Advertisement

ಪ್ಲಾಸ್ಟಿಕ್‌ ಧ್ವಜ ಬಳಸಬೇಡಿ: ಕೇಂದ್ರ ಸಲಹೆ

07:00 AM Jan 10, 2018 | Team Udayavani |

ಗಣರಾಜ್ಯ ದಿನ ಸಮೀಪಿಸುತ್ತಿರುವಂತೆಯೇ ಪ್ಲಾಸ್ಟಿಕ್‌ನಿಂದ ತಯಾರಿಸಲಾದ ರಾಷ್ಟ್ರ ಧ್ವಜವನ್ನು ಯಾರೂ ಬಳಸಬೇಡಿ ಎಂದು ದೇಶದ ನಾಗರಿಕರಿಗೆ ಕೇಂದ್ರ ಗೃಹ ಸಚಿವಾಲಯ ಸಲಹೆ ನೀಡಿದೆ. ಈ ಕುರಿತು ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ರವಾನಿಸಿರುವ ಗೃಹ ಇಲಾಖೆ, ಎಲ್ಲರೂ ಧ್ವಜ ಸಂಹಿತೆ ಪಾಲಿಸುವಂತೆ ನೋಡಿಕೊಳ್ಳುವಂತೆ ತಿಳಿಸಿದೆ. “ರಾಷ್ಟ್ರಧ್ವಜವು ದೇಶದ ಜನರ ಭರವಸೆ ಮತ್ತು ಆಶಯ ಪ್ರತಿನಿಧಿಸುವಂಥದ್ದು. ಹಾಗಾಗಿ, ಅದನ್ನು ಗೌರವಿಸ ಬೇಕಾದ್ದು ಮುಖ್ಯ. ಅನೇಕ ಸಂದರ್ಭಗಳಲ್ಲಿ ಕಾಗದದ ಧ್ವಜಗಳ ಜೊತೆಗೆ ಪ್ಲಾಸ್ಟಿಕ್‌ ಧ್ವಜಗಳೂ ಬಳಕೆಯಾಗುತ್ತಿರುವುದು ಗೊತ್ತಾಗಿದೆ.ಅವುಗಳನ್ನು ಸರಿಯಾಗಿ ವಿಲೇವಾರಿ ಮಾಡದೇ ಇದ್ದರೆ, ಧ್ವಜದ ಘನತೆಯನ್ನು ಅಗೌರವಿಸಿದಂತಾಗುತ್ತದೆ. ಹೀಗಾಗಿ, ಪ್ರಮುಖ ರಾಷ್ಟ್ರೀಯ, ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳಲ್ಲಿ ಕಾಗದದ ಧ್ವಜವನ್ನೇ ಬಳಸಬೇಕೇ ವಿನಾ ಪ್ಲಾಸ್ಟಿಕ್‌ ಧ್ವಜ ಬಳಸಬಾರದು,’ ಎಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next