನ್ನೈ: ಕಳೆದ ವರ್ಷದ ಐಪಿಎಲ್‌ನಲ್ಲಿ ಸ್ಟಾರ್‌ ಆಟಗಾರರನ್ನು ತಮ್ಮ ಯಾರ್ಕರ್‌ ಅಸ್ತ್ರದ ಮೂಲಕ ಪೆವಿಲಿಯನ್‌ಗೆ ಅಟ್ಟಿ ಎಲ್ಲರ ಹುಬ್ಬೇರುವಂತೆ ಮಾಡಿದ ಬೌಲರ್‌ ಟಿ. ನಟರಾಜನ್‌ ಬಳಿಕ ಆಸ್ಟ್ರೇಲಿಯ ಪ್ರವಾಸದಲ್ಲಿ ಟೀಮ್‌ ಇಂಡಿಯಾಕ್ಕೆ ಪದಾರ್ಪಣೆ ಮಾಡಿ ಮಿಂಚಿದ್ದರು. ಇವರೀಗ ಬೇರೊಂದು ಕಾರಣಕ್ಕೆ ಸುದ್ದಿಯಾಗಿದ್ದಾರೆ. ತಮ್ಮ ಊರಿನಲ್ಲಿ ಕ್ರಿಕೆಟ್‌ ಮೈದಾನವೊಂದನ್ನು ನಿರ್ಮಿಸಿ ಎಲ್ಲರ ಗಮನ ಸೆಳೆದಿದ್ದಾರೆ.

Advertisement

ತಮಿಳುನಾಡಿನ ಸೇಲಂ ಬಳಿಯ ಚಿನ್ನಂಪಟ್ಟಿ ಗ್ರಾಮದಲ್ಲಿ ನಟರಾಜನ್‌ ಈ ಕ್ರಿಕೆಟ್‌ ಮೈದಾನ ನಿರ್ಮಿಸಿದ್ದಾರೆ. ಊರಿನ ಯುವ ಕ್ರಿಕೆಟ್‌ ಪ್ರತಿಭೆಗಳ ತರಬೇತಿಗೆ ಸೂಕ್ತ ವೇದಿಕೆ ಒದಗಿಸುವುವ ಉದ್ದೇಶದಿಂದ ಹಳ್ಳಿಯಲ್ಲಿ ಎಲ್ಲ ಸೌಲಭ್ಯವುಳ್ಳ ಒಂದು ಸುಸಜ್ಜಿತ ಕ್ರಿಕೆಟ್‌ ಮೈದಾನವನ್ನು ನಿರ್ಮಿಸುವುದು ನಟರಾಜನ್‌ ಅವರ ಕನಸಾಗಿತ್ತು. ಇದನ್ನೀಗ ಸಾಕಾರಗೊಳಿಸಿದ್ದಾರೆ.

ನಟರಾಜನ್‌ ಕ್ರಿಕೆಟ್‌ ಗ್ರೌಂಡ್‌’ :

“ನನ್ನ ಹಳ್ಳಿಯಲ್ಲಿ ಎಲ್ಲ ವ್ಯವಸ್ಥೆಗಳನ್ನು ಒಳಗೊಂಡ ಕ್ರಿಕೆಟ್‌ ಮೈದಾನವೊಂದನ್ನು ನಿರ್ಮಿಸಿರುವುದನ್ನು ನಿಮ್ಮ ಜತೆ ಹಂಚಿಕೊಳ್ಳಲು ಖುಷಿಯಾಗುತ್ತಿದೆ. ನಟರಾಜನ್‌ ಕ್ರಿಕೆಟ್‌ ಗ್ರೌಂಡ್‌ (ಎನ್‌ಸಿಜಿ) ಎಂಬುದಾಗಿ ಇದು ಕರೆಯಲ್ಪಡಲಿದೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಭಾರತ ತಂಡದ ಪರ ಪದಾರ್ಪಣೆ ಮಾಡುವ ಮೂಲಕ ನನ್ನ ದೊಡ್ಡ ಕನಸೊಂದು ನನಸಾಗಿತ್ತು. ಈ ವರ್ಷದ ಡಿಸೆಂಬರ್‌ನಲ್ಲಿ ನಾನು ಕ್ರಿಕೆಟ್‌ ಮೈದನವೊಂದನ್ನು ನಿರ್ಮಿಸಿದ್ದೇನೆ. ದೇವರಿಗೆ ಧನ್ಯವಾದಗಳು’ ಎಂದು ನಟರಾಜನ್‌ ತಮ್ಮ ಟ್ವಿಟರ್‌ ಖಾತೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next