Advertisement
ಹೊಸ ಬಸ್ ನಿಲ್ದಾಣದ ಆರಂಭ- ಅವಸಾನ: 90ರ ದಶಕದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಸಮೀಪದಲ್ಲಿ ಹೊಸ ಬಸ್ ನಿಲ್ದಾಣ ತಲೆ ಎತ್ತಿತು. ಇದು ಈ ಪ್ರದೇಶದ ಲ್ಯಾಂಡ್ ಮಾರ್ಕ್ ಸಹ ಆಗಿತ್ತು. ಬೆಂಗಳೂರು, ತುಮಕೂರು ಮೊದಲಾದ ಮಾರ್ಗಕ್ಕೆ ನಿಗದಿತ ಬಸ್, ಧರ್ಮಸ್ಥಳ, ಹೊರನಾಡು ಮೊದಲಾದ ಕ್ಷೇತ್ರಗಳ ದೂರದ ಮಾರ್ಗಗಳಿಗೆ ಹೊಸ ಬಸ್ ನಿಲ್ದಾಣದಿಂದಲೇ ಬಸ್ ಸಂಚರಿಸುತ್ತಿದ್ದವು. ವಿದ್ಯಾರ್ಥಿಗಳ ಹಾಗೂ ಉದ್ಯೋಗಿಗಳ ಬಸ್ ಪಾಸ್ ಮಾಡಿಸಬೇಕಾದರೂ ಇಲ್ಲಿಗೆ ಬರಬೇಕಿತ್ತು. ನಂತರ ಬಸ್ ನಿಲ್ದಾಣದ ಸಮೀಪದಲ್ಲಿಯೇ ಬಸ್ ಡಿಪೋ ಆರಂಭವಾಯಿತು.
Related Articles
Advertisement
ಈಗಿರುವ ಹಳೆ ಬಸ್ ನಿಲ್ದಾಣದಲ್ಲಿ ನಗರಸಭೆಗೆ ಸೇರಿದ ಕೊಂಗಾಡಿಯಪ್ಪ ಬಸ್ ನಿಲ್ದಾಣ ಒಂದು ಭಾಗ ವಾದರೆ, ಸರ್ಕಾರಿ ಬಸ್ ನಿಲ್ದಾಣ ಇನ್ನೊಂದು ಭಾಗದಲ್ಲಿದೆ. ಕೊಂಗಾಡಿಯಪ್ಪ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ಸಂಚಾರ ಹೆಚ್ಚಾಗಿದೆ. ಇನ್ನು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸಂಸ್ಥೆ ಬಸ್ ಮಾತ್ರ ನಿಲುಗಡೆಗೆ ಅವಕಾಶವಿದೆ. ಇನ್ನು ಬಿಎಂಟಿಸಿ ಬಸ್‌ಗೆ ಸೂಕ್ತ ಜಾಗವಿಲ್ಲದೇ ರಸ್ತೆ ಬದಿಯಲ್ಲಿಯೋ ಕೊಂಗಾಡಿಯಪ್ಪ ಬಸ್ ನಿಲ್ದಾಣದ ಒಂದು ಭಾಗದಲ್ಲಿಯೋ ನಿಂತಿರುತ್ತವೆ. ಕೊಂಗಾಡಿಯಪ್ಪ ಬಸ್ ನಿಲ್ದಾಣದಲ್ಲಿ ಪ್ರಯಾಣಿ ಕರು ಕುಳಿತುಕೊಳ್ಳುತ್ತಿದ್ದ ಕುರ್ಚಿ ತೆಗೆದುಹಾಕಲಾಗಿದೆ. ಬಸ್ ಶೆಲ್ಟರ್ ಸುತ್ತಮುತ್ತ ಮಲ ಮೂತ್ರ ವಿಸರ್ಜಿಸ ಲಾಗುತ್ತಿದೆ. ಇಲ್ಲಿ ಕುಡುಕರ ಹಾಗೂ ಕಿಡಿಗೇಡಿಗಳ ತೊಂದರೆಯೂ ಇದೆ. ಕೊಂಗಾಡಿಯಪ್ಪ ಬಸ್ ನಿಲ್ದಾ ಣದಲ್ಲಿ ಬಿಎಂಟಿಸಿ ಬಸ್ ನಿಲುಗಡೆ ಮಾಡಿ ಸೌಕರ್ಯಕ್ಕೆ ಒತ್ತು ನೀಡಬೇಕಿದೆ ಎನ್ನುತ್ತಾರೆ ಪ್ರಯಾಣಿಕರು.
