Advertisement

ಸರಕಾರಿ ಸವಲತ್ತು ಪಡೆಯಲು ಕೀಳರಿಮೆ ಬೇಡ: ಮೌನೇಶ

03:49 PM Apr 26, 2017 | Team Udayavani |

ವಿಟ್ಲ : ಸರಕಾರಿ ಸವಲತ್ತುಗಳನ್ನು ಪಡೆಯಲು ಯಾವುದೇ ರೀತಿಯ ಕೀಳರಿಮೆ ಬೇಡ. ಅದನ್ನು ಸದುಪಯೋಗ ಪಡಿಸಿಕೊಳ್ಳುವುದರ ಜೊತೆಗೆ ನಮ್ಮತನವನ್ನೂ ಮೆರೆದಾಗ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ ವಿಶ್ವಕರ್ಮ ಹೇಳಿದರು.

Advertisement

ಅವರು ವಿಟ್ಲ ಕಾನತ್ತಡ್ಕದ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಮಿತಿಯ ವಾರ್ಷಿಕೋತ್ಸವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ವಿಶ್ವಕರ್ಮ ಸಮುದಾಯ ಅತ್ಯಂತ ಪ್ರತಿಭಾನ್ವಿತರೆಂದು ಗುರುತಿಸಿಕೊಂಡಿದ್ದಾರೆ. ಆದರೂ ಇನ್ನೂ ಕೀಳರಿಮೆಯ ಸ್ವಭಾವ ಪ್ರತಿಭೆಗಳನ್ನು ಕಟ್ಟಿಹಾಕುತ್ತಿವೆ. ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಬೇಕು. ಸರ್ಕಾರ ವಿಶ್ವಕರ್ಮ ಅಭಿವೃದ್ಧಿ ನಿಗಮ ಸ್ಥಾಪಿಸುವ ಮೂಲಕ ವಿಶ್ವಕರ್ಮ ಸಮುದಾಯಕ್ಕೆ ಗೌರವ ನೀಡಿದ್ದು, ಆ ಮೂಲಕ ಅನೇಕ ಸೌಲಭ್ಯಗಳನ್ನು ಪಡೆಯಬೇಕಿದೆ ಎಂದರು.

ಅಳಿಕೆ ಗ್ರಾ.ಪಂ.ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಎಲ್ಲಾ ಸಮುದಾಯದವರಿಗೂ ವಿಶ್ವಕರ್ಮ ಸಮುದಾಯ ಅಗತ್ಯವಾಗಿ ಬೇಕಾದವರಾಗಿದ್ದು, ಕಾನತ್ತಡ್ಕದ ಸಂಘಟನೆ ಮಾದರಿಯಾದ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದರು.

ವಿಶ್ವಕರ್ಮ ಸಮಾಜ ಸೇವಾ ಸಮಿತಿ ಅಧ್ಯಕ್ಷ ಬಾಲಕೃಷ್ಣ ಆಚಾರ್ಯ ಉಬರಡ್ಕ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ಥಳದಾನಿ ಗಣಪತಿ ಆಚಾರ್ಯ ಕಾನತ್ತಡ್ಕ, ಸಮಿತಿಯ ಗೌರವ ಮಾರ್ಗದರ್ಶಕ  ಸಂತೋಷ್‌ ಪುರೋಹಿತ್‌ ದಿಡುಪೆ, ಸಮಿತಿಯ ಸಂಚಾಲಕ ನಾರಾಯಣ ಆಚಾರ್ಯ, ಕೂಡುವಳಿಕೆ ಮೊಕ್ತೇಸರ ಜಗನ್ನಾಥ ಆಚಾರ್ಯ ಕೂಟೇಲು, ಗೌರವಾಧ್ಯಕ್ಷ ಶ್ರೀನಿವಾಸ ಆಚಾರ್ಯ ಲಕ್ಷ್ಮೀ ಕೋಡಿ, ಉಪಾಧ್ಯಕ್ಷ ರಾಮ ಆಚಾರ್ಯ ಎರುಂಬು ಉಪಸ್ಥಿತರಿದ್ದರು.

Advertisement

ಸುಂದರ ಆಚಾರ್ಯ ಸ್ವಾಗತಿಸಿದರು. ಶ್ರೀಪತಿ ಆಚಾರ್ಯ ಆಶಯಗೀತೆ ಹಾಡಿದರು. ಜಯಪ್ರಕಾಶ್‌ ಆಚಾರ್ಯ  ಎರುಂಬು ವರದಿವಾಚಿಸಿ, ಹರಿಪ್ರಸಾದ್‌ ಆಚಾರ್ಯ ವಂದಿಸಿದರು. ಪರಮೇಶ್ವರ ಆಚಾರ್ಯ ಮಂಕುಡೆ ಕಾರ್ಯಕ್ರಮ ನಿರ್ವಹಿಸಿದರು.
 

Advertisement

Udayavani is now on Telegram. Click here to join our channel and stay updated with the latest news.

Next