Advertisement

Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ

06:37 PM Nov 28, 2024 | Team Udayavani |

ಜೈಪುರ: ಬಲಪಂಥೀಯ ಶಕ್ತಿಗಳು ಮುಸ್ಲಿಮರನ್ನು ಪ್ರತ್ಯೇಕಿಸಲು ಮತ್ತು ದೇಶದಲ್ಲಿ ಕೋಮು ಸೌಹಾರ್ದತೆಗೆ ಭಂಗ ತರಲು ಪ್ರಯತ್ನಿಸುತ್ತಿವೆ ಎಂದು ಅಜ್ಮೀರ್ ದರ್ಗಾದ ‘ಖಾದಿಮ್’ಗಳನ್ನು ಪ್ರತಿನಿಧಿಸುವ ಸಂಸ್ಥೆಯು ಸ್ಥಳೀಯ ನ್ಯಾಯಾಲಯದಲ್ಲಿ ಖ್ವಾಜಾ ಘರಿಬ್ ನವಾಜ್ ಅನ್ನು ದೇವಾಲಯವೆಂದು ಘೋಷಿಸಲು ಕೋರಿರುವ ಮನವಿಯನ್ನು ಖಂಡಿಸಿದೆ.

Advertisement

ಅಜ್ಮೀರ್‌ನ ಸ್ಥಳೀಯ ನ್ಯಾಯಾಲಯವು ಬುಧವಾರ ಅಜ್ಮೀರ್ ದರ್ಗಾ ಸಮಿತಿ, ಅಲ್ಪಸಂಖ್ಯಾಕ ವ್ಯವಹಾರಗಳ ಸಚಿವಾಲಯ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ASI) ಪ್ರತಿಕ್ರಿಯೆಯನ್ನು ಕೋರಿ ನೋಟಿಸ್ ಜಾರಿ ಮಾಡಿದೆ.

ದರ್ಗಾ ಸಮಿತಿಯ ಉನ್ನತ ಪ್ರತಿನಿಧಿಗಳು ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದು, ಅಜ್ಮೀರ್ ದರ್ಗಾದ ಖಾದಿಮರನ್ನು ಪ್ರತಿನಿಧಿಸುವ ಅಂಗವಾದ ಅಂಜುಮನ್ ಸೈಯದ್ ಝಡ್ಗಾನ್‌ನ ಕಾರ್ಯದರ್ಶಿ ಸೈಯದ್ ಸರ್ವರ್ ಚಿಶ್ತಿ ಅವರು ತನ್ನನ್ನು ಪ್ರಕರಣದಲ್ಲಿ ಕಕ್ಷಿದಾರರನ್ನಾಗಿ ಮಾಡಬೇಕು ಎಂದು ಹೇಳಿ, ”ದರ್ಗಾ ಅಲ್ಪಸಂಖ್ಯಾಕ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಬರುತ್ತದೆ ಮತ್ತು ASI ಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ” ಎಂದಿದ್ದಾರೆ.

“ಬಾಬರಿ ಮಸೀದಿ ಪ್ರಕರಣದ ನಿರ್ಧಾರವನ್ನು ಸಮುದಾಯವು ಒಪ್ಪಿಕೊಂಡಿದೆ ಮತ್ತು ಅದರ ನಂತರ ಏನೂ ಆಗುವುದಿಲ್ಲ ಎಂದು ನಾವು ನಂಬಿದ್ದೆವು, ಆದರೆ ದುರದೃಷ್ಟವಶಾತ್ ಇಂತಹ ಸಂಗತಿಗಳು ಮತ್ತೆ ಮತ್ತೆ ನಡೆಯುತ್ತಿವೆ. ಉತ್ತರ ಪ್ರದೇಶದ ಸಂಭಾಲ್ ಉದಾಹರಣೆ ನಮ್ಮ ಮುಂದಿದ್ದು ಇಂತಹದ್ದು ನಿಲ್ಲಬೇಕು” ಎಂದು ಸೈಯದ್ ಸರ್ವರ್ ಆಕ್ರೋಶ ಹೊರ ಹಾಕಿದ್ದಾರೆ.

ದರ್ಗಾ ಜಾಗದಲ್ಲಿ ಶಿವ ದೇವಾಲಯವಿತ್ತು
ಹಿಂದೂ ಸೇನೆಯ ಅಧ್ಯಕ್ಷ ವಿಷ್ಣು ಗುಪ್ತಾ ಅವರು ಅರ್ಜಿ ಸಲ್ಲಿಸಿ, ಹರ್ ಬಿಲಾಸ್ ಸರ್ದಾ ಅವರ ಪುಸ್ತಕವನ್ನು ಉಲ್ಲೇಖಿಸಿರುವ ‘ದರ್ಗಾ ಇರುವಲ್ಲಿ ಶಿವ ದೇವಾಲಯವಿದೆ’ ಎಂಬ ಹೇಳಿಕೆಯನ್ನು ಬೆಂಬಲಿಸಿದ್ದಾರೆ.ದರ್ಗಾಕ್ಕಿಂತ ಮೊದಲು ಇಲ್ಲಿ ಶಿವ ದೇವಾಲಯವಿತ್ತು ಎಂಬುದನ್ನು ಸಾಬೀತುಪಡಿಸುವ ಹಲವಾರು ಸಂಗತಿಗಳಿವೆ” ಎಂದು ಪ್ರತಿಪಾದಿಸಿದ್ದಾರೆ.

Advertisement

ದರ್ಗಾವನ್ನು ಶಿವಮಂದಿರ ಎಂದು ಘೋಷಿಸಿ, ದರ್ಗಾದ ಕಾರ್ಯಗಳನ್ನು ಶೂನ್ಯ ಮತ್ತು ಅನೂರ್ಜಿತ ಎಂದು ಘೋಷಿಸುವ ಕಾಯಿದೆ, ಪೂಜಾ ಹಕ್ಕುಗಳನ್ನು ನೀಡಬೇಕು ಮತ್ತು ಸ್ಥಳದ ವೈಜ್ಞಾನಿಕ ಸಮೀಕ್ಷೆ ನಡೆಸಲು ಎಎಸ್‌ಐಗೆ ನಿರ್ದೇಶನ ನೀಡಬೇಕು ಎಂದು ಗುಪ್ತಾ ಮನವಿ ಮಾಡಿದ್ದಾರೆ.

ತಾನು ಎರಡು ವರ್ಷಗಳ ಕಾಲ ಸಂಶೋಧನೆ ನಡೆಸಿದ್ದೇನೆ ಮತ್ತು ಮುಸ್ಲಿಂ ದಾಳಿಕೋರರು ಶಿವ ದೇವಾಲಯವನ್ನು ನಾಶಪಡಿಸಿನಂತರ ದರ್ಗಾವನ್ನು ನಿರ್ಮಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಪರ್ಷಿಯಾದ ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಚಿಶ್ತಿ ಅಜ್ಮೀರ್ ಅನ್ನು ತನ್ನ ಮನೆಯಾಗಿ ಮಾಡಿಕೊಂಡಿದ್ದರು.ಈ ದರ್ಗಾ ವನ್ನು ಮೊಘಲ್ ಚಕ್ರವರ್ತಿ ಹುಮಾಯೂನ್, ಸಂತನ ಗೌರವಾರ್ಥವಾಗಿ ನಿರ್ಮಿಸಿದ್ದ. ಮೊಘಲ್ ದೊರೆ ಅಕ್ಬರ್ ಪ್ರತಿ ವರ್ಷ ಅಜ್ಮೀರ್‌ಗೆ ಧಾರ್ಮಿಕ ಯಾತ್ರೆ ಮಾಡಿದ ಬಗ್ಗೆ ಉಲ್ಲೇಖವಿದೆ. ಷಹಜಹಾನ್ ಸಂಕೀರ್ಣದೊಳಗೆ ಮಸೀದಿಗಳನ್ನು ನಿರ್ಮಿಸಿದ್ದ ಎಂದು ಇತಿಹಾಸದಲ್ಲಿ ಉಲ್ಲೇಖವಿದೆ.

Advertisement

Udayavani is now on Telegram. Click here to join our channel and stay updated with the latest news.

Next