Advertisement

ದೀಪಾವಳಿ ಹಬ್ಬ: ಸೋಂದಾ ಸ್ವರ್ಣವಲ್ಲೀ ‌ಮಹಾ ಸಂಸ್ಥಾನದ ಪ್ರಕಟಣೆ

06:47 PM Oct 20, 2022 | Team Udayavani |

ಶಿರಸಿ: ದೀಪಾವಳಿ ಹಬ್ಬವು ಅಕ್ಟೋಬರ್24, 25, 26ರಂದು ನಡೆಯಲಿದ್ದು, ಇದರ‌ ನಡುವೆ ಗ್ರಹಣ ಕೂಡ ಬಂದಿದೆ. ಅಮಾವಾಸ್ಯೆಯೆಂದು ಸೂರ್ಯಗ್ರಹಣ ಬಂದಿರುವುದರಿಂದ ಹಬ್ಬದ ಆಚರಣೆಯಲ್ಲಿ ಬಂದ ತೊಡಕನ್ನು ನಿವಾರಿಸುವ ದೃಷ್ಟಿಯಿಂದ ಬಹುಜನರ ಅಪೇಕ್ಷೆಯಂತೆ ಸೋಂದಾ ಸ್ವರ್ಣವಲ್ಲೀ ‌ಮಹಾ ಸಂಸ್ಥಾನವು ಗ್ರಹಣ ಕಾಲದ‌ ಆಚರಣೆ‌ ಕುರಿತು ಪ್ರಕಟಣೆ ನೀಡಿದೆ.

Advertisement

ಅ.24 ರಂದು ಬೂರೇಹಬ್ಬ, ನರಕಚತುರ್ದಶಿ. ಅಂದೇ ಬಲೀಂದ್ರನ ಸ್ಥಾಪನೆ ಮಾಡಿ ಪೂಜಾರಂಭ ಮಾಡಬೇಕು. ಮರುದಿನ 25 ರಂದು ಅಮಾವಾಸ್ಯೆ. ಅಂದು ಸೂರ್ಯಗ್ರಹಣ ಪ್ರಾಪ್ತವಾಗಿದ್ದು ಆ ನಿಮಿತ್ತ  ಉಪವಾಸಾದಿ ಆಚರಣೆಗಳಿರುವುದರಿಂದ ಈ ದಿನ ಮಾಡಬೇಕಾದ ಶ್ರೀಲಕ್ಷ್ಮೀ ಪೂಜೆಯನ್ನು ಹಿಂದಿನ ದಿನವೇ (24) ಮಾಡಬೇಕು ಎಂದು ತಿಳಿಸಲಾಗಿದೆ.

ಗ್ರಹಣದ ಸಮಯದಲ್ಲಿ ಸಂಪ್ರದಾಯದಂತೆ ಬಲೀಂದ್ರನಿಗೆ ತುಳಸಿಯನ್ನು ಇಟ್ಟು ಗ್ರಹಣ ಮೋಕ್ಷದ ನಂತರ ಅದನ್ನು ತೆಗೆದು ಮರುದಿನ ಪುನಃ ಪೂಜೆ ಮಾಡಿ ವಿಸರ್ಜನೆ ಮಾಡಬೇಕು. ದಿ.26 ಬುಧವಾರ ದೀಪಾವಳಿ ಹಬ್ಬವನ್ನು ಪ್ರ ತಿವರ್ಷದಂತೆ ಆಚರಣೆ ಮಾಡಬೇಕು ಎಂದು ತಿಳಿಸಿದೆ.

ಶುಭಕೃತ್ ಸಂವತ್ಸರದ ಆಶ್ವಿನ ಬಹುಳ ಅಮಾವಾಸ್ಯೆ ಅಕ್ಟೋಬರ್ 25 ರಂದು ಖಂಡಗ್ರಾಸ ಸೂರ್ಯಗ್ರಹಣ ಸಂಭವಿಸಲಿದೆ. ಗ್ರಹಣದ ಸ್ಪರ್ಶಕಾಲ ಸಂಜೆ 5-04ನಿ. ಮಧ್ಯಕಾಲ ಸಂಜೆ 5-48 ನಿ. ಮೋಕ್ಷಕಾಲ ಸಂಜೆ 6-03 ನಿ. ಆದ್ಯಂತ ಪುಣ್ಯಕಾಲ ಸಂಜೆ 59 ನಿಮಿಷವಾಗಿದೆ.
ಸ್ವಾತಿ ನಕ್ಷತ್ರದ ತುಲಾ ರಾಶಿಯಲ್ಲಿ ಸೂರ್ಯನಿಗೆ ಕೇತು ಗ್ರಹಣ ಉಂಟಾಗುತ್ತದೆ. ಹಿಂದಿನ ದಿನ ರಾತ್ರಿ ಬೆಳಗಿನ ಜಾವ 3-21 ರ ನಂತರ ಗ್ರಹಣ ಮೋಕ್ಷ ಪರ್ಯಂತ ಭೋಜನವನ್ನು ಮಾಡತಕ್ಕದ್ದಲ್ಲ. ಬಾಲರು ವೃದ್ಧರು ಆತುರರು, ಅಶಕ್ತರು, ರೋಗಿಗಳು 25 ರಂದು ಬೆಳಗ್ಗೆ 10-49 ನಿಮಿಷದ ನಂತರ ಭೋಜನ ಮಾಡತಕ್ಕದ್ದಲ್ಲ ಎಂದು ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಗ್ರಹಣ ಕಾಲದಲ್ಲಿ ಎಲ್ಲರೂ ಸ್ನಾನ ಮಾಡಿ ಯಥಾಶಕ್ತಿ ಜಪ, ತಪ, ದಾನಾದಿಗಳನ್ನು ಆಚರಿಸಿ ತತ್ಫಲಭಾಗಿಗಳಾಗಬೇಕು.ಶ್ರೀಗಂಗಾಧರೇಂದ್ರ‌ ಸರಸ್ವತೀ ಮಹಾಸ್ವಾಮೀಜಿ, ಮಠಾಧೀಶರು, ಸೋಂದಾ ಸ್ವರ್ಣವಲ್ಲೀ‌ ಸಂಸ್ಥಾನ

Advertisement
Advertisement

Udayavani is now on Telegram. Click here to join our channel and stay updated with the latest news.

Next