Advertisement

ದೀಪಾವಳಿಗೆ ಅಯೋಧ್ಯೆಯಲ್ಲಿ 12 ಲಕ್ಷ ದೀಪ

09:36 PM Nov 01, 2021 | Team Udayavani |

ಅಯೋಧ್ಯೆ: ದೀಪಾವಳಿಯ ದಿನ ಅಯೋಧ್ಯೆಯಲ್ಲಿ 12 ಲಕ್ಷ ದೀಪಗಳನ್ನು ಬೆಳಗಿಸಿ ದಾಖಲೆ ನಿರ್ಮಿಸಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ.

Advertisement

ಇದೇ ಸಮಯದಲ್ಲಿ ಕರ್ನಾಟಕ ಸೇರಿ ಹಲವು ಜಿಲ್ಲೆಗಳ ಕಲಾ ತಂಡಗಳು ನಗರದಲ್ಲಿ ರಾಮ್‌ ಲೀಲಾ ನಡೆಸಲಿವೆ.

ಅಯೋಧ್ಯೆಯಲ್ಲಿ ನ.1ರಿಂದ 5ರವರೆಗೆ 5 ದಿನಗಳ ಕಾಲ ದೀಪಾವಳಿ ಆಚರಣೆ ನಡೆಸಲಾಗುವುದು. 3ರಂದು ಸರಯೂ ನದಿ ದಡದಲ್ಲಿ 9 ಲಕ್ಷ ಹಣತೆ ಹಾಗೂ ನಗರದ ವಿವಿಧ ಭಾಗಗಳಲ್ಲಿ 3 ಲಕ್ಷ ದೀಪಗಳನ್ನು ಸಂಜೆ 6ರಿಂದ 6.30ರವರೆಗೆ ಬೆಳಗಿಸಲಾಗುವುದು.

ಕರ್ನಾಟಕ, ಜಮ್ಮು ಮತ್ತು ಕಾಶ್ಮೀರ, ಗುಜರಾತ್‌, ಅಸ್ಸಾಂ, ಪಶ್ಚಿಮ ಬಂಗಾಳದ ಕಲಾ ತಂಡಗಳು ರಾಮ್‌ ಲೀಲಾ ಪ್ರದರ್ಶನ ನೀಡಲಿವೆ. ಅವುಗಳ ಜೊತೆ ಶ್ರೀಲಂಕಾದ ತಂಡವೂ ರಾಮ್‌ಲೀಲಾ ಪ್ರದರ್ಶನ ನೀಡಲಿದೆ.

ಇದನ್ನೂ ಓದಿ:2 ತೈಲ ಕ್ಷೇತ್ರಗಳ ಶೇ.60 ಷೇರು ವಿದೇಶಿ ಕಂಪನಿಗಳಿಗೆ ಮಾರಾಟ?

Advertisement
Advertisement

Udayavani is now on Telegram. Click here to join our channel and stay updated with the latest news.

Next