Advertisement

ಸರ್ವರ್‌ ಸಮಸ್ಯೆಯಾದರೂ ಪಡಿತರ ವಿತರಣೆ

11:01 PM Feb 26, 2020 | Team Udayavani |

ಮಂಡ್ಯ: ಇನ್ನು ಮುಂದೆ ಸರ್ವರ್‌ ಸಮಸ್ಯೆಯಾದರೆ ಪಡಿತರ ಚೀಟಿದಾರರು ಪಡಿತರ ಪದಾರ್ಥಗಳು ಸಿಗುವುದಿಲ್ಲವೆಂದು ಆತಂಕ ಪಡಬೇಕಿಲ್ಲ. ಜಿಲ್ಲಾಧಿಕಾರಿಗಳ ಮೌಖೀಕ ಸೂಚನೆಯಂತೆ ಪಡಿತರ ಆಹಾರ ಪದಾರ್ಥಗಳ ವಿತರಣೆಗೆ ಸೂಚಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ವ್ಯವಹಾರಗಳ ಸಚಿವ ಕೆ.ಗೋಪಾಲಯ್ಯ ಹೇಳಿದರು.

Advertisement

ನಗರದಲ್ಲಿ ಮಾತನಾಡಿ, ಜನವರಿ ತಿಂಗಳಲ್ಲಿ ಆಹಾರ ಇಲಾಖೆಯ ಸರ್ವರ್‌ ಸಮರ್ಪಕವಾಗಿ ಕಾರ್ಯ ನಿರ್ವಹಿಸದ ಕಾರಣ ಪಾಸ್‌ ಮೂಲಕ ಪಡಿತರ ವಿತರಣೆ ಮಾಡಲು ಸಾಧ್ಯವಾಗಲಿಲ್ಲ. ಸರ್ವರ್‌ ಸಮಸ್ಯೆಯಿಂದ ಇ-ಕೆವೈಸಿ ಕಾರ್ಯ ನಿರ್ವಹಣೆ ವಿಳಂಬವಾಗಿತ್ತು. ಬಯೋಮೆಟ್ರಿಕ್‌ ಅಪ್‌ಡೇಟ್‌ ಮಾಡದಿದ್ದರಿಂದ ಸಮಸ್ಯೆ ಎದುರಾಗಿತ್ತು. ಈಗ ಆ ತಾಂತ್ರಿಕ ಸಮಸ್ಯೆಯನ್ನು ನಿವಾರಿಸಲಾಗಿದೆ.

ಫೆಬ್ರವರಿ ತಿಂಗಳ ಪಡಿತರ ವಿತರಣೆಯಲ್ಲಿ ಯಾವ ಸಮಸ್ಯೆಯೂ ಎದುರಾಗಿಲ್ಲ ಎಂದು ತಿಳಿಸಿದರು. ನ್ಯಾಯಬೆಲೆ ಅಂಗಡಿಗಳಲ್ಲಿ ಚಿಲ್ಲರೆ ಅಭಾವದ ನೆಪವೊಡ್ಡಿ ಕಳಪೆ ದರ್ಜೆಯ ಸೋಪುಗಳನ್ನು ಗ್ರಾಹಕರಿಗೆ ನೀಡುತ್ತಿರುವುದು ಕಂಡು ಬಂದಿದೆ. ಇದರ ಬಗ್ಗೆ ಪರಿಶೀಲನೆ ನಡೆಸಿ, ಮೈಸೂರು ಸ್ಯಾಂಡಲ್‌ ಸೋಪ್‌ ವಿತರಣೆಗೆ ತ್ವರಿತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next