ದಾವಣಗೆರೆ: ಕೋವಿಡ್ 19 ವೈರಸ್‌ನಂತಹ ಮಹಾಮಾರಿ ವ್ಯಾಪಿಸುತ್ತಿರುವ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ದಾವಣಗೆರೆಯಲ್ಲಿ ಶಾಂತಿ, ಸೌಹಾರ್ದತೆ ಕದಡುವ ಕೆಲಸ ಮಾಡುತ್ತಿದ್ದಾರೆ. ಹಿಂದೂ, ಮುಸ್ಲಿಂ ಬಾಂಧವರು ಯಾವುದೇ ರೀತಿಯ ಅಪಪ್ರಚಾರಕ್ಕೆ ಕಿವಿಗೊಡದೆ ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಜೀವನ ನಡೆಸೋಣ ಎಂದು ಮೇಯರ್ ಬಿ.ಜಿ. ಅಜಯ್‌ಕುಮಾರ್ ಮನವಿ ಮಾಡಿದ್ದಾರೆ.
ನಾವು ಈಗ ಕೋವಿಡ್ 19 ಮುಕ್ತ ದಾವಣಗೆರೆ ಮಾಡಬೇಕು. ಯಾರೋ ಕೆಲವರು ಮಾಡುವಂತಹ ಸಮಾಜಘಾತುಕ ವಿಷಯಕ್ಕೆ ಸಂಬಂಧಿಸಿದಂತೆ ಹಿಂದೂ, ಮುಸ್ಲಿಂ ಬಾಂಧವರು ಒಂದೊಂದು ರೀತಿಯ ಹೇಳಿಕೆ ನೀಡುವುದನ್ನು ಬಿಟ್ಟು ವಣಗೆರೆಯಲ್ಲಿ ಎಲ್ಲರೂ ಒಂದಾಗಿ ಜೀವನವನ್ನು ಸಾಗಿಸೋಣ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಕೈ ಮುಗಿದು ಪ್ರಾರ್ಥಿಸಿದರು. 1992ರ ನಂತರ ದಾವಣಗೆರೆಯಲ್ಲಿ ಹಿಂದೂ, ಮುಸ್ಲಿಂ ಸಮಾಜ ಬಾಂಧವರು ಅಣ್ಣ-ತಮ್ಮಂದಿರಂತೆ ವ್ಯಾಪಾರ ವಹಿವಾಟು ಮಾಡುತ್ತಾ ಜೀವನ ನಡೆಸುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಕೋಮುವಾದ ಉತ್ತೇಜಿಸುವ, ಶಾಂತಿ- ಸೌಹಾರ್ದತೆ ಕದಡುವ ಕೆಲಸ ಮಾಡುತ್ತಿದ್ದಾರೆ. ಪೊಲೀಸ್ ಇಲಾಖೆ ಅಂತಹವರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ನಗರಪಾಲಿಕೆ ಸದಸ್ಯ ಕೆ. ಚಮನ್‌ಸಾಬ್ ಮಾತನಾಡಿ, ಕಣ್ಣಿಗೆ ಕಾಣದಂತಹ ಕೋವಿಡ್ 19 ವೈರಸ್ ಇಡೀ ಮನುಕುಲದ ಅಸ್ತಿತ್ವವನ್ನೇ ಅಲುಗಾಡಿಸುತ್ತಿರುವ ಸಂದರ್ಭದಲ್ಲಿ ಶಾಂತಿ, ಸೌಹಾರ್ದತೆ ಕದಡುವ ಮಾತು, ಕೆಲಸವನ್ನು ಯಾರೂ ಒಪ್ಪುವುದಿಲ್ಲ.
ಕೋವಿಡ್ 19 ಹಿನ್ನೆಲೆಯಲ್ಲಿ ಅದೂಟಛಿರಿಯಾಗಿ ಅಲ್ಲದೆ ಬಹಳ ಸರಳವಾಗಿ ರಂಜಾನ್ ಆಚರಿಸೋಣ. ಯಾರೂ ಸಹ ಹೊಸ ಬಟ್ಟೆ ಖರೀದಿ ಮಾಡಬಾರದು. ಹಬ್ಬಕ್ಕಾಗಿ ಖರ್ಚು ಮಾಡುವಂತಹ ಹೆಚ್ಚಿನ ಹಣವನ್ನ ಬಡ ಬಗ್ಗರಿಗೆ ನೀಡೋಣ ಎಂದು ಕರೆ ನೀಡಲಾಗಿತ್ತೇ ಹೊರತು ಇಂತಹವರ ಅಂಗಡಿಯಲ್ಲಿ ಬಟ್ಟೆ ಖರೀದಿಸಬೇಡಿ…ಎಂದು ಯಾರೂ ಹೇಳಿಲ್ಲ. ಕೆಲ ಯುವಕರ ಹೇಳಿಕೆ ಮತ್ತು ವರ್ತನೆಗೂ, ಸಮಾಜಕ್ಕೂ ಯಾವುದೇ ಸಂಬಂಧ ಇಲ್ಲ.
ಯಾರೋ ಕಿಡಿಗೇಡಿಗಳು ಕೋಮು ಸೌಹಾರ್ದತೆ ಕದಡುವ ಮಾತುಗಳನ್ನಾಡಿದ ಮಾತ್ರಕ್ಕೆ ನಾಯಕರಾಗಲಿಕ್ಕೆ ಸಾಧ್ಯವೇ ಇಲ್ಲ. ಯಶ ಕಾಣುವುದೂ ಇಲ್ಲ. ದಾವಣಗೆರೆಯಲ್ಲಿ ಹಿಂದೂ- ಮುಸ್ಲಿಂ ಬಾಂಧವರು ಸಹೋದರರಂತೆ ಬಾಳ್ಳೋಣ ಎಂದು ಕೋರಿದರು. ಮಹಾನಗರ ಪಾಲಿಕೆ ಸದಸ್ಯ ಸಯೀದ್ ಚಾರ್ಲಿ, ಮುಸ್ಲಿಂ ಸಮಾಜದ ಮುಖಂಡ ಜೆ. ಅಮಾನುಲ್ಲಾ ಖಾನ್, ಶಾಂತಿ, ಸೌಹಾರ್ದತೆ ಕಾಪಾಡಬೇಕು ಎಂದು ಮನವಿ ಮಾಡಿದರು.
ಸಂಸದೆ ಶೋಭಾ ಟ್ವೀಟ್: ದಾವಣಗೆರೆಯ ಪ್ರತಿಷ್ಠಿತ ಜವಳಿ ಅಂಗಡಿಯೊಂದರ ಮುಂದೆ ನಡೆ ದಿದೆ ಎನ್ನಲಾದ ಘಟನೆಯೊಂದು ಸಾಮಾಜಿಕ ಜಾಲತಾಣ ದಲ್ಲಿ ವೈರಲ್ ಆಗಿದೆ. ಇದಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು -ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿದ್ದಾರೆ.