ರಾಜಸ್ಥಾನ: ಕಳೆದ ಸೋಮವಾರ(ಡಿ.23) ರಾಜಸ್ಥಾನದ ಕೊಟ್‌ಪುಟ್ಲಿಯಲ್ಲಿ ತಂದೆಯ ಜೊತೆ ತೋಟಕ್ಕೆ ಹೋಗಿದ್ದ ಮೂರೂ ವರ್ಷದ ಬಾಲಕಿ ಆಟವಾಡುತ್ತಿದ್ದ ವೇಳೆ ಆಯತಪ್ಪಿ ಕೊಳವೆ ಬಾವಿಗೆ ಬಿದ್ದಿದ್ದು ಇಂದಿಗೆ ಆರು ದಿನಗಳಾಗಿವೆ ಬಾಲಕಿ ಚೇತನಾಳ ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ.
700 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಬಾಲಕಿ ಸುಮಾರು 150 ಅಡಿ ಆಳದಲ್ಲಿ ಸಿಲುಕಿದ್ದು ರಕ್ಷಣಾ ತಂಡ ಬಾಲಕಿಯ ರಕ್ಷಣೆಗೆ ನಿರಂತರ ಪ್ರಯತ್ನ ನಡೆಸುತ್ತಿದ್ದೆ ಈ ನಡುವೆ ಬಾಲಕಿಯ ತಾಯಿ ಧೋಲಿ ದೇವಿ ಹೇಗಾದರೂ ಮಾಡಿ ಕೊಳವೆ ಬಾವಿಯಲ್ಲಿ ಸಿಲುಕಿರುವ ತನ್ನ ಮೂರೂ ವರ್ಷದ ಬಾಲಕಿಯನ್ನು ಸುರಕ್ಷಿತವಾಗಿ ಹೊರ ತೆಗೆಯುವಂತೆ ಅಧಿಕಾರಿಗಳ ಮುಂದೆ ತನ್ನ ಅಳಲನ್ನು ತೋಡಿಕೊಂಡಿದ್ದಾರೆ.
ಆರು ದಿನಗಳನಿಂದ ರಕ್ಷಣಾ ತಂಡ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದು ಬಾಲಕಿಯ ಪೋಷಕರು ತನ್ನ ಮಗಳು ಸುರಕ್ಷಿತವಾಗಿ ಮೇಲೆ ಬರಲಿ ಎಂದು ಇದ್ದ ದೇವರಲ್ಲಿ ಹರಕೆ ಹೊತ್ತಿದ್ದಾರೆ ಅಲ್ಲದೆ ಅಧಿಕಾರಿಗಳ ಬಳಿ ಕೈ ಮುಗಿದು ಮಗಳನ್ನು ಹೇಗಾದರು ಮಾಡಿ ಉಳಿಸಿ ಕೊಡಿ, ಆರು ದಿನಗಳಿಂದ ನನ್ನ ಮಗಳು ಅನ್ನ ನೀರು ಇಲ್ಲದೆ ಕೊಳವೆ ಬಾವಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾಳೆ ಅದೇ ಜಿಲ್ಲಾಧಿಕಾರಿಗಳ ಮಗಳಾಗಿದ್ದಾರೆ ರಕ್ಷಣಾ ಕಾರ್ಯ ಇಷ್ಟು ವಿಳಂಬ ಮಾಡುತ್ತಿದ್ದರೇ ? ಎಂದು ಪ್ರಶ್ನೆ ಮಾಡಿದ್ದಾರೆ, ದಯವಿಟ್ಟು ಆದಷ್ಟು ಬೇಗ ಮಗಳನ್ನು ರಕ್ಷಿಸಿ ಹೊರಕ್ಕೆ ತನ್ನಿ ಎಂದು ಗೋಳಾಡಿದ್ದಾರೆ.
ಇನ್ನು ಬಾಲಕಿ ಸುರಕ್ಷಿತವಾಗಿ ಹೊರ ಬರಲಿ ಎಂದು ದೇವಸ್ಥಾನಗಳಲ್ಲಿ ಗ್ರಾಮಸ್ಥರು ಪೂಜೆ ಸಲ್ಲಿಸುತ್ತಿದ್ದಾರೆ,
ಈ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಕಲ್ಪನಾ ಅಗರ್ವಾಲ್ ಸೋಮವಾರ ಬಾಲಕಿ ಕೊಳವೆ ಬಾವಿಗೆ ಬಿದ್ದಿದ್ದು ಈ ಸಂದರ್ಭ ರಕ್ಷಣಾ ತಂಡ ನಾನಾ ರೀತಿಯಲ್ಲಿ ಬಾಲಕಿಯನ್ನು ಮೇಲಕ್ಕೆತ್ತುವ ಪ್ರಯತ್ನ ನಡೆಸಿತು ಆದರೆ ಕೊನೆಗೆ ಅದು ವಿಫಲವಾಯಿತು ಆ ಬಳಿಕ ಬುಧವಾರದಿಂದ ರಕ್ಷಣಾ ತಂಡ ಬಾಲಕಿ ಇರುವ ಸ್ಥಳಕ್ಕೆ ಸಮಾನಾಂತರವಾಗಿ ಎಲ್ ಆಕಾರದಲ್ಲಿ ಸುರಂಗ ಕೊರೆಯುವ ಕಾರ್ಯ ನಡೆಸುತ್ತಿದ್ದಾರೆ, ಈ ನಡುವೆ ಮಳೆ ಬಂದ ಕಾರಣ ಶುಕ್ರವಾರ ಕಾರ್ಯಾಚರಣೆಗೆ ಅಡ್ಡಿಯುಂಟಾಗಿದೆ ಇಂದು ಮತ್ತೆ ಸುರಂಗ ಕೊರೆಯುವ ಕಾರ್ಯ ನಡೆಸಲಾಗುತ್ತಿದೆ ರಕ್ಷಣಾ ತಂಡ ನಡೆಸುತ್ತಿರುವ ಕಾರ್ಯಾಚರಣೆಯನ್ನು ಕ್ಯಾಮೆರಾ ಮೂಲಕ ಪರಿಶೀಲಿಸಲಾಗುತ್ತಿದೆ ಜೊತೆಗೆ ಅವರಿಗೆ ಬೇಕಾದ ಉಪಕರಣಗಳನ್ನು ಒದಗಿಸುವ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಅರೋಗ್ಯ ಅಧಿಕಾರಿ ಮಾಹಿತಿ ನೀಡಿ ಮೂರೂ ವರ್ಷದ ಬಾಲಕಿ ಆಗಿರುವುದರಿಂದ ಬಾಲಕಿಗೆ ಆಹಾರ ನೀರು ಪೂರೈಸಲು ಕಷ್ಟ ಸಾಧ್ಯ ಹಾಗಾಗಿ ಅಂಬೆಗಾಲಿಡುವ ಮಗುವನ್ನು ಉಳಿಸುವ ಭರವಸೆ ಕಡಿಮೆಯಾಗುತ್ತಿದೆ ಆದರೂ ಮಗುವಿಗೆ ಬೇಕಾದ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದೆ ಕಾರ್ಯಾಚರಣೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Video: 2 ವಾರದಲ್ಲಿ ಮದುವೆಯಾಗಬೇಕಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ನದಿಗೆ ಜಿಗಿದಳು