ಹೊಸ ಬಸ್ ನಿಲ್ದಾಣ ಕೂಡಲೇ ನವೀಕರಿಸಿ :
ವೇಗವಾಗಿ ಬೆಳೆಯುತ್ತಿರುವ ನಗರಕ್ಕೆ ನಗರ ಸಾರಿಗೆ ಬಸ್ ಸೇವೆ ಅಗತ್ಯ ಇದೆ. ಅಂದು ನಿರ್ಮಾಣಗೊಂಡ ಕೆಎಸ್‌ಆರ್‌ಟಿಸಿ ಹೊಸ ಬಸ್ ನಿಲ್ದಾಣದಲ್ಲಿ ಖಾಸಗಿ ಪೆಟೊ›àಲ್ ಮತ್ತು ಡೀಸೆಲ್ ಬಂಕ್ ತೆರೆಯಲು ಉದ್ದೇಶಿಸಲಾಗಿದೆ. ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಈ ಬಸ್ ನಿಲ್ದಾಣದಿಂದ ನಗರ ಸಾರಿಗೆ ಸೇರಿ ಗ್ರಾಮೀಣ ಪ್ರದೇಶಗಳ ಕಡೆಗೆ ಸಂಚರಿಸುವ ಬಸ್‌ಗಳ ಸೇವೆ ಪ್ರಾರಂಭಿಸಬೇಕು. ಬಸ್ ನಿಲ್ದಾಣ ಖಾಸಗಿ ವ್ಯಕ್ತಿಗಳ ಸ್ವತ್ತಾಗಲು ಅವಕಾಶ ನೀಡಬಾರದು, ಇದರಿಂದ ಗ್ರಾಮಾಂತರ ರೈತರು, ವಿದ್ಯಾರ್ಥಿಗಳು ಈ ಭಾಗದಲ್ಲಿನ ಕಾಲೇಜು, ಈ ಬಗ್ಗೆ ಬಸ್ ಡಿಪೋ ವ್ಯವಸ್ಥಾಪಕ ಸಂತೋಷ್‌ರಿಗೆ ಮನವಿ ಸಲ್ಲಿಸಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಬಣದ ಅಧ್ಯಕ್ಷ ಬಿ.ಎಸ್.ಚಂದ್ರಶೇಖರ್, ಕಾರ್ಯದರ್ಶಿ ರಮೇಶ್ ತಿಳಿಸಿದ್ದಾರೆ.
ಮೇಲಧಿಕಾರಿಗಳ ಗಮನಕ್ಕೆ ತರುವೆ:
ಬಸ್ ನಿಲ್ದಾಣಗಳಲ್ಲಿ ಪೆಟ್ರೋಲ್ ಬಂಕ್ ಅಥವಾ ಯಾವುದೇ ವಾಣಿಜ್ಯ ಉದ್ದೇಶದ ಮಳಿಗೆ ತೆರೆಯುವ ನಿರ್ಧಾರವನ್ನು ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿ ಅಧಿಕಾರಿಗಳು ನಿರ್ಧರಿಸುತ್ತಾರೆ. ಇನ್ನು ಒಂದು ನಗರಕ್ಕೆ 2 ಬಸ್ ನಿಲ್ದಾಣ ಮಂಜೂರು ಮಾಡಲು ತಾಂತ್ರಿಕ ತೊಡಕಿದೆ. ಇದರಿಂದ ಜನರಿಗೆ ಬಸ್ ನಿಲ್ದಾಣಗಳ ಬಗ್ಗೆ ಗೊಂದಲವೂ ಉಂಟಾಗುತ್ತದೆ. ಪೆಟ್ರೋಲ್ ಬಂಕ್ ಸ್ಥಾಪನೆಗೆ ಇರುವ ವಿರೋಧದ ಕುರಿತು ಇಲಾಖೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ದೊಡ್ಡಬಳ್ಳಾಪುರ ಡಿಪೋ ವ್ಯವಸ್ಥಾಪಕರಾದ ಸಂತೋಷ್ “ಉದಯವಾಣಿ’ಗೆ ತಿಳಿಸಿದ್ದಾರೆ.
ಹೊಸ ಬಸ್ ನಿಲ್ದಾಣಕ್ಕೆ ಮತ್ತೆ ಚಾಲನೆ ದೊರಕುವುದೋ ಇಲ್ಲವೋ ಬೇರೆ ವಿಚಾರ. ಆದರೆ, ಇರುವ ಬಸ್ ನಿಲ್ದಾಣಗಳನ್ನು ಸುಸಜ್ಜಿತವಾಗಿರುವಂತೆ ಮಾಡಿ, ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕಿದೆ.-ನಟರಾಜ್, ನೇತ್ರಾ, ಸಂದೀಪ್, ಪ್ರಯಾಣಿಕರು
– ಡಿ.ಶ್ರೀಕಾಂತ