ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಡಿ. 20ರ ರಾತ್ರಿ ವೇಳೆ ಸ್ಕೂಟರ್ವೊಂದಕ್ಕೆ ಲಾರಿಯೊಂದು ಢಿಕ್ಕಿಯಾಗಿ ಸಹ ಸವಾರನಾಗಿದ್ದ ಬಾಗಲಕೋಟೆ ಜಿಲ್ಲೆ ಹುನಗುಂದದ ಹನುಮಂತ ನಾಗಪ್ಪ ಮಾದರ (20)ಎಂಬವರು ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ದ್ವಿಚಕ್ರ ವಾಹನ ಸವಾರ ರವಿ ಅವರಿಗೂ ಗಾಯಗಳಾಗಿದ್ದು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಹನುಮಂತ ಮಾದರ ಅವಿವಾಹಿತರಾಗಿದ್ದರು.
Advertisement
ಓವರ್ಟೇಕ್ ಭರಾಟೆಯಲ್ಲಿ ಕಾರೊಂದನ್ನು ತಪ್ಪಿಸಲು ಹೋಗಿ ಡಿವೈಡರ್ ಮೇಲೇರಿದ ಲಾರಿ ಇನ್ನೊಂದು ಬದಿಯಲ್ಲಿ ಬರುತ್ತಿದ್ದ ಸೂಟರ್ಗೆ ಢಿಕ್ಕಿಯಾಗಿ ಈ ಅಪಘಾತ ಸಂಭವಿಸಿತ್ತು. ಲಾರಿ ಚಾಲಕ ಅಬೂಬಕರ್ ವಿರುದ್ಧ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಡುಬಿದ್ರಿ: ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಪಡುಬಿದ್ರಿ ಜಂಕ್ಷನ್ನಲ್ಲಿ ಡಿ. 20ರ ಸಂಜೆಯ ವೇಳೆ ಹೆದ್ದಾರಿ ದಾಟುತ್ತಿದ್ದ ದಯಾನಂದ(62) ಎಂಬವರಿಗೆ ಈಚರ್ ಲಾರಿ ಢಿಕ್ಕಿಯಾಗಿ ತಲೆ, ಮುಖ, ಪಕ್ಕೆಲುಬು, ಕಾಲುಗಳಿಗೆ ಗಾಯವಾಗಿದೆ. ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಸ್ ಢಿಕ್ಕಿ: ಪಾದಚಾರಿಗೆ ಗಾಯ
ಪಡುಬಿದ್ರಿ: ಹೆದ್ದಾರಿ ದಾಟುತ್ತಿದ್ದ ಇನ್ನಾ ಗ್ರಾಮದ ಹೇಮಾವತಿ (62) ಎಂಬವರಿಗೆ ಡಿ. 20ರ ಸಂಜೆಯ ವೇಳೆ ತಡೆರಹಿತ ಬಸ್ಸೊಂದು ಢಿಕ್ಕಿಯಾಗಿ ಎಡಗಾಲಿಗೆ ತೀವ್ರತರ ಗಾಯಗಳಾಗಿವೆ. ಅವರನ್ನು ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.