Advertisement

Dolly Dhananjay: ಹಲಗಲಿಗೆ ಧನಂಜಯ್‌ ಎಂಟ್ರಿ

10:54 AM Jul 09, 2024 | Team Udayavani |

ನಟ ಧನಂಜಯ್‌ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ಅದು “ಹಲಗಲಿ’. ಡಾರ್ಲಿಂಗ್‌ ಕೃಷ್ಣ ಈ ಚಿತ್ರದಲ್ಲಿ ನಟಿಸ  ಬೇಕಿತ್ತು. ಕಾರಣಾಂತರಗಳಿಂದ ಕೃಷ್ಣ ಆ ಚಿತ್ರದಲ್ಲಿ ನಟಿಸುತ್ತಿಲ್ಲ. ಈಗ ಈ ಜಾಗಕ್ಕೆ ಧನಂಜಯ್‌ ಬಂದಿದ್ದಾರೆ.

Advertisement

ಬ್ರಿಟಿಷರ ವಿರುದ್ಧ ಮೊದಲ ಗೆರಿಲ್ಲಾ ಯುದ್ಧ ಮಾಡಿದ ನಮ್ಮದೇ ರಾಜ್ಯದ ಹಲಗಲಿಯ ಊರಿನ ಬೇಡರ ಕುರಿತು ಕೇಳಿರಬಹುದು. ಈಗ ಆ ವೀರರ ಆಚಾರ- ವಿಚಾರ ಹಾಗೂ ಅವರ ಹೋರಾಟದ ಹೆಜ್ಜೆ ಗುರುತುಗಳನ್ನು ತೆರೆ ಮೇಲೆ ತರುವುದಕ್ಕೆ ಹೊರಟಿದ್ದಾರೆ

ನಿರ್ದೇಶಕ ಸುಕೇಶ್‌ ಡಿ. ಕೆ. ಅದ್ಧೂರಿ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಚಿತ್ರವನ್ನು ಬಳ್ಳಾರಿಯ ಕಲ್ಯಾಣ್‌ ಚಕ್ರವರ್ತಿ ಧೂಳಿಪಾಳ್ಳ ನಿರ್ಮಿಸುತ್ತಿದ್ದಾರೆ.  ಇತಿಹಾಸದ ನೆರಳಿನಲ್ಲಿ ಮೂಡಿ ಬರುತ್ತಿರುವ ಈ ಐತಿಹಾಸಿಕ ಚಿತ್ರಕ್ಕೆ ಇತ್ತೀಚೆಗಷ್ಟೆ ಮುಹೂರ್ತ ಆಗಿದೆ. ಮೈಸೂರಿನ ಲಲಿತ್‌ ಮಹಲ್‌ನಲ್ಲಿ ಚಿತ್ರಕ್ಕೆ ಮುಹೂರ್ತ ನಡೆದಿದೆ.

ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಯಲ್ಲಿ ಮೂಡಿ ಬರಲಿದೆ. ಕನ್ನಡದ ವಾಸುಕಿ ವೈಭವ್‌ ಸಂಗೀತ ಇದೆ. ವಿಕ್ರಮ್‌ ಮೋರ್‌ ಅವರ ಸಾಹಸ “ಹಲಗಲಿ’ ಚಿತ್ರಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next