Advertisement
ನರ್ಮ್ ಬಸ್‌ಗಳಿಗೆ ಡಿಪಿಆರ್ ಮಾಡುವಾಗ ತೋರಿಸಿರುವ ಮಾರ್ಗ ಮತ್ತು ಈಗ ಬಸ್ ಹಾಕಿರುವ ಮಾರ್ಗ ಗಳಿಗೆ ಒಂದಕ್ಕೊಂದು ತಾಳೆ ಆಗುತ್ತಿಲ್ಲ. ಜಿಲ್ಲಾಡಳಿತ ಕಾನೂನು ಪ್ರಕಾರ ಪರವಾನಿಗೆ ನೀಡಲು ಹೊರ ಟರೆ ಸಚಿವರ ಒತ್ತಡದಿಂದ ಕಾನೂನು ಮುರಿದು ಪರವಾನಿಗೆ ನೀಡಿರುವುದು ನರ್ಮ್ ಬಸ್‌ಗಳು ನಿಲ್ಲಲು ಕಾರಣ. ಎಲ್ಲದಕ್ಕೂ ಕಾನೂನು ಇದೆ. ಕಾನೂನಿಗಿಂತ ಯಾರೂ ಮೇಲಲ್ಲ ಎಂದು ಬಲ್ಲಾಳ್ ಹೇಳಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕ, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಅಂದಿನ ಸಚಿವರಾದ ಅಭಯಚಂದ್ರ ಜೈನ್ ಹಾಗೂ ವಿನಯ ಕುಮಾರ ಸೊರಕೆಯವರಲ್ಲಿ ನಮ್ಮ ಸಮಸ್ಯೆ ಮತ್ತು ಗಂಭೀರತೆಯನ್ನು ಹೇಳಿದಾಗ ಸೂಕ್ತ ಪರಿಹಾರ ಹಾಗೂ ಸೌಹಾರ್ದ ಸ್ಪರ್ಧೆಗೆ ಅವಕಾಶ ಮಾಡಿಕೊಡುವ ಬಗ್ಗೆ ಭರವಸೆ ನೀಡಿದ್ದರು. ಈಗಿನ ಉಸ್ತುವಾರಿ ಸಚಿವರಲ್ಲಿ ಕೂಡ ನಮ್ಮ ಸಂಘದ ನಿಯೋಗ 8 ಬಾರಿ ಹೋಗಿ ಮನವರಿಕೆ ಮಾಡಿದ್ದರೂ ಯಾವುದೇ ಪರಿಹಾರ ಸಿಕ್ಕಿಲ್ಲ. ಒಂದು ಕಡೆ ನಮಗೆ ಭರವಸೆ ನೀಡಿ ಕೆಎಸ್ಸಾರ್ಟಿಸಿಯವರಿಗೆ ಹೊಸ ಪರವಾನಿಗೆಗೆ ಅರ್ಜಿ ಹಾಕಲು ಹೇಳುತ್ತಾರೆ. ಜಿಲ್ಲಾಧಿಕಾರಿಗಳಿಗೆ ಪರವಾ ನಿಗೆ ಮಂಜೂರು ಮಾಡಲು ಒತ್ತಡ ಹೇರುತ್ತಾರೆ. ಇದರ ಹಿಂದಿ ರುವ ಕಾರಣ ಏನು? ಕೋರ್ಟ್‌ಗೆ ಹೋಗಬಾರದು, ನಾನು ಎಲ್ಲವನ್ನೂ ಸರಿ ಮಾಡಿಕೊಡುತ್ತೇನೆ ಎಂದು ಉಸ್ತು ವಾರಿ ಸಚಿವರು ಹೇಳುತ್ತಾರೆ ವಿನಾ ಪರಿಹಾರ ಕೊಟ್ಟಿಲ್ಲ. ಆದ ಕಾರಣ ಕೋರ್ಟ್‌ಗೆ ಹೋಗಬೇಕಾಯಿತು. ಜಿಲ್ಲೆಯಲ್ಲಿ ಖಾಸಗಿ ಬಸ್ ಓಡಿಸಲೇ ಬಾರ ದೆಂಬ ಉದ್ದೇಶ ಯಾಕೆ ಎಂಬುದು ಅರ್ಥವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಕರಾವಳಿ ಜಿಲ್ಲೆಗಳಲ್ಲಿ ಕಳೆದ ನೂರು ವರ್ಷಗಳಿಂದ ಸಾರಿಗೆ ಸೇವೆ ನೀಡುತ್ತಿರುವ ಖಾಸಗಿ ಸಾರಿಗೆಯ ಹಿಂದೆ 6ರಿಂದ 7 ಸಾವಿರ ಕುಟುಂಬಗಳಿವೆ. ಒಂದೊಂದು ಬಸ್ಸನ್ನೇನಂಬಿರುವ ಅದೆಷ್ಟೋ ಕುಟುಂಬಗಳಿವೆ. ಅವರ ಪರಿಸ್ಥಿತಿ ಏನು? ಖಾಸಗಿ ಬಸ್‌ಗಳನ್ನು ತಪಾಸಣೆ ಮಾಡಲು ಆದೇಶ ನೀಡಿ ರುವ ವಿಚಾರ ಸ್ವಾಗತ. ಆದರೆ ಸಚಿವರು ಒಬ್ಬೊ
ಬ್ಬರಿಗೆ ಒಂದೊಂದು ಕಾನೂನು ಮಾಡದೇ ಎಲ್ಲರಿಗೂ ಒಂದೇ ಕಾನೂನು ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದಾರೆ.
Related Articles
– ಉಚ್ಚ ನ್ಯಾಯಾಲಯ ನರ್ಮ್ ಬಸ್‌ಗಳ ಪರವಾನಿಗೆ ರದ್ದು ಪಡಿಸಿದರೂಇಂದಿಗೂ ಬಸ್‌ಗಳು ನಿರಾತಂಕವಾಗಿ ಓಡುತ್ತಿವೆ. ಇದು ಕಾನೂನಿನ ಉಲ್ಲಂಘನೆಯಲ್ಲವೇ? ಸಾರಿಗೆ ಅಧಿಕಾರಿಗಳು ನಿಮಗೆ ಹೆದರಿ ಸುಮ್ಮನಿರುವುದು ಯಾಕೆ?
Advertisement
– ಕೆಎಸ್ಸಾರ್ಟಿಸಿಯವರು ನ್ಯಾಯಾಲಯದ ಆದೇಶ ಸಿಕ್ಕಿಲ್ಲ ಎನ್ನುತ್ತಾರೆ. ಆದರೆ ನ್ಯಾಯಾಲಯದಲ್ಲಿ ನ್ಯಾಯಾಧೀಶರು ಆದೇಶ ಓದುವಾಗ ಅವರ ವಕೀಲರು ಮತ್ತು ಅಧಿಕಾರಿಗಳು ಹಾಜರಿದ್ದೂ ಕೂಡ ಆದೇಶದ ಬಗ್ಗೆ ಗೊತ್ತಿಲ್ಲ ಎಂದರೆ ಸಚಿವರ ಕುಮ್ಮಕ್ಕು ಕಾರಣವಲ್ಲವೇ? ಆದೇಶ ಉಲ್ಲಂಘನೆಗೆ ಮಾಡಲು ಹೇಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ?
– ಕೇಂದ್ರ ಸರಕಾರ ನರ್ಮ್ ಬಸ್‌ಗಳಿಗೆ ಹಾಕಿರುವ ನಿಬಂಧನೆಗಳನ್ನು ಉಲ್ಲಂ ಸಿ ಜಿಲ್ಲಾಧಿಕಾರಿಗಳಿಗೆ ಒತ್ತಡದ ಪರವಾನಿಗೆ ಪಡೆದು ಖಾಸಗಿ ಬಸ್‌ಗಳನ್ನು ಮುಗಿಸುವ ಹುನ್ನಾರ ಯಾಕೆ? ನಗರ ಪರಿಮಿತಿ ಬಿಟ್ಟು ಉಡುಪಿಯಿಂದ ಶಿವಮೊಗ್ಗ, ಕಾರ್ಕಳ, ಭಟ್ಕಳ, ಕುಂದಾಪುರ, ಕೆಳಸುಂಕ, ಕೊಳಲಗಿರಿ ಪೆರ್ಡೂರು, ಹೆಬ್ರಿಗೆ ಬಸ್ ಹಾಕುವುದು ನಿಬಂಧನೆ ಉಲ್ಲಂಘನೆಯಲ್ಲವೆ?
– ಒಂದೇ ಸಮಯದಲ್ಲಿ ಬಸ್ ಓಡಿಸಿ ಅಪಘಾತ ಸಂಭವಿಸಿದರೆ ಯಾರು ಜವಾಬ್ದಾರಿ?
– ಪರವಾನಿಗೆ ಪಡೆದ ಬಸ್‌ಗಳು ಕೂಡ ಸಮಯಕ್ಕೆ ಸರಿಯಾಗಿ ಓಡುತ್ತಿಲ್ಲ. ಪರವಾನಿಗೆ ಮಾರ್ಗದಂತೆ ಓಡುತ್ತಿಲ್ಲ. ಇದರ ಬಗ್ಗೆ ಆರ್‌ಟಿಒ ಅಧಿಕಾರಿಗಳಿಗೆ ದೂರು ನೀಡಿದರೆ ಯಾವುದೇ ಕಾನೂನು ಕ್ರಮ ಇಲ್ಲ. ಕೂಡಲೇ ಉಸ್ತುವಾರಿ ಸಚಿವರ ಫೋನ್ ಬಂದು ವಿಷಯ ಅಲ್ಲೇಧೂಳು ತಿನ್ನುತ್ತದೆ.
– ಸಚಿವರ ಧೋರಣೆಯಿಂದ ಖಾಸಗಿ ಸಾರಿಗೆ ವಲಯ ಎಷ್ಟು ದಿನ ನಡೆಯಬಹುದು